ಹಲವು ಬಣ್ಣಕ್ಕೆ ತಿರುಗುವ ಗಣೇಶನ ಹೂ
ವಿಜಯಪುರ.ಸೆ೮:ಗಣೇಶನ ಹಬ್ಬದ ಸಮಯದಲ್ಲಿ ಋತುಮಾನಕ್ಕೆ ತಕ್ಕಂತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಣೇಶನ ಹೂ ಮುಂಜಾನೆ ಹುಟ್ಟಿದ ಸಮಯದಲ್ಲಿಂದ ರಾತ್ರಿವರೆಗೆ, ಬೆಳ್ಳನೆ ಬಣ್ಣದಿಂದ, ಹಳದಿ ನಂತರ ಕೆಂಪು ಬಣ್ಣಕ್ಕೆ, ತಿರುಗುವ ಈ ಹೂ ಪ್ರಕೃತಿಯ ಹಲವು ಆಶ್ಚರ್ಯಕರ ವಿಷಯಗಳಲ್ಲೊಂದಾಗಿದೆ.
ಪಟ್ಟಣದ ದೇವನಹಳ್ಳಿ ರಸ್ತೆಯ ಶೃತಿ ರವಿರವರ ತೋಟದಲ್ಲಿ ಅರಳಿದ ಈ ಹೂ ಸೂರ್ಯನ ಶಾಖಕ್ಕೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಿಸಿಕೊಂಡು ಹೋಗುವ ಗುಣ ಹೊಂದಿರುತ್ತದೆ ಎಂದು ತೋಟದ ಮಾಲೀಕ ರವಿ ತಿಳಿಸಿದರು.