ಅಭಿವೃದ್ಧಿ ಕಾರ್ಯಗಳಿಗೆ ಗುತ್ತಿಗೆದಾರರ ಸಹಕಾರ ಅಗತ್ಯ : ಶಂಕರ ಕಟಗಿ
ಸಂಜೆವಾಣಿ ವಾರ್ತೆ
ಹುಮನಾಬಾದ :ಸೆ.೮: ಯಾವುದೇ ಒಂದು ಅಭಿವೃದ್ಧಿ ಕಾರ್ಯದಲ್ಲಿ ಗುತ್ತಿಗೆದಾರರ ಸಹಕಾರ ವಿಲ್ಲದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕಷ್ಟ ಸಾಧ್ಯ ಎಂದು ಜೆಸ್ಕಾಂ ಎಇಇ ಶಂಕರ ಕಟಗಿ ಹೇಳಿದರು.
ಪಟ್ಟಣ ಖಾಸಗಿ ಸಭಾ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷ ದತ್ತಾತ್ರಿ ವರ್ಮಾ ಹಾಗೂ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಂಪನಿ ಹೊಸ ಯೋಜನೆಗಳ ಕುರಿತು ಆದೇಶ ಹೊರಡಿಸುತ್ತದೆ. ಆದರೇ ಕಾರ್ಯಾಂಗ ರೂಪದಲ್ಲಿ ಅವುಗಳನ್ನು ಅನುಷ್ಟಾನ ಗೊಳಿಸುವದನ್ನು ಗುತ್ತಿಗೆದಾರರೇ ನಿರ್ವಹಿಸುವ ಮೂಲಕ ಜನರಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ನಡೆಯುತ್ತದೆ ಎಂದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿ, ಗುತ್ತಿಗೆದಾರರು, ಅಧಿಕಾರಿಗಳಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರಲ್ಲಿ ಯಾರೊಬ್ಬರಿಲ್ಲದಿದ್ದರೂ ಜನಸಾಮಾನ್ಯರಿಗೆ ಸರಕಾರದಂದ ಯೋಜನೆ ತಲುಪಿಸಲು ಸಾಧ್ಯವಾಗುವುದಿಲ್ಲ. ತಕ್ಕಡಿ ಸಮನಾಗಿದ್ದರೇ ವ್ಯಾಪಾರ ಅನ್ನುವಂತೆ ಪರಸ್ಪರ ಭಾವನಾತ್ಮಕ, ವ್ಯವಹಾರಿಕವಾಗಿ ಒಂದು ಮನಸ್ಸಿನಿಂದ ಕರ್ತವ್ಯ ನಿರ್ವಹಿಸಿದಗಲೇ ಯಶಸ್ಸು ಸಾಧ್ಯ ಎಂದರು.
ಸಂಘದ ನೂತನ ಅಧ್ಯಕ್ಷ ದತ್ತಾತ್ರಿ ವರ್ಮಾ ಮಾತನಾಡಿ, ಗುತ್ತಿಗೆದಾರ ಸಹೋದ್ಯೋಗಿಗಳು ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಸಂತಸವಾಗಿದೆ. ಕೊಟ್ಟ ವಿಶ್ವಸ” ಉಳಿಸಿಕೊಳ್ಳಲು ಸರ್ವ ಸ್ನೇಹಿತರು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಅಧಿಕಾರ ಅವಧಿ ವರೆಗೆ ಕಪ್ಪುಚುಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸಲು ಪ್ರಾಮಾಣ ಕ ಪ್ರಯತ್ನಿಸುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುರುಶಾಂತ ವಾರದ, ದಯಾನಂದ ಪಾಟೀಲ್, ಸೂರ್ಯಕಾಂತ ಪಾಟೀಲ್, ಗಣಪತಿ, ರಮೇಶ ಸಂಗಮ. ಅನೀಲ ಪಾಟೀಲ್, ರಾಹುಲ್ ಹಿಜಾರೆ, ರಮೇಶಕುಮಾರ, ಗುತ್ತಿಗೆದಾರರ ಸಂಘದ ಸದಸ್ಯರಾದ ತಾಜೋದ್ದಿನ್ ಪಟೇಲ್, ಮಲ್ಲಿಕಾರ್ಜುನ ಚೀನಕೇರಿ, ವಿರೇಶ, ಪುಂಡ್ಲಿಕ್, ಭಾವನಾ, ಬಸವರಾಜಬಾಬು ನಿರ್ಣಾಕರ್, ಶಾಂತಕುಮಾರ ತಾಂಡೂರಿತೀನ, ಇಮ್ರಾನ್, ಜಾಫರ್, ಮಹಾದೇವ, ಪ್ರಕಾಶ ವರ್ಮಾಕರ್, ಸಂಜೀವಕುಮಾರ, ಚಂದ್ರಕಾತ ಚಿರಡೆ, ನಾಗಪ್ಪ ಇದ್ದರು.