ಗೌರಿ-ಗಣೇಶ ಹಬ್ಬ ಸಾಮರಸ್ಯದ ಸಂಕೇತ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.08:- ಹಿಂದು ಧÀರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶ ಹಬ್ಬ ಸಾಮರಸ್ಯದ ಸಂಕೇತವಾಗಿದ್ದು, ಈ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ದುರ್ಗ ಫೌಂಡೇಶನ್ ಅಧÀ್ಯಕ್ಷೆ ರೇಖಾ ಶ್ರೀನಿವಾಸ್ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರಿಗೆ ಸ್ವರ್ಣ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದ ಅವರು, ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನನ್ನು ಪೂಜಿಸುವುದು ಪದ್ಧತಿ. ಇಂತಹ ಪವಿತ್ರ ಪೂಜಾ ಸ್ಥಾನ ಪಡೆದುಕೊಂಡಿರುವ ಗಣಪತಿ ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕøತಿ ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದರು.
ನಂತರ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ನಗರಾಧÀ್ಯಕ್ಷೆ ರೇಣುಕಾ ರಾಜ್ ಮಾತನಾಡಿ, ಬಾಲಗಂಗಾಧÀರ ತಿಲಕ್ ಅವರು ಆಗಿನ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಸಂಘಟಿಸುವ ಉz್ದÉೀಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಅದರೆ ಪ್ರಸ್ತುತ ಹಿಂದೂ ಧÀರ್ಮದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವ ಅವಶ್ಯಕವಾಗಿದೆ. ನಮ್ಮ ಸಂಸ್ಕøತಿ ರP್ಷÀಣೆ ಮಾಡುವುದು ಮತ್ತು ಹಿಂದೂ ಕಾರ್ಯಕರ್ತರನ್ನು ಜಾಗೃತರನ್ನಾಗಿ ಮಾಡಲು ಇಂತಹ ಹಬ್ಬ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಲಾಯಿತು. ಈ ಸಂದರ್ಭ ಸಮೃದ್ಧಿ ವಾರ್ತಾಪತ್ರಿಕೆ ಸಂಪಾದಕರಾದ ಸಹನಗೌಡ, ನಟಿ ರೇಣುಕಾ, ಅಶ್ವಿನಿ ಗೌಡ, ಉಮೇಶ್, ರಶ್ಮಿ, ವಿಶ್ವ ಹಿಂದೂ ಪರಿಷತ್ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ, ಸೂರಜ್, ಸದಾಶಿವ್, ಸುರೇಶ್ ಇದ್ದರು.