ರಾಮನ ಅವತಾರದ ಗಣಪತಿ ಪ್ರತಿಷ್ಠಾಪನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.08:- ಗಡಿಜಿಲ್ಲೆ ಚಾಮರಾಜನಗರದ ಪ್ರತಿಷ್ಠಿತ ಶ್ರೀ ವಿದ್ಯಾಗಣಪತಿ ಮಂಡಳಿಯ ವತಿಯಿಂದ ಹಿಂದೂಪರ ಸಂಘಟನೆಗಳು ಈ ಬಾರಿ ಅಯೋಧ್ಯೆ ರಾಮನ ಅವತಾರದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಇದಕ್ಕೂ ಮುನ್ನ ಮಂಗಳವಾದ್ಯದಲ್ಲಿ ಗಣೇಶಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಯಿತು. ಹೆಚ್ಚು ಪೆÇಲೀಸ್ ಬಂದೋಬಸ್ತ್ ಇರುವುದರಿಂದ ಇದು ಪೆÇಲೀಸ್ ಗಣಪತಿ ಅಂಥಲೂ, ದೊಡ್ಡ ಗಣಪತಿ, ಆರ್‍ಎಸ್‍ಎಸ್ ಗಣಪತಿ ಅಂಥಲೂ ಈ ಗಣೇಶ ಜನಪ್ರಿಯತೆ ಗಳಿಸಿದೆ.
ಇನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೆÇಲೀಸ್ ಪ್ರತಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಷ್ಠಾಪನೆÉ ವೇಳೆ ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡು ಮೊದಲ ಪೂಜೆ ಮಾಡಿ ಗಮನ ಸೆಳೆದರು. ಈ ಬಾರಿಯೂ ಕೂಡ ಹಿಂದೂಪರ ಮುಖಂಡರು 27 ದಿನಗಳ ಕಾಲ ಪೂಜೆ, 7 ದಿನ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿಸಲು ತಯಾರಿ ಮಾಡಿಕೊಂಡಿದ್ದಾರೆ. ಕಳೆದ 62 ವಷರ್Àಗಳಿಂದ ವಿಜೃಂಭಣೆಯಿಂದ, ಸೌಹಾರ್ದತೆಯಿಂದ ಗಣೇಶ ಹಬ್ಬ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಕೂಡ ಅದ್ಧೂರಿಯಾಗಿ ಮತ್ತು ಸೌಹಾರ್ದತೆಯಿಂದ ಕೂಡಿರಲಿ ಎಂದು ಡಿಸಿ ಶಿಲ್ಪಾನಾಗ್ ಹೇಳಿದರು.
ಪ್ರತಿ ವಷರ್À ವೈವಿಧ್ಯಮಯ ಗಣಪ: ಪ್ರತಿ ವಷರ್À ಒಂದಲ್ಲಾ ಒಂದು ವೈವಿದ್ಯಮಯ ಗಣಪತಿ ಪ್ರತಿಷ್ಠಾಪನೆಗೆ ಗಡಿಜಿಲ್ಲೆ ಗಣಪತಿ ಹೆಸರುವಾಸಿಯಾಗಿದೆ. ಅದರಂತೆ ಈ ಬಾರಿಯೂ ಸರ್ಕಾರದ ಷರತ್ತುಬದ್ಧ ಅನುಮತಿಯಂತೆ ಕೈಯಲ್ಲಿ ಬಿಲ್ಲು ಹಾಗೂ ತ್ರಿಶೂಲ ಹಿಡಿದ ಅಯೋಧ್ಯೆ ರಾಮನ ಅವತಾರದ ಗಣಪತಿಯನ್ನು ಪ್ರತಿಷÁ್ಠಪಿಸಿದೆ ಶ್ರೀ ವಿದ್ಯಾಗಣಪತಿ ಮಂಡಳಿ.
ಕಳೆದ 62 ವರ್ಷಗಳಿಂದ ವಿಜೃಂಭಣೆಯಿಂದ ಗಣಪತಿ ಪ್ರತಿಷÁ್ಠಪಿಸಿ ಒಂದು ತಿಂಗಳ ಕಾಲ ಗಣೇಶೋತ್ಸವ ಆಚರಿಸುತ್ತಿದ್ದ ವಿದ್ಯಾಗಣಪತಿ ಮಂಡಳಿ ಈ ವಷರ್À ಸರ್ಕಾರದ ಮಾರ್ಗಸೂಚಿ ಆಚರಣೆಗೆ ಮುಂದಾಗಿದೆ. ಗಣಪತಿಯನ್ನು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ.
ಈ ಸಂದರ್ಭದಲ್ಲಿ ವಿದ್ಯಾಗಣಪತಿ ಮಂಡಳಿಯ ಮಂಡಳಿಯ ಗೌರವಾಧ್ಯಕ್ಷ ಗುರುನಾಥ್, ಗೌರವ ಕಾರ್ಯದರ್ಶಿ ಮಾದಣ್ಣ, ಕಾರ್ಯಾಧ್ಯಕ್ಷ ಮಹದೇವನಾಯ್ಕ, ಅಧ್ಯಕ್ಷ ಸುಂದರರಾಜ್, ಪ್ರಧಾನ ಕಾರ್ಯದರ್ಶಿ ಶಿವು ವಿರಾಟ್, ಮುಖಂಡರಾದ ಗಣೇಶ್ ದೀಕ್ಷಿತ್, ಬಾಲಸುಬ್ರಹ್ಮಣ್ಯ. ಮಂಜುನಾಥಗೌಡ, ಮನೋಜ್‍ಪಟೇಲ್, ಸಿ.ಎಂ. ಮಂಜುನಾಥ್, ಶಿವಣ್ಣ, ಮಾರ್ಕೆಟ್ ಕುಮಾರ್, ಸುರೇಶ್‍ನಾಯ್ಕ, ಮಹೇಶ್, ಎಸ್. ಕಾಂತರಾಜು, ಬಂಗಾರು ಸೇರಿದಂತೆ ಹಲವಾರು ಭಕ್ತರು ಹಾಜರಿದ್ದರು.