ಆಲಮೇಲದಲ್ಲಿ ಸಚಿವ ಶಿವಾನಂದ ಪಾಟೀಲರಿಂದ ಬೆಳ್ಳಿನಾಣ್ಯ ಬಿಡುಗಡೆ
ತಾಳಿಕೋಟೆ:ಸೆ.೮:ಆಲಮೇಲ ತಾಲೂಕಿನಲ್ಲಿಯ ದಿ.ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ೨೫ ವರ್ಷ ಸಾರ್ಥಕ ಸೇವೆಯಲ್ಲಿ ಮುನ್ನಡೆದಿದ್ದರಿಂದ ಬ್ಯಾಂಕಿನ ರಜತ ಮಹೋತ್ಸವ ಸಂಭ್ರಮಾಚರಣೆಯನ್ನು ಇದೇ ಸಪ್ಟೆಂಬರ ೧೫ ರವಿವಾರರಂದು ಆಲಮೇಲದಲ್ಲಿ ಆಚರಿಸಲು ಆಡಳಿತ ಮಂಡಳಿಯು ಸಜ್ಜಾಗಿದ್ದು ಈ ಸಂಭ್ರಮಾಚರಣೆಯಲ್ಲಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿಗಳಾದ ಬಾಲಶೀವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ದಿವ್ಯಸಾನಿಧ್ಯ ವಹಿಸಲು ನಿರ್ಧರಿಸಲಾಗಿದೆ ಎಂದು ದಿ.ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯಕಾರ್ಯ ನಿರ್ವಾಹಣ ಅಧಿಕಾರಿಯಾದ ನರೇಂದ್ರ ಆನಂದ ಬಾಸುತ್ಕರ ಅವರು ಹೇಳಿದರು.
ಶುಕ್ರವಾರರಂದು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ಸಂಭ್ರಮದ ಪಾವನ ಸಾನಧ್ಯದಲ್ಲಿ ಆಲಮೇಲದ ಶ್ರೀ ಗುರುಸಂಸ್ಥಾನ ಹೀರೆಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯರು ವಹಿಸಲಿದ್ದಾರೆ ಈ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನಗಳ ರಚನೆ ಹಾಗೂ ಪ್ರವಾಸ್ಯೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಕೆ.ಪಾಟೀಲ ಅವರು ನೇರವೇರೆಸಲಿದ್ದಾರೆಂದರು.
ಬೆಳ್ಳಿನಾಣ್ಯ ಬಿಡುಗಡೆ ಸಮಾರಂಭವನ್ನು ಕರ್ನಾಟಕ ಸರ್ಕಾರದ ಜವಳಿ ಮತ್ತು ಸಕ್ಕರೆ ಅಭಿವೃದ್ಧಿ ಕೃಷಿ ಮಾರುಕಟ್ಟೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಶಿವಾನಂದ ಪಾಟೀಲ ಅವರು ನೇರವೆರಿಸಲಿದ್ದಾರೆಂದು ಹೇಳಿದರು.
ಸಹಕಾರಿ ಪಿತಾಮಹರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಸನ್ಮಾನ್ಯ ಡಾ.ಎಂ.ಬಿ.ಪಾಟೀಲ ಅವರು ನೇರವೆರಿಸಲಿದ್ದಾರೆಂದು ಹೇಳಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ದಿ.ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ.ನ ಅಧ್ಯಕ್ಷರಾದ ಶಿವಕುಮಾರ.ಜಿ.ಗುಂದಗಿ ಅವರು ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಿಂದಗಿ ಶಾಸಕರಾದ ಮಾನ್ಯ ಅಶೋಕ ಎಮ್. ಮನಗೂಳಿ, ಇಂಡಿ ಶಾಸಕರಾದ ಮಾನ್ಯ ಯಶವಂತರಾಯಗೌಡ ಪಾಟೀಲ ಹಾಗೂ ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕ ನಿ. ಅಧ್ಯಕ್ಷರಾದ ಮಾನ್ಯ ಪ್ರಕಾಶ ಆಯ್.ತಪಶೆಟ್ಟಿ ಅವರು ಆಗಮಿಸಲಿದ್ದಾರೆಂದರು.
ವಿಶೇಷ ಆಹ್ವಾನಿತರಾಗಿ ವಿಜಯಪುರ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಎಸ.ಕೆ.ಭಾಗ್ಯಶ್ರೀ ಹಾಗೂ ಇಂಡಿಯ ಸಹಾಯಕ ನಿಬಂಧಕರು ಸಹಕಾರ ಸಂಘದ ಕೆ.ಎಚ.ವಡ್ಡರ ಆಗಮಿಸಲಿದ್ದಾರೆಂದು ಹೇಳಿದ ಬಾಸುತ್ಕರವರು ೧೯೭೦-೭೧ರ ದಶಕದಲ್ಲಿ ಆರ್ಥಿಕ ಸಿಂಚನೆ ನೀಡಲು ಈ ಬ್ಯಾಂಕನ್ನು ಸ್ಥಾಪಿಸಲಾಯಿತು ೧೯೯೮ರಲ್ಲಿ ಗದುಗಿನ ಜಗದ್ಗುರುಗಳಾದ ಲಿಂ.ಡಾ.ತೋAಟದ ಸಿದ್ದಲಿಂಗ ಮಹಾಸ್ವಾಮಿಗಳವರಿಂದ ಸ್ಥಾಪನೆಗೊಂಡ ಈ ಬ್ಯಾಂಕು ಅಧ್ಯಕ್ಷರ ಹಾಗೂ ಆಡಳಿತ ಮಂಡಳಿಯವರು ಹಾಗೂ ಶೇರುದಾರರು ಅಲ್ಲದೇ ಗ್ರಾಹಕರನ್ನು ಒಳಗೊಂಡು ಈ ರಜತ ಮಹೋತ್ಸವದ ಸಂಭ್ರಮಕ್ಕೆ ಮುಂದ್ದಾಗಿದ್ದೇವೆ ಕಾರಣ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿಗಳಾದ ತಾವು ಈ ಮಹಾ ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ತಾವು ಕೂಡ ಪಾವನ ಸಾನಿಧ್ಯ ವಹಿಸಬೇಕೆಂದು ಶ್ರೀ ಸಿದ್ದಲಿಂಗ ದೇವರಿಗೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಬಾಸುತ್ಕರವರು ವಿನಂತಿಸಿದರು.
ಈ ವಿಷಯಕ್ಕೆ ಸಂಬಧಿಸಿ ಉತ್ತರಿಸಿದ ಶ್ರೀ ಖಾಸ್ಗತೇಶ್ವÀರ ಮಠದ ಪಿಠಾಧಿಪತಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿ ಆಲಮೇಲ ತಾಲೂಕಿನ ದಿ.ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಘನತೆ ಗೌರವ ಕುರಿತು ನಾನು ಅರಿತಿರುವೆ ತಮ್ಮ ಎಲ್ಲರ ಆಡಳಿತಮಂಡಳಿಯವರ ಹಾಗೂ ಶೇರುದಾರರನ್ನು ಗ್ರಾಹಕರನ್ನು ಹಾಗೂ ತಮ್ಮ ಸಿಬ್ಬಂದಿ ಅವರನ್ನು ಕೂಡ ನೋಡುವಂತಹ ಅಪೇಕ್ಷಯು ಕೂಡಾ ನನ್ನದಾಗಿದೆ ನಾನೂ ತಪ್ಪದೇ ತಮ್ಮ ಬ್ಯಾಂಕಿನ ಸಂಭ್ರಮಾಚರಣೆAiÀiಲ್ಲಿ ಪಾಲ್ಗೋಳ್ಳುತ್ತೇನೆಂದು ಶ್ರೀಗಳು ಹೇಳಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ಥುವಾರಿ ವೇ.ಮುರಘೇಶ ವಿರಕ್ತಮಠ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಎಂ.ಎಸ್.ಸರಶೇಟ್ಟಿ ಹಾಗೂ ಖ್ಯಾತ ಔಷದ ವ್ಯಾಪಾರಿ ಸ್ವಾಂತತ್ರö್ಯ ಯೋಧ ಶಿವಲಿಂಗಪ್ಪ ಸಾಲಂಕಿಯವರ ಮೊಮ್ಮಗ ರಮೇಶ ಸಾಲಂಕಿ, ಮಹಾಂತೇಶ ಸರಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.