ಕಾರ್ಮಿಕರ ಹಕ್ಕೊತ್ತಾಯಕ್ಕಾಗಿ ಭಾರತ್ ಮುಕ್ತಿ ಮೋರ್ಚಾದಿಂದ ಬೊಬ್ಬೆ ಹೊಡೆದು ಪ್ರತಿಭಟನೆ
ಚಿಂಚೋಳಿ:ಸೆ.೮: ಕಾರ್ಮಿಕರ ಹಕ್ಕೊತ್ತಾಯಕ್ಕಾಗಿ ಚಿಂಚೋಳಿಯ ಹೊರವಲಯದ ಪೋಲಕಪಳ್ಳಿಯ ಮುಖ್ಯರಸ್ತೆಯಲ್ಲಿರುವ ದಿ ಮೇಟ್ರಿಕ್ಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ವಿದ್ಯುತ್ ತಯಾರಿಕೆ ಕಂಪನಿಯ ಮುಂದೆ ಭಾರತ್ ಮುಕ್ತಿ ಮೋರ್ಚಾ ಹೋರಾಟಗಾರ ಮಾರುತಿ ಬಿ.ಗಂಜಗಿರಿ ನೇತೃತ್ವದಲ್ಲಿ ಅಲ್ಲಿನ ಕಾರ್ಮಿಕರು ಬೊಬ್ಬೆ ಹೊಡೆದು ಪ್ರತಿಭಟಿಸಿದರು. ತಾಲ್ಲೂಕಿನ ಚಂದಾಪುರ ಪಟ್ಟಣದ ತಾಂಡೂರ್ ಕ್ರಾಸ್ ನಿಂದ ಪೋಲಕಪಳ್ಳಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ತಯಾರಿಕೆ ಘಟಕದವರೆಗೂ ಪಾದಯಾತ್ರೆಯನ್ನು ನಡೆಸಿದ ಸಂಘಟಕರು ಮತ್ತು ಕಾರ್ಮಿಕರು,
ಕಾರ್ಮಿಕರಿಗೆ ವಿದ್ಯುತ್ ತಯಾರಿಕೆ ಘಟಕದಲ್ಲಿ ಸುರಕ್ಷಾ ಸಾಮಾಗ್ರಿಗಳಿಲ್ಲದೆ ಪರದಾಡುವಂತಾಗಿದೆ. ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಇನ್ನಿತರ ಮೂಲ ಅವಶ್ಯಕ ಸೌಲಭ್ಯಗಳು ಕೂಡ ಇಲ್ಲದಂತಾಗಿದೆ. ಅಲ್ಲದೇ, ವಿದ್ಯುತ್ ತಯಾರಿಕೆ ಘಟಕದ ಬಾಯ್ಲರ್ ಗಳ ಬಳಿ ಹೊರಸೂಸುವಂತಹ ಮಾರಕ ಹೊಗೆ ಘಟಕದಲ್ಲೇ ಆವರಿಸುತ್ತಿದ್ದು, ಅದನ್ನು ಸಂಸ್ಕರಿಸಿ ಹೊರಗಡೆ ಬಿಡುವಂತಹ ವ್ಯವಸ್ಥೆಯಿಲ್ಲದೆ ಇರುವ ಕಾರಣದಿಂದಾಗಿ ಕಾರ್ಮಿಕರು ಉಸಿರಾಡಲು ತೆಗೆದುಕೊಳ್ಳುವ ಗಾಳಿಯೊಂದಿಗೆ ವಿಷಾನಿಲ ಬೆರೆತುಕೊಂಡು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಉಸಿರಾಡಲು ಕಷ್ಟಸಾಧ್ಯ ಎನಿಸುವಂತಾಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಂತೆ ಸರ್ಕಾರದ ಆದೇಶವಿದ್ದರೂ ಸಹ ಈ ಕಂಪನಿಯು ಕನಿಷ್ಠ ವೇತನವನ್ನು ನೀಡದೆಯೇ ನಿಗದಿತ ಸಮಯಕ್ಕಿಂತ ಹೆಚ್ಚು ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದಾರೆ.ಅಲ್ಲದೇ, ಇದನ್ನು ಕುರಿತು ಪ್ರಶ್ನೆ ಮಾಡಿದರೆ, ಅಂತಹ ಕಾರ್ಮಿಕರಿಗೆ ಕೆಲಸದಿಂದ ತೆಗೆದು ಹಾಕುತ್ತೇನೆ ಎನ್ನುವಂತಹ ಮಾನಸಿಕ ಹಿಂಸೆಗೆ ಗುರಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಮಹಮ್ಮದ್ ಗಫಾರ್ ಭೇಟಿ ನೀಡಿ ವಿದ್ಯುತ್ ತಯಾರಿಕೆ ಘಟಕವನ್ನು ವೀಕ್ಷಿಸಿ ಅಲ್ಲಿನ ವ್ಯವಸ್ಥಾಪಕರಿಗೆ ಕಾನೂನು ನಿಯಾಮವಳಿಗಳನ್ನು ಪಾಲನೆ ಮಾಡಲು ಮತ್ತು ಕಾರ್ಮಿಕರ ಹಿತ ರಕ್ಷಣೆ ಮಾಡುವಂತೆ ತಾಕೀತು ಮಾಡಿದರು. ಬಳಿಕ ಹೋರಾಟಗಾರರೊಂದಿಗೆ ಮಾತನಾಡಿದ ಅವರು, ಮಾಲಿನ್ಯ ಮಂಡಳಿ ಮತ್ತು ಇನ್ನಿತರ ಸಂಬAಧಪಟ್ಟ ಇಲಾಖೆಗಳ ಸಹಯೋಗದಲ್ಲಿ ಇದರ ಕುರಿತು ತನಿಖೆ ಮಾಡಲು ಸೂಚಿಸುತ್ತೇನೆ.ತನಿಖಾ ವರದಿಯಲ್ಲಿ ವಿದ್ಯುತ್ ಘಟಕವು ನಿಯಮಗಳನ್ನು ಮೀರಿರುವ ವರದಿ ಸಾಬೀತಾದರೆ ಮುಲಾಜಿಲ್ಲದೆ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭಾರತ್ ಮುಕ್ತಿ ಮೋರ್ಚಾದ ಹೋರಾಟಗಾರರಾದ ಗೋಪಾಲ್ ಗಾರಂಪಳ್ಳಿ, ಮೋಹನ್ ಐನಾಪುರ್, ಮೌನೇಶ ಗಾರಂಪಳ್ಳಿ ರಾಜಕುಮಾರ ಚಿಮ್ಮಇದ್ಲಾಯಿ, ಬಸವಸಾಗರ,ಮಹೇಶಕುಮಾರ,ಉಮೇಶ,ಶ್ರೀಮಂತ,ಪ್ರಶಾAತ,ನಾಗರಾಜ್ ಮತ್ತು ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರ ವಿದ್ಯುತ್ ಘಟಕದ ಕಾರ್ಮಿಕರು ಪಾಲ್ಗೊಂಡಿದ್ದರು.