ಹಿಂದು ಧರ್ಮ ಮಾನವೀಯ ಧರ್ಮವಾಗಿದೆ:ರುದ್ರಮುನಿ ಶಿವಾಚಾರ್ಯ ರಾಜೇಶ್ವರ
ಬೀದರ:ಸೆ.೮: ಹಿಂದು ಧರ್ಮ ಮಾನವೀಯ ಧರ್ಮವಾಗಿದೆ, ಇದು ಜಗತ್ತಿಗೆ ಮಾರ್ಗದರ್ಶಿ ಧರ್ಮವಾಗಿದೆ. ಇದರ ಬೆಳವಣಿಗೆಯಿಂದ ಕೇಡುಗಳು, ಕೇಡಿಗಳು ನಾಶವಾಗುತ್ತಾರೆ. ಹಾಗಾಗಿಯೇ ಕೇಡಿನ ಕೆಲಸದಲ್ಲಿರುವವರು ಇದನ್ನು ನಿರಂತರ ವಿರೋಧಿಸಿಕೊಂಡು ಬರುತ್ತಿದ್ದಾರೆ. ಇತಿಹಾಸದಲ್ಲೂ ಇಂತಹ ಕೇಡಿಗಳಿಂದ ಭಾರತಕ್ಕೆ ಬಹಳಷ್ಟು ಹಾನಿಯಾಗಿದೆ. ಈಗಲೂ ಕೂಡ ಇಂಥವರು ತಮ್ಮ ದುಷ್ಟ ಕಾರ್ಯಾಚರಣೆಗಳಿಂದ ಹೇಗಾದರೂ ಮಾಡಿ ಹಿಂದು ಧರ್ಮ ನಾಶಗೊಳಿಸಬೇಕೆಂದು ಪ್ರಯತ್ನಿಸುತ್ತಲೇ ಬರುತ್ತಿದ್ದಾರೆ. ಅಂಥವರ ನಿತ್ಯದ ಕಿರುಕುಳದಿಂದಾಗಿ ಜಗತ್ತಿನೆಲ್ಲೆಲ್ಲಾ ಇರುವ ಇವತ್ತಿನ ಹಿಂದುಗಳು ಅಪಾರವಾಗಿ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹಿಂದಿನದಕ್ಕಿAತಲೂ ಇವತ್ತಿನ ಸ್ಥಿತಿ ಚಿಂತಾಜನಕವಾಗಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಬೇರೆ ರಾಷ್ಟçಗಳಲ್ಲಂತೆ ಈ ದೇಶದಲ್ಲೂ ಹಿಂದುಗಳ ಸಂಖ್ಯೆ ಕ್ಷೀಣಿಸಲಿದೆ. ಬರುವ ಕೆಲ ವರ್ಷದಲ್ಲೇ ಭಾರತದಲ್ಲೂ ಹಿಂದುಗಳು ಅಲ್ಪಸಂಖ್ಯಾತರರಾಗಲಿದ್ದಾರೆ. ಅಂಕಿ ಅಂಶಗಳು ಇದನ್ನು ನಿಚ್ಚಳವಾಗಿ ತೋರಿಸುತ್ತಿವೆ. ಹಾಗಾಗಿ ನಮ್ಮ ಮನೆಯಿಂದಲೇ ನಾವು ಹಿಂದು ಸಂಸ್ಕೃತಿ ಆಚರಣೆ ಪ್ರಭಾವಕಾರಿಯಾಗಿ ಆಚರಿಸಲು ಆರಂಭಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ರುದ್ರಮುನಿ ಶಿವಾಚಾರ್ಯ ರಾಜೇಶ್ವರ ರವರು ಹೇಳಿದರು. ಅವರು ಬೀದರನ ರಾಘವೇಂದ್ರ ಸ್ವಾಮಿ ಮಠದಲ್ಲಿ ಹಮ್ಮಿಕೊಂಡ ವಿಶ್ವಹಿಂದು ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ನಿಮಿತ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ಮುಂದುವರೆದು ವಿಶ್ವದಾದ್ಯಂತ ವಿಶ್ವ ಹಿಂದು ಪರಿಷತ್ತು, ಹಿಂದು ಸಂಸ್ಕಾರ ಕೇಂದ್ರಗಳನ್ನು ಹೆಚ್ಚಿಸುವ, ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಹಾಗೆಯೇ ಹಿಂದು ದೌರ್ಜನ್ಯ ನಿರ್ದಾಕ್ಷಿಣ್ಯವಾಗಿ ಮತ್ತು ಸಮರ್ಥವಾಗಿ ಖಂಡಿಸುವಲ್ಲಿ ಮುಂಚೂಣಿಯಲ್ಲಿದೆ. ಅಯೋಧ್ಯಾ ರಾಮಮಂದಿರದ ಸ್ಥಾಪನೆಯಲ್ಲಿ ಇದರ ಯಶಸ್ವಿ ಮುಂದಾಳತ್ವ ಜಗನ್ವಂದಿತವಾಗಿದೆ. ಮುಂಬರುವ ನಮ್ಮ ದೇಶದ ದೇವಕಾರ್ಯ, ರಾಷ್ಟçಕಾರ್ಯಕ್ಕೂ ಇದು ಮಾದರಿಯಾದ ಮುಂದಾಳತ್ವವಹಿಸಿ ಯಶಸ್ವಿಗೊಳಿಸ ಬೇಕಾಗದದ್ದು ಜರೂರಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬೌದ್ಧಿಕ ಉಪನ್ಯಾಸ ನೀಡಿದ ಬಸವರಾಜ ಯದಲಾಪೂರೆ ಅವರು ಮಾತನಾಡುತ್ತಾ, ಕ್ರಿ.ಶ. ೧೯೬೪ ರಂದು ಸ್ವಾಮಿ ಚಿನ್ಮಯಾನಂದ ಅಶೋಕ ಸಿಂಘಾಲ್, ಗೋಳವಲ್ಕರ್ ಗುರೂಜಿ, ಪೇಜಾವರಶ್ರೀಗಳ ನೇತೃತ್ವದಲ್ಲಿ ಸುಮಾರು ೪೦ ಜನ ಸಂತರ ಸಮ್ಮುಖದಲ್ಲಿ ವಿಶ್ವ ಹಿಂದು ಪರಿಷತ್ ಅಂದಿನ ಕೃಷ್ಣ ಜನ್ಮಾಷ್ಠಮಿದಂದು ಮುಂಬೈಯಲ್ಲಿ ಸ್ಥಾಪನೆಗೊಂಡಿದೆ. ಇದರ ಉದ್ದೇಶ ಹಿಂದು ಸನಾತನ ಧರ್ಮದ ಸಂಹಾರ ನಿಲ್ಲಿಸಿ, ಇದರ ಸಂವರ್ಧನಗೊಳಿಸಬೇಕೆAಬುದು ಮತ್ತು ಭಾರತದ ಗೋಮಾತೆಯನ್ನು ರಕ್ಷಿಸುವುದು ಹಾಗೂ ಇಲ್ಲಿನ ಎಲ್ಲಾ ಜಾತಿಗಳನ್ನು ಒಗ್ಗೂಡಿಸಿ, ಏಕತೆಯನ್ನು ತರುವುದು ಆಗಿದೆ. ಭಾರತದ ಸನಾತನ ಧರ್ಮದಲ್ಲಿ ಉಪದೇಶಿಸಿದಂತೆ, ಧರ್ಮ, ಅರ್ಥ, ಮೋಕ್ಷಗಳನ್ನು ಶಾಸ್ತೊçÃಕ್ತವಾಗಿ ಆಚರಿಸಲು ಹಚ್ಚಬೇಕೆಂಬುದು ಆಗಿದೆ. ದುರ್ದೈವವೆಂದರೆ ೧೯೬೨ ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದುಗಳ ಸಂಖ್ಯೆ ೨೦% ಇತ್ತು, ಆದರೆ ಈಗ ೮% ಕ್ಕೆ ಕುಸಿದಿದೆ. ಅಂದರೆ ೧೨% ಹಿಂದುಗಳು ಅಲ್ಲಿ ಬಲವಂತದಿAದ ಮತಾಂತರಗೊAಡಿದ್ದಾರೆ. ಮತಾಂತರಗೊಳ್ಳದಿದ್ದರೆ ಕೊಲೆಗೀಡಾಗಿದ್ದಾರೆ ಇಲ್ಲವೇ ಬೇರೆ ದೇಶಕ್ಕೆ ಜೀವ ರಕ್ಷಣೆಗಾಗಿ ವಲಸೆ ಹೋಗಿದ್ದಾರೆ. ಭಾರತದಲ್ಲೂ ಕಾಶ್ಮೀರದಲ್ಲಿ ಹಿಂದುಗಳ ಇಂತಹ ವಲಸೆ ನಾವು ಕಾಣಬಹುದಾಗಿದೆ. ಮೊಗಲರು, ಬ್ರಿಟೀಷರು ಹಿಂದು ಧರ್ಮದ ಮೇಲೆ ಮಾಡಿದ ದೌರ್ಜನ್ಯಗಳು ಅಪಾರವಾಗಿದ್ದರೂ, ಇತಿಹಾಸಕಾರರು ಅವುಗಳನ್ನು ಉದ್ದೇಶಪೂರ್ವಕ ಬಿಂಬಿಸಿಲ್ಲ. ಹಿಂದು ದೌರ್ಜನ್ಯ ವಿರೋಧಿಸಿ ಬಲಿದಾನಗೈದವರನ್ನು ಅವರು ನಿರ್ಲಕ್ಷಿಸಿದ್ದಾರೆ. ಭಾರತ ಸಂಸ್ಕೃತಿ ಬಗ್ಗೆ ನಕರಾತ್ಮಕ ಧೋರಣೆ ಹೊಂದಿದವರೇ ಸ್ವತಂತ್ರ ನಂತರವೂ ನಮ್ಮನ್ನು ಆಳಿದ್ದರಿಂದ ಹಿಂದು ಧರ್ಮ ಬೆಳೆಯಲಿಲ್ಲ. ವೀರ ಸಾವರಕರ್, ಭಗತ್ ಸಿಂಗ್, ಮಂಗಲಪಾAಡೆ, ಸುಭಾಷಚಂದ್ರ ಬೋಸ್, ಚಂದ್ರಶೇಖರ ಆಜಾದ್ ಇವರಂತಹ ಅನೇಕರು ಬಲಿದಾನಗೊಂಡರು. ಈಗಲೂ ಮತಾಂತರ ರೂಪಾಂತರಗೊAಡು, ನಡೆಯುತ್ತಿದೆ. ಇದಕ್ಕೆ ನಮ್ಮ ಹೆಣ್ಣು ಮಕ್ಕಳು, ಬಡವರು ಆಮಿಷ್ಯಕ್ಕೊಳಗಾಗಿ, ಬಲತ್ಕಾರಕ್ಕೊಳಗಾಗಿ ಬಲಿಯಾಗುತ್ತಿದ್ದಾರೆ. ಹಿಂದೂ ವಿರೋಧಿಗಳು ಹೇಗಾದರೂ ಮಾಡಿ ಹಿಂದುಗಳನ್ನು ಅಲ್ಪಸಂಖ್ಯಾತರರನ್ನಾಗಿ ಮಾಡಿಸಬೇಕು ಎನ್ನುತ್ತಿದ್ದಾರೆ. ಹಿಂದು ಧರ್ಮ ಯಾರನ್ನು ಕೀಳಾಗಿ ನೋಡುವುದಿಲ್ಲ, ವಸುದೈವ ಕುಟುಂಬಕA ಎಂಬ ತತ್ವ ಇದರದ್ದಾಗಿದೆ. ಸ್ವತಂತ್ರ ಪೂರ್ವದಲ್ಲಿ ನರಮ್‌ಗಲ್ ಮತ್ತು ಗರಮ್‌ಗಲ್ ಎಂಬ ಎರಡು ವರ್ಗಗಳಿದ್ದವು. ಸ್ವತಂತ್ರ ನಂತರ ಗರಮ್‌ಗಲ್ಲರ ಮೇಲೆ ನರಮ್‌ಗಲ್ಲರು ಮೇಲುಗೈ ಸಾಧಿಸಿ, ಆಡಳಿತ ನಡೆಸಿದ್ದರಿಂದ ಭಾರತ ದುರ್ಬಲವಾಗಲು ಕಾರಣವಾಯಿತು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಸದಾನಂದ ಜೋಶಿಯವರು ಮಾತನಾಡುತ್ತಾ, ಭಾರತದ ಮುಂದಿನ ದಿನಗಳು ಬಹಳ ಮಹತ್ವದ್ದಾಗಿದೆ, ೨೦೪೭ ರಲ್ಲಿ ಭಾರತ ಸ್ವಾತಂತ್ರö??ಕ್ಕೆ ೧೦೦ ವರ್ಷ ತುಂಬುತ್ತದೆ. ಮುಂದಿನ ವರ್ಷ ಆರ್.ಎಸ್.ಎಸ್.ಗೆ ೧೦೦ ವರ್ಷ ತುಂಬುತ್ತದೆ, ಭಾರತ ವಿಶ್ವಗುರು ಆಗಬೇಕು, ವಿಶ್ವನಾಯಕನಾಗಬೇಕೆಂಬ ಕನಸು ಕಟ್ಟಿಕೊಂಡು, ಸಂಘ ಪರಿವಾರದ ಅನೇಕ ಅಂಗ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಾ ಬಂದಿವೆ. ಇದಕ್ಕೆ ಹಲವರ ತ್ಯಾಗ, ಬಲಿದಾನ, ಸೇವೆ ಬಹಳಷ್ಟಿದೆ. ಭಾರತ ಬಲಿಷ್ಠಗೊಂಡರೆ ಜಾಗೃತ ಜನರಿಂದಾಗಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆಂದು ಪಾಶ್ಚಾತ್ಯರು ಭಾರತದಲ್ಲಿನ ತಮ್ಮ ಚೇಲಾಗಳ ಮೂಲಕ ಭಾರತ ದುರ್ಬಲಗೊಳಿಸಲು ನಿರಂತರ ಷಡ್ಯಂತ್ರ ರಚಿಸುತ್ತಿದ್ದಾರೆ. ಭಾರತವನ್ನು ವಿರೋಧಿಸಲೆಂದೇ ಅಪಪ್ರಚಾರದಲ್ಲಿ ತೊಡಗಿಸಿಕೊಂಡ ಕೆಲ ಬುದ್ಧಿ ಜೀವಿಗಳು, ಮಾಧ್ಯಮಗಳು, ವಿಶ್ವಾದ್ಯಂತ ಸಕ್ರೀಯರಾಗಿದ್ದಾರೆ. ಭಾರತವನ್ನು ನಕರಾತ್ಮಕವಾಗಿ ಬಿಂಬಿಸುವುದೇ ಅವುಗಳ ಕೆಲಸವಾಗಿದೆ, ನನ್ನ ೩೦ ವರ್ಷದ ಮಾಧ್ಯಮ ಕ್ಷೇತ್ರದಲ್ಲಿ ಎರಡು ವರ್ಗವನ್ನು ನಾನು ಮೇರುವಾಗಿ ನೋಡಿದ್ದೇನೆ. ಭಾರತ ಸಂಸ್ಕೃತಿ ಹೀನವಾಗಿ ನೋಡುವವರು ಮತ್ತು ಭಾರತ ಸಂಸ್ಕೃತಿ ಮಹಾನ್ ಆಗಿ ಕಾಣುವವರು ಇದ್ದಾರೆ. ಭಾರತ ಸಂಸ್ಕೃತಿ ಮಹಾನ್ ಆಗಿ ಕಾಣುವ ಗುಂಪಿನಲ್ಲಿ ನಾನಿದ್ದೇನೆ. ಹಾಗಾಗಿ ನನಗೆ ಈತ ಚಡ್ಡಿ, ಸಂಘಿ, ಬಲಪಂಥಿ, ಸನಾತನಿ ಎಂದೆಲ್ಲ ಜರಿದಿದ್ದಾರೆ. ಆದರೆ ಇದಕ್ಕೆ ನಾನು ಹೆಮ್ಮೆಪಡುತ್ತೇನೆ ಹೊರತು ಕೀಳರಿಮೆ ಹೊಂದುವುದಿಲ್ಲ. ಹಿಂದು ಧರ್ಮದಲ್ಲಿ ಒಳ್ಳೆಯ ಸಂಸ್ಕಾರಗಳಿವೆ, ಇದು ನಮಗೆ ಗೌರವದ ಬದುಕು ಕಲಿಸುತ್ತದೆ. ಇದು ಯಾರಿಗೂ ಅನ್ಯಾಯ ಮಾಡಬಾರದೆಂದು ಹೇಳುತ್ತದೆ. ಇದರಲ್ಲಿ ಸಹಿಷ್ಣುತೆ ಇದೆ, ಭಕ್ತಿ ಶ್ರದ್ಧೆ ಇದೆ. ಇದು ತನ್ನ ಕಲ್ಯಾಣದ ಜೊತೆ ವಿಶ್ವಕಲ್ಯಾಣ ಬಯಸುತ್ತದೆ. ಆದರೆ ನಾವು ಹಿಂದು ವಿರೋಧಿಗಳಿಗೆ ಶರಣಾಗಿ ನಡೆದಿದ್ದರಿಂದಲೇ ಕಾಶ್ಮಿರದಲ್ಲಿ, ಪಶ್ಚಿಮ ಬಂಗಾಳದಲ್ಲಿ, ದಿಲ್ಲಿಯಲ್ಲಿ, ಕೇರಳದಲ್ಲಿ, ಅಸ್ಸಾಂನಲ್ಲಿ ಭಾರಿ ಬೆಲೆ ತೆತ್ತಿದ್ದೇವೆ. ಬಾಂಗ್ಲಾದೊಳಗಿನ ಪರಿಸ್ಥಿತಿ ಇಲ್ಲೂ ನಿರ್ಮಾಣ ಮಾಡುತ್ತೇವೆಂದು ಭಾರತ ಸಂಸ್ಕೃತಿ ವಿರೋಧಿಗಳು ನಿರ್ಭಯವಾಗಿ ಹೇಳಿಕೆ ಕೊಡುತ್ತಿದ್ದಾರೆ, ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ದುರಂತವಾಗಿದೆ. ಹಿಂದುಗಳನ್ನು ಏಕತ್ರಗೊಳಿಸಲು ಮತ್ತು ಬಲಿಷ್ಠಗೊಳಿಸಲು ವಿಶ್ವಹಿಂದು ಪರಿಷತ್ ನಿರಂತರ ಶ್ರಮಿಸುತ್ತಿದೆ. ಇದರ ಕಾರ್ಯಗಳು ಹೆಚ್ಚಾದಷ್ಟು ಭಾರತ ಬಲಿಷ್ಠಗೊಳ್ಳುತ್ತದೆ. ಹಾಗಾಗಿ ಇದರ ಕಾರ್ಯಗಳಿಗೆ ಕೈಜೋಡಿಸಬೇಕೆಂದರು.
ಇನ್ನೋರ್ವ ಅತಿಥಿಗಳಾದ ಮಚೇಂದ್ರನಾಥ ಕಾಂಬಳೆಯವರು ಮಾತನಾಡುತ್ತಾ, ಆಧುನಿಕ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಕಲಿಯುತ್ತಿರುವುದರಿಂದಾಗಿ ನಮ್ಮ ಮಕ್ಕಳು ಭಾರತ ಸಂಸ್ಕೃತಿ ಹೀನವಾಗಿ ನೋಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಸಂಸ್ಕೃತಿಯ ಬಗ್ಗೆ ಅಭಿಮಾನವುಳ್ಳವರಿಗಿಂತ ನಿರಾಭಿಮಾನವುಳ್ಳವರಿಗೆಯೇ ಹೆಚ್ಚಿಗೆ ಪ್ರಾಧಾನ್ಯತೆ ಕೊಡಲಾಗುತ್ತಿದೆ. ಹಾಗಾಗಿಯೇ ಇವತ್ತಿನ ಮಕ್ಕಳು ಭಜನೆ, ಕೀರ್ತನೆಗಳಿಗೆ ಹೋಗುತ್ತಿಲ್ಲ. ಯಾತ್ರೆಗಳಿಗೂ ಶೃದ್ಧೆಯಿಂದ ಹೋಗದೇ, ಎಂಜಾಯ್ ಮಾಡಲು ಹೋಗುತ್ತಿದ್ದಾರೆ. ಹೊರಗಿನ ಶತ್ರುಗಳನ್ನು ಜಯಿಸಿದಂತೆ ನಾವು ನಮ್ಮ ಒಳಗಿನ ಶತ್ರುಗಳನ್ನು ಜಯಿಸಬೇಕಾಗಿದೆ ಎಂದರು. ಬಿ.ಜಿ. ಶೆಟಕಾರ ಅವರು ಮಾತನಾಡುತ್ತಾ, ಭಾರತ ಸಂಸ್ಕೃತಿಯAತೆ ನಡೆಯಲು ಇಂದಿನ ಸುಶಿಕ್ಷಿತರು ಹಿಂದೇಟು ಹಾಕುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸುಶಿಕ್ಷಿತರು ಗುರು ಹಿರಿಯರನ್ನು, ತಂದೆ ತಾಯಿಯನ್ನು ಗೌರವಿಸುವಂತೆ ನಾವು ನೋಡಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಸಾಳೆ, ಸೋಮಶೇಖರ ಪಾಟೀಲ ಗಾದಗಿ, ರಾಜಕುಮಾರ ಅಳ್ಳೆ, ಸತೀಶ ನೌಬಾದೆ, ಗಂಗಾಧರ ಶಿವಾಚಾರ್ಯರು ಲಾಡಗೇರಿ, ವೀರೇಂದ್ರ ಶಾಸ್ತಿç, ಬಸಪ್ಪಾ ಹಿರಿವಗ್ಗೆ, ರಾಜೇಂದ್ರ ಕುಲಕರ್ಣಿ, ಜೈಕಿಶನ್ ಮಾಲಾನಿ, ಕೆ.ಡಿ. ಕುಲಕರ್ಣಿ, ಶಂಕರೆಪ್ಪ ಪಾಟೀಲ, ಮಹಾದೇವ ಗೌಳಿ, ಮಚೇಂದ್ರನಾಥ ಕಾವಳೆ, ಭೀಮಣ್ಣಾ ಸೋರಳ್ಳಿ, ಕಲ್ಪನಾ ದೇಶಪಾಂಡೆ, ಸಾಧನಾ ಮತ್ತೀತರರು ಇದ್ದರು.