ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ “ಬಿ” ಶ್ರೇಯಾಂಕ
ಸAಜೆವಾಣಿ ವಾರ್ತೆ
ಔರಾದ :ಸೆ.೮: ಸರ್ಕಾರಿ ಪದವಿ ಕಾಲೇಜುಗಳ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟದ ಮಾನದಂಡಗಳನ್ನು ಆಧರಿಸಿ, ಶ್ರೇಣಿ ನೀಡುವ ನ್ಯಾಕ್ ಸಮಿತಿ ಔರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಿ ಶ್ರೇಯಾಂಕ ನೀಡಿದೆ.
ವಿಧಾನಸೌಧದ ಬಾಂಕ್ವೇಟ್ ಹಾಲ್ ನಲ್ಲಿ ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯೋಜಿಸಿರುವ ೨೦೨೩-೨೪ನೇ ಸಾಲಿನ ಶಿಕ್ಷಕರ ದಿನಾಚರಣೆ ಹಾಗೂ ನ್ಯಾಕ್ ಮಾನ್ಯತೆ ಪಡೆದಿರುವ ೨೮ ಕಾಲೇಜುಗಳಿಗೆ ಅಭಿನಂದನಾ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಪ್ರಾಧ್ಯಾಪಕರಾದ ಡಾ.ಜೈಶೀಲಾ ಅವರಿಗೆ ಅಭಿನಂದನಾ ವಿತರಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರು ಶ್ರೀ ಮಧು ಬಂಗಾರಪ್ಪ ಹಾಗೂ ವಿಧಾನಸಭಾ ವಿಧಾನ ಪರಿಷತ್ ಸದಸ್ಯರುಗಳು ಉಪಸ್ಥಿತರಿದ್ದರು.