ತಾಯಂದಿರ ಮಡಿಲು ಶಾಂತವಾಗಿದ್ದಾಗ ಮಾತ್ರ ಸಮೃದ್ಧವಾದ ದೇಶ ಕಟ್ಟಲು ಸಾಧ್ಯ: ವಿಶ್ವಾರಾಧ್ಯ ಮಳೇಂದ್ರ ಶ್ರೀ
ಅಫಜಲಪುರ:ಸೆ.೮: ಭಕ್ತರು ನಮ್ಮ ಶ್ರೀ ಮಠದ ಆಸ್ತಿಯಾಗಿದ್ದು,ಭಕ್ತರ ಶ್ರೆಯೋಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ.ಎಲ್ಲರಿಗೂ ಒಳ್ಳೆಯದನ್ನು ಬಯಸುವ ತಾಯಂದಿರ ಮಡಿಲು ಶಾಂತವಾಗಿದ್ದಾಗ ಮಾತ್ರ ಸಮೃದ್ಧವಾದ ದೇಶ ಕಟ್ಟಲು ಸಾಧ್ಯ ಎಂದು ಮಠದ ಪೀಠಾಧಿಪತಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಮಳೇಂದ್ರ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವ ನಿಮಿತ್ಯ ಶುಕ್ರವಾರ ಏರ್ಪಡಿಸಿದ್ದ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ, ಹಿಂದೂ ಪರಂಪರೆಯಲ್ಲಿ ಮಹಿಳೆಯನ್ನು ದೇವತೆ ಸ್ಥಾನದಲ್ಲಿರಿಸಿದ್ದು,ಪ್ರತಿಯೊಬ್ಬರೂ ಮಹಿಳೆಯನ್ನು ಗೌರವಿಸಿ,ಪೂಜ್ಯನೀಯ ಭಾವದಿಂದ ಕಾಣಬೇಕು.ದೇಶಕ್ಕೆ ಅನ್ನ ನೀಡುವ ರೈತರಿಗೆ ಉತ್ತಮ ಮಳೆಯಾಗಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ.ಪುರಾಣ,ಪ್ರವಚನಗಳ ಶ್ರವಣದಿಂದ ಸುವಿಚಾರ ಮೂಡಿ,ಆತ್ಮ ಶಾಂತಿ ಸಿಗುತ್ತದೆ ಎಂದು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ,ಭಾರತದಲ್ಲಿ ಧರ್ಮದ ಉಳಿವಿಗೆ ಮಠಗಳ ಪಾತ್ರ ಬಹುಮುಖ್ಯವಾಗಿದೆ.ರಾಜ್ಯದಲ್ಲಿ ಸರಕಾರಗಳು ಶಿಕ್ಷಣ ನೀಡಿದರೆ,ಮಠ ಮಾನ್ಯಗಳು ಅನಾದಿ ಕಾಲದಿಂದಲೂ ಶಿಕ್ಷಣದ ಕ್ರಾಂತಿಯನ್ನೇ ಮಾಡಿದ್ದಾರೆ.ಹೆಣ್ಣು ಸಂಸಾರದ ಕಣ್ಣಾಗಿದ್ದು, ಮೌಲ್ಯಯುತ ಜೀವನ ಮಾಡಿ ಸಮಾಜಕ್ಕೆ ಮಾರ್ಗದರ್ಶಕವಾಗಿರಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ್ ಮಾತನಾಡಿ, ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಗಡಿ ಭಾಗದಲ್ಲಿ ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ. ಮನುಷ್ಯನ ಮನಸ್ಸಿನ ಮಲೀನವನ್ನು ತೊಳೆಯಲು ಧರ್ಮ ಸಭೆಗಳು ಅವಶ್ಯಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ನೀಲಗಂಗಮ್ಮ ಹಿರೇಮಠ,ಶಾಂತಾಬಾಯಿ.ಎA.ವೈ.ಪಾಟೀಲ್, ನಾಗರತ್ನ ಅಶೋಕ ಮನಗೂಳಿ, ಜ್ಯೋತಿ, ಅರುಣಕುಮಾರ ಪಾಟೀಲ್, ಲಕ್ಮ್ಮೀ ಪಾಟೀಲ್, ಗೀತಾ ಪಾಟೀಲ್, ಶಾಂತಾಬಾಯಿ ಹಿರೇಮಠ, ಭಾಗ್ಯಶ್ರೀ ಪಾಟೀಲ್,ಪ್ರಭುಲಿಂಗ ಹಾದಿಮನಿ,ರಮೇಶ ತಿಪನೂರ, ತೇಜಸ್ವಿನಿ.ವ್ಹಿ, ಮೀನಾಕ್ಷಿ ಪಾಟೀಲ್,ಶ್ರದ್ಧಾ ಪಾಟೀಲ್,ಸಿದ್ದಯ್ಯ ಹಿರೇಮಠ, ಪ್ರಭು ನರಕೆ,ಸುರೇಶ ನಂದಗಾAವ,ಶಾAತಗೌಡ ಪಾಟೀಲ್,ಚಂದ್ರಶೇಖರ ಕರಜಗಿ,ಗಂಗಾಧರ ಶ್ರೀಗಿರಿ,ಶಿವು ಪದಕಿ, ಬಸವರಾಜ ಕಲಶೆಟ್ಟಿ, ಶೈಲೇಶ ಗುಣಾರಿ, ಎಸ್.ಎಸ್.ಪಾಟೀಲ್, ಪ್ರಭಾವತಿ ಮೇತ್ರಿ ಇತರರಿದ್ದರು.
ಶ್ರೀ ಗುರು ಮಳೇಂದ್ರ ಶ್ರೀ ಪ್ರಶಸ್ತಿ ಪ್ರಧಾನ
ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾದ ದೇವಯ್ಯ ಗುತ್ತೇದಾರ್,ಮಾಜಿ ಸೈನಿಕ ವಿರುಪಾಕ್ಷಪ್ಪ ವಾಲಿ, ಪ್ರಗತಿಪರ ರೈತ ಗುರುಪಾದಪ್ಪ ಫತಾಟೆ,ಸಂಗು ಡಿಜಿಟಲ್ ಮಾಲೀಕರಾದ ಸಂಗನಬಸಪ್ಪ ಪತ್ತಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.