ಕಡಕೋಳ ಮಡಿವಾಳಪ್ಪನ ಸಂಶೋಧನ ಅಧ್ಯಾಯನ ಕೇಂದ್ರ ಸ್ಥಾಪನೆ ಮಾಡಿ:ಕಡಕೋಳ ಶ್ರೀ
ಯಡ್ರಾಮಿ:ಸೆ.೮:ತತ್ವ ಪದಕಾರ ಕಡಕೋಳ ಮಡಿವಾಳಪ್ಪನ ಸಂಶೋಧನ ಅಧ್ಯಾಯನ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಡಾ.ರುದ್ರಮುನಿ ಶಿವಾಚಾರ್ಯರು ಕಡಕೋಳ ಮಹಾಮಠದ ಪೀಠಾಧಿಪತಿ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಶನಿವಾರ ಸಾಯಂಕಾಲ ಕಡಕೋಳ ಮಡಿವಾಳೇಶ್ವರ ಮಠದ ಆವರಣದಲ್ಲಿ ಶ್ರಾವಣ ಮಾಸದ ಚೇಥಿ ಭಜನಾ ಮುಕ್ತಾಯ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಶ್ರೀಗಳು.
ಸಗರನಾಡಿನಲ್ಲಿ ಅನುಭವ ಮಂಟಪ ರಚನೆ ಮಾಡಿ ಸಾಮಾಜಿಕ ಅಸಮಾನತೆ ಜಾತಿಯ ವ್ಯವಸ್ಧೆ ವಿರುದ್ಧ ತಮ್ಮ ತತ್ವ ಪದಗಳ ಮೂಲಕ ಕ್ರಾಂತಿ ಉಂಟು ಮಾಡಿದರ ಮಡಿವಾಳಪ್ಪನ ಅಧ್ಯಾಯನ ಕೇಂದ್ರ ಸ್ಥಾಪನೆ ಮಾಡಿ ಸಂಶೋಧನೆ ಕೆಲಸಾ ಆಗಬೇಕು ಎಂದು ಹೇಳಿದರು.
ಈಗಾಗಲೇ ಕಲಬುರಗಿ ನಗರದಲ್ಲಿ ನಡೆಯುವ ಸಂಸತ್ತು ಅಧಿವೇಶನದಲ್ಲಿ ಈ ಭಾಗದ ರಾಜಕಾರಣಿಗಳು ಮುಖಂಡರು ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಮಡಿವಾಳೇಶ್ವರ ಸಂಶೋಧನೆ ಕೇಂದ್ರ ಸ್ಥಾಪನೆ ಮಾಡುಲ್ಲಿ ಒತ್ತಡ ಹಾಕಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಅಭಿನವ ರುದ್ರಮುನಿ ಶಿವಾಚಾರ್ಯರು ಹಿರೇಮಠ ಯಂಕAಚಿ,ಪೂಜ್ಯ ಚಂದ್ರಶೇಖರ ಶಿವಾಚಾರ್ಯರು ಗುರುಸಂಸ್ಥಾನಮಠ ಆಲಮೇ, ಪೂಜ್ಯ ಶಿವಾನಂದ ಶಿವಾಚಾರ್ಯರು ಕುಮಸಗಿ,ಪೂಜ್ಯ ಸಿದ್ದಕಬೀರ ಮಹಾಸ್ವಾಮಿಗಳು ಚಿಗರಹಳ್ಳಿ,ರಾಜಶೇಖರ ಸೀರಿ,ಶರಣು ಪಾಟೀಲ, ಸಂತೋಷ ಪಾಟೀಲ,ಶಶಿಕಾಂತ ಪಾಟೀಲ,ಲಿಂಗರಾಜ ಪಟ್ಟಣಶೆಟ್ಟಿ,ಆನಂದ ಯತ್ನಾಳ,ಸಿದ್ದು ಹೂಗಾರ, ಚಂದ್ರಶೇಖರ ಪುರಾಣಿಕ,ಬಸಲಿಂಗಯ್ಯ ಸಾಹು ಅಂಕಲಕೋಟಿ,ಶ್ರೀಶೈಲ ತಾಳಿಕೋಟಿ,ರಾಜಶೇಖರ ಡಗ್ಗಾ,ಸಂತೋಷ ಗಡಗಿ, ಮಹಾದೇವ ಸಜ್ಜನ, ನಿಲಕಂಠ ಡಂಬಳ,ರೇವಣಸಿದ್ದಪ್ಪ ಅಂಕಲಕೋಟಿ,ನಿAಗರಾಜ ಪಟ್ಟಣಶಟ್ಟಿ,ನಾನಗೌಡ ಸಗರ,ಗೊಲ್ಲಾಳಪ್ಪ ಯಾಳಗಿ, ಜಯಪರಾಮ ದೇವಿಕಿರಾಣಿ,ಈರಣ್ಣ ಅಂಕಲಕೋಟಿ, ಸುಭಾಷ ಅಂಕಲಕೋಟಿ,ಮಾಹAತಪ್ಪ ತುಪ್ಪದ, ಮಹೇಶ ಪುರಾಣಿಕ,ಸುಭಾಷ ಯಂಕAಚಿ,ನಾಗಣ್ಣ ಬಾರಾದಾರ,ಬಸವರಾಜ ದುಮ್ಮದ್ರಿ,ಸುರೇಶ ಹೆರೂರ, ಶಿವಕುಮಾರ ಮಾ.ಪ್ರಾ,ಶಂಭುಲಿAಗ ತಾಳಿಕೋಟಿ, ಅಪ್ಪುಗೌಡ ಮಾಲಿ ಪಾಟೀಲ,ದೇವಿಂದ್ರಪ್ಪ ಬಂಡೆಪ್ಪಗೌಡ, ಬಸವರಾಜ ಪಾಟೀಲ ಯತ್ನಾಳ ಇತರರು ಉಪಸ್ಥಿತರಿದ್ದರು.
ಸಾವಿರಾರು ಭಕ್ತರು ಕಡಕೋಳ ಮಡಿವಾಳೇಶ್ವರ ಮಹಾಮಠದಲ್ಲಿ ವಿಶೇಷ ಬಜ್ಜಿ ರೋಟಿ ಸವಿದು ಪುನಿತರಾದ ಭಕ್ತಾಧಿಗಳು.