ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯಿAದಶಿಕ್ಷಕರಿಗೆ ಸನ್ಮಾನ ಮತ್ತು ಗುರು ನಮನ
ಅಥಣಿ : ಸೆ.೮:ಪಟ್ಟಣದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆಯ ನಿಮಿತ್ಯ ಶಿಕ್ಷಕರಿಗೆ ಸನ್ಮಾನ ಮತ್ತು ಗುರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಸಂಸ್ಥೆಯ ಸಂಸ್ಥಾಪಕರಾದ ನಿಜಪ್ಪ ಹಿರೇಮನಿ ಮತ್ತು ಕೃಪಾ ಆರೋಗ್ಯ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷೆ ಸಂಗೀತಾ ಹಿರೇಮನಿ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು.
ಶಿಕ್ಷಕರ ದಿನಾಚರಣೆಯ ನಿಮಿತ್ಯವಾಗಿ ಪಟ್ಟಣದ ಕೆಎಲ್ ಇ ಸಂಸ್ಥೆಯ ಎಸ್ ಎಸ್ ಎಮ್ ಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ “ಡಾ. ರೇಷ್ಮಾ ಇನಾಮದಾರ. ಎಸ್ ಎಸ್ ಎಮ್ ಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ “ಡಾ. ಬಿ ಎಸ್ ಕಾಂಬಳೆ” ಕೆಎಲ್ ಇ ಸಂಸ್ಥೆಯ ಸಿ ಎಸ್ ಕಿತ್ತೂರ ಹೈಸ್ಕೂಲ್ ಮುಖ್ಯೋಪಾಧ್ಯಾಯ “ಎಸ್ ಜಿ ಸಲಗರ” ಹಾಗೂ ಕೆಎಲ್ ಇ ಸಂಸ್ಥೆಯ ಸಿಬಿಎಸ್ ಇ ರನಮೋಡೆ ಶಾಲೆಯ ಮುಖ್ಯೋಪಾಧ್ಯಾಯ “ಜಗದೀಶ ಹವಾಲ್ದಾರ್” ಅವರನ್ನು ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಮಕ್ಕಳು ಹಾಗೂ ಸಂಸ್ಥಾಪಕ ಅಧ್ಯಕ್ಷರು ಗೌರವ ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮ ನೆರವೇರಿತು.
ಈ ವೇಳೆ ಸನ್ಮಾನ ಸ್ವೀಕರಿಸಿದ ಕೆಎಲ್ ಇ ಸಂಸ್ಥೆಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ರೇಷ್ಮಾ ಇನಾಮದಾರ
ಮಾತನಾಡಿ ಗುರುಗಳ ನಿಜವಾದ ಕಾಣಿಕೆ ಎನ್ನುವದು ಅವರ ಶಿಷ್ಯರ ಸಾಧನೆಯಲ್ಲಿ ಅಡಗಿದೆ. ಶ್ರದ್ಧೆ, ಏಕಾಗ್ರತೆ, ಶ್ರಮ, ನಿಸ್ವಾರ್ಥತೆ, ಸಹನೆ, ಜ್ಞಾನ, ವಿದ್ಯೆ ಮನಸ್ಸು, ನಿಷ್ಠೆ ಈ ಎಲ್ಲಾ ಗುಣ ಗಳು ವಿದ್ಯಾರ್ಥಿಗಳಲ್ಲಿರಬೇಕು. ನಾವು ಗುರಿ ಸಾಧಿಸುವಲ್ಲಿ ನಮಗೆ ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಇಂದಿನ ಕೃಪಾ ಸಮಾಜ ಸೇವಾ ಸಂಸ್ಥೆಯ ಮಕ್ಕಳು ಏರ್ಪಡಿಸಿದ ಸನ್ಮಾನದಿಂದ ಹೃದಯ ತುಂಬಿ ಬಂದಿದೆ.ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆಗೆ ಏರಿ ಸಮಾಜ ಸೇವೆಯನ್ನು ಇಲ್ಲಿನ ಮಕ್ಕಳು ಮುಂದುವರೆಸಿದರೆ ನಮಗೆ ನಿಜವಾದ ಗುರುಕಾಣಿಕೆ ಸಿಕ್ಕಂತೆ ಆಗುತ್ತದೆ ಎಂದರು.
ಈ ವೇಳೆ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸಂಗೀತಾ ಹಿರೇಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಶಿಕ್ಷಕರಿಗೆ ವಿಶೇಷ ಸ್ಥಾನವಿದೆ. ಜೀವನದಲ್ಲಿ ಗುರಿ ಸಾಧನೆಗೆ ಗುರುವಿನ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದ್ದೇ ಇರುತ್ತದೆ ಗುರು ಇಲ್ಲದೆ ಗುರಿಯ ಸಾಧನೆ ಅಸಾಧ್ಯ ಎಂದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಪಾ ಆರೋಗ್ಯ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಿಜಪ್ಪ ಹಿರೇಮನಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಿದಾಗ ಅವರ ಸಾಧನೆಗೆ ಬೆನ್ನೆಲುಬಾದ ಶಿಕ್ಷಕರನ್ನು ನೆನೆಯುವ ಕ್ಷಣ ಅವಿಸ್ಮರಣೀಯ. ನಮ್ಮ ಬಾಲ್ಯದಲ್ಲಿ ನಮಗೆ ಸಿಕ್ಕ ಸಂಸ್ಕಾರ ನಮ್ಮ ಗುರುಗಳಿಂದ ಬಂದಿದೆ. ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಇಂದಿನ ವರೆಗಿನ ಸಮಾಜ ಸೇವೆಗೆ ಗುರುಹಿರಿಯರ ಸಲಹೆ ಸೂಚನೆಗಳ ಜೊತೆಗೆ ತೋರುವ ಉದಾರತೆ ದೊಡ್ಡದು ಎಂದರು.
ಈ ವೇಳೆ ಡಾ ರೇಷ್ಮಾ ಇನಾಮದಾರ, ಡಾ ಬಿ ಎಸ್ ಕಾಂಬಳೆ. ಎಸ್ ಜಿ ಸಲಗರೆ. ಹಾಗೂ ಜಗದೀಶ ಹವಾಲ್ದಾರ, ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಮಕ್ಕಳು ಸೇರಿದಂತೆ ಹಲವರು ಉಪಸ್ಥಿತರಿದ್ದರು