ಸೆಪ್ಟೆಂಬರ್ 15 ರಂದು ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಮಾನವ ಸರಪಳಿ ರಚನೆ: ಎಲ್ಲಾ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಭಾಗವಹಿಸಲು ಸೂಚನೆ
ಕಲಬುರಗಿ:ಸೆ.7:ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್ 15 ರಂದು ಕಲಬುರಗಿ ಜಿಲ್ಲೆಯ ಕಿಣ್ಣಿಸಡಕ್ ಗ್ರಾಮದಿಂದ ಚಿತ್ತಾಪೂರ ತಾಲ್ಲೂಕಿನ ದೇವಲಾನಾಯಕ ತಾಂಡಾದ ಯಾದಗಿರ ಗಡಿಯವರೆಗೆ ಸುಮಾರು 113 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ರಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು ತಿಳಿಸಿದ್ದಾರೆ.
ಈ ಮಾನವ ಸರಪಳಿಯು ಕಿಣ್ಣಿಸಡಕ್ ಗ್ರಾಮದಿಂದ ಪ್ರಾರಂಭವಾಗಿ ಮರಗುತ್ತಿ ಕ್ರಾಸ್, ಕಮಲಾಪೂರ, ಮಹಾಗಾಂವ ಕ್ರಾಸ್, ಅವರಾದ (ಬಿ), ಕಲಬುರಗಿ ದೂರದರ್ಶನ ಕೇಂದ್ರದ ಮುಂಬಾಗ, ಶಹಾಬಾದ ರಿಂಗರೋಡ್, ಭಂಕೂರ ಕ್ರಾಸ್, ವಾಡಿ ರಸ್ತೆ ಮೂಲಕ ಹಾದುಹೊಗಿ ಯಾದಗಿರ ಜಿಲ್ಲೆಯ ಗಡಿಭಾಗವಾದ ದೇವಲಾನಾಯಕ ತಾಂಡಾ ಗ್ರಾಮದ ಬಳಿ (ಯಾದಗಿರ ಗಡಿ) ಅಂತ್ಯಗೊಳ್ಳಲಿದೆ. ಅದೇ ರೀತಿ ಸೆಪ್ಟೆಂಬರ್ 15 ರಂದು ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಬೀದರದಿಂದ ಚಾಮರಾಜನಗರವರೆಗೂ ರಾಜ್ಯದಾದ್ಯಂತ ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲಿಯೇ ಪ್ರಪ್ರಥಮವಾದ ದಾಖಲೆಯಾಗಿರುತ್ತದೆ.
ಮುಖ್ಯಮಂತ್ರಿಗಳು ಕಳೆದ ಸೆಪ್ಟೆಂಬರ್ 6 ರಂದು ಪೂರ್ವಭಾವಿ ಸಭೆ ನಡೆಸಿ ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳು, ಮಹಿಳೆಯರು, ಯುವ ಯುವತಿಯರು, ವಿದ್ಯಾರ್ಥಿಗಳು, ಶಿಕ್ಷಕರು, ಎಲ್ಲಾ ಸಂಘಟನೆಗಳು ಮತ್ತು ಎಲ್ಲರೂ ಸಹ ಪಾಲ್ಗೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ಸಹ ಮನವಿ ಮಾಡಿದ್ದಾರೆ.
ಅದೆ ರೀತಿ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು (ಪ.ಜಾತಿ/ಪ.ಪಂಗಡ, ಹಿಂ.ವ, ಅ.ಸಂ, ಮತ್ತಿತರೆÉ), ವಿವಿಧ ಸ್ವಯಂ ಸೇವಾ ಸಂಸ್ಥೆಗಳು (ಲೈನ್ಸ್ ಕ್ಲಬ್, ರೋಟರಿ ಕ್ಲಬ್, ಇತ್ಯಾದಿ ಸಂಸ್ಥೆಗಳು) ಎಲ್ಲಾ ಸಂಘಟನೆಗಳ (ಪ.ಜಾತಿ/ಪ.ಪಂಗಡ, ಹಿಂ.ವ, ಅ.ಸಂ, ಮತ್ತಿತರೆÉ) ಪದಾಧಿಕಾರಿಗಳು ಮತ್ತು ಸದಸ್ಯರು, ಸರಕಾರಿ ನೌಕರರ ಸಂಘಗಳು, ಸರಕಾರಿ / ಖಾಸಗಿ / ಅರೆ ಸರ್ಕಾರಿ ಶಾಲಾ ಕಾಲೇಜುಗಳ ಸಂಘದ ಪದಾಧಿಕಾರಿಗಳು ಮಹಿಳಾ ಸ್ವ-ಸಹಾಯ ಗುಂಪುಗಳು ಸರ್ಕಾರಿ ನೌಕರರು, ಸರ್ಕಾರಿ / ಖಾಸಗಿ / ಅರೆ ಸರ್ಕಾರಿ ಶಾಲೆಗಳ / ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ವಿವಿಧ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಶಾಲಾ/ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳಲ್ಲಿನ ಎಲ್ಲಾ ಸಂಘಗಳ ಪದಾಧಿಕಾರಿಗಳು / ಸರಕಾರಿ, ಖಾಸಗಿ ಮತ್ತು ಅರೆ ಸರ್ಕಾರಿ ಬ್ಯಾಂಕುಗಳ ಅಧಿಕಾರಿ / ಸಿಬ್ಬಂದಿಗಳು, ವಿವಿಧ ಕ್ರೀಡೆ ಮತ್ತು ಸಾಂಸ್ಕøತಿಕ ಕಲಾ ತಂಡಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಎಲ್ಲಾ ಸಾರ್ವಜನಿಕರು ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಮತ್ತಿತರ ಮಾಹಿತಿಗಾಗಿ ಕಮಲಾಪೂರ ತಹಸೀಲ್ದಾರ ತಸಿ ಮಹ್ಮದ ಮೋಸಿನ್ ಮೊಬೈಲ್ ಸಂಖ್ಯೆ-8050908029 ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಮೊಬೈಲ್ ಸಂಖ್ಯೆ-9986564606, ಕಲಬುರಗಿ ತಹಸೀಲ್ದಾರ ಕೆ.ಆನಂದ-9481428360 ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೈಯದ ಪಟೇಲ್-9900290355, ಶಹಾಬಾದ ತಹಸೀಲ್ದಾರ ಜಗದೀಶ್ ಚೌರ್-9535388547, ಚಿತ್ತಾಪೂರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಮ ಪಾಶಾ -9741828507, ಶಹಾಬಾದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ -9535095025, ಕಾಳಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳುಬಸಲಿಂಗಪ್ಪ ಡಿಗ್ಗಿ -9590709252, ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ರಂಜೋಳಕರ್-9611792861, ಚಿತ್ತಾಪೂರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೇತನ ಗುರಿಕಾರ್-9902228587 ಇವರನ್ನು ಸಂಪರ್ಕಿಸಲು ಕೋರಲಾಗಿದೆ.