ಜಿಲ್ಲಾಧಿಕಾರಿಗಳಿಂದ ಆರ್‍ಬಿಐ-90 ರಸಪ್ರಶ್ನೆ ಪೋಸ್ಟರ್ ಬಿಡುಗಡೆರಾಷ್ಟ್ರ ಮಟ್ಟದ ರಸಪ್ರಶ್ನೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಲು ಡಿ.ಸಿ. ಕರೆ
ಕಲಬುರಗಿ:ಸೆ.7: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ 90ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಪರೀಕ್ಷಿಸಲು ಮತ್ತು ಜ್ಞಾನ ಉತ್ತೇಜನಕ್ಕಾಗಿ ಆರ್.ಬಿ.ಐ-90 ಎಂಬ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದ್ದು, ಇತ್ತೀಚೆಗೆ ಈ ಸಂಬಂಧ ಪ್ರಚಾರ ಪೋಸ್ಟರ್ ಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸ್ಪರ್ಧಿಸಿ ಗೆಲ್ಲವುದುನ್ನು ಕಲಿಯಿರಿ ಎಂಬ ಟ್ಯಾಗ್‍ಲೈನ್ ಹೊಂದಿರುವ ಈ ರಸಪ್ರಶ್ನೆಯಲ್ಲಿ ಜಿಲ್ಲೆಯ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಮೂಹ ಮುಕ್ತವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದ ಅವರು, ಬಹುಮಾನ ಗೆಲ್ಲುವುದು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಎಂದು ರಸಪ್ರಶ್ನೆಯ ಮಹತ್ವ ತಿಳಿಸಿದರು.
ಸೆಪ್ಟೆಂಬರ್ 1ಕ್ಕೆ 18 ರಿಂದ 25 ವರ್ಷ ದೊಳಗಿನ ದೇಶದಲ್ಲಿನ ಯಾವುದೇ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗಕ್ಕೆ ನೋಂದಾಯಿಸಿದ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಿ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಆರ್.ಬಿ.ಐ ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ಇದರಲ್ಲಿ ಭಾಗವಹಿಸುವಂತಿಲ್ಲ. ನೊಂದಣಿ ಉಚಿತವಾಗಿದ್ದು ಸೆಪ್ಟೆಂಬರ್ 17ರ ರಾತ್ರಿ 9 ಗಂಟೆ ಒಳಗೆ ತಲಾ ಇಬ್ಬರು ಸದಸ್ಯರಂತೆ ತಂಡವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇನ್ನು ಸೆ.19 ರಿಂದ 21ರ ವರೆಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, ಮೊದಲನೇ ಹಂತದ ಅನ್ ಲೈನ್ ರಸಪ್ರಶ್ನೆಯಲ್ಲಿ ಜೊತೆಗಾರನ ಜೊತೆಗೆ ಲ್ಯಾಪಟಾಪ್, ಸ್ಮಾರ್ಟ್ ಫೆÇೀನ್ ಮೂಲಕ ಮನೆ, ಶಾಲೆಯಿಂದಲೆ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಇಲ್ಲಿ ಉತ್ತಮ ಸಾಧನೆ ತೋರಿದಲ್ಲಿ ಎರಡನೇ ಹಂತಕ್ಕೆ ತಲುಪಬಹುದು.
ಎರಡನೇ ಹಂತದ ಸ್ಪರ್ಧೆ ರಾಜ್ಯ ಮಟ್ಟದಲ್ಲಿ ಭೌತಿಕವಾಗಿ ತಂಡಗಳ ನಡುವೆ ನಡೆಯಲಿದ್ದು, ಇಲ್ಲಿ ವಿನ್ನರ್ ಆದ ತಂಡ ಮೂರನೇ ಹಂತದ ವಲಯ ಮಟ್ಟಕ್ಕೆ ಅಯ್ಕೆಯಾಗಲಿದೆ. ವಲಯ ಮಟ್ಟದಲ್ಲಿ ಗೆಲ್ಲುವ ತಂಡ ಅಂತಿಮವಾಗಿ ನಾಲ್ಕನೆಯ ಹಂತದ ರಾಷ್ಟ್ರ ಮಟ್ಟದ ಫೈನಲ್ ರೌಂಡ್ ಗೆ ತಲುಪಲಿದೆ. ಫೈನಲ್ ರೌಂಡ್ ನಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 10 ಲಕ್ಷ ರೂ., ಎರಡನೇ ತಂಡಕ್ಕೆ 8 ಲಕ್ಷ ರೂ. ಹಾಗೂ ಮೂರನೇ ತಂಡಕ್ಕೆ 6 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.
ಕೊನೆಯ ಮೂರು ಹಂತಗಳ ಸ್ಪರ್ಧೆಗೆ ಆಯ್ಕೆಯಾದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಯಾಣ, ತಂಗುವಿಕೆ ವೆಚ್ಚ ಆರ್.ಬಿ.ಐ. ಬ್ಯಾಂಕ್ ಪಾವತಿಸಲಿದೆ. ಹೆಚ್ಚಿನ ವಿವರಗಳಿಗೆ www.rbi.org.in ವೀಕ್ಷಿಸಬಹುದಾಗಿದೆ.