ಕಾರಂಜಿಯಲ್ಲಿ ಅರಳಿದ ಮಕ್ಕಳ ಪ್ರತಿಭೆ
ಕಲಬುರಗಿ:ಸೆ.6:ತಾಲೂಕಿನ ಫರಹತಾಬಾದ ಸರ್ಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿಂದು ಮಕ್ಕಳ ಪ್ರತಿಭೆ ಅನಾವರಣವಾಯಿತು.
ಜನಪದ ನೃತ್ಯ, ಛದ್ಮವೇಷ, ಗಜಲ್, ಮಿಮಿಕ್ರಿ, ದೇಶಭಕ್ತಿ ಗೀತೆ, ರಂಗೋಲಿ, ಆಶು ಭಾಷಣ, ಕ್ಲೇ ಮಾಡೆಲಿಂಗ್, ಧಾರ್ಮಿಕ ಪಠಣ, ಸಾಭಿನಯ ಗೀತೆ, ಚಿತ್ರಕಲೆ ಮುಂತಾದ ಸ್ಪರ್ಧೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಸಾಧರಪಡಿಸಿದರು.
ಉದ್ಘಾಟಕರಾಗಿ ಆಗಮಿಸಿದ್ದ ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಅವರು ಮಾತನಾಡಿ, ನಿಷ್ಪಕ್ಷಪಾತ ತೀರ್ಪು ನೀಡುವ ಮೂಲಕ ಮಕ್ಕಳಲ್ಲಿರುವ ಸಪ್ತಪ್ರತಿಭೆಯನ್ನು ಹೊರತರುವ ವೇದಿಕೆ ಇದಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಫರಹತಾಬಾದ ಸ ಮಾ ಪ್ರಾ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಶಾಂತಾಬಾಯಿ ಎಸ್ ಸಜ್ಜನ್ ಮತ್ತು ಉರ್ದು ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸೈಯದಾ ತರನುಂ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಎಸ್ಡಿಎಂಸಿ ಅಧ್ಯಕ್ಷ ಪೀರಪ್ಪ ಡೆಂಗಿ, ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಶಿವರಾಜ ಸಜ್ಜನ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ತಿಪ್ಪಾರೆಡ್ಡಿ, ಕಮಲಾಪುರ ಡೈಟ್ ಉಪನ್ಯಾಸಕರಾದ ಚಂದ್ರಕಾಂತ ಕೊಣ್ಣೂರ, ಮೀರಾ ಪಟೇಲ್, ಬಿಆರ್ಪಿ ಬಸಮ್ಮ ಹಿರೇಮಠ, ಸಾಮಾಜಿಕ ಕಾರ್ಯಕರ್ತರಾದ ಡಾ. ಶಿವಕುಮಾರ ಶರ್ಮಾ, ಮಹಾದೇವಿ ಸಜ್ಜನ್, ಅಜೀಂ ಪ್ರೇಂಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಜಗನ್ನಾಥ ಡಾಂಗೆ, ಇ ಸಿ ಓ ದಿನೇಶ್ ತಂಬದ, ಸಿ ಆರ್ ಪಿ ಮಹಿಬೂಬ್ ಪಾಷಾ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಫರಹತಾಬಾದ ಸರ್ಕಾರಿ ಕನ್ನಡ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಕಾಂತ ತಳವಾರ ಅವರು ವಹಿಸಿದ್ದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕಲಬುರಗಿ ದಕ್ಷಿಣ ವಲಯದ ಸಮನ್ವಯಾಧಿಕಾರಿ ಡಾ. ಪ್ರಕಾಶ ರಾಠೋಡ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶ್ವರಗೌಡ ಪಾಟೀಲ್ ಅವರು ಆಗಮಿಸಿದ್ದರು.
ಸಹ ಶಿಕ್ಷಕ ಲಾಡ್ಲೆ ಪಟೇಲ್ ಅವರು ಸ್ವಾಗತಿಸಿದರು. ತಾಡ ತೆಗನೂರು ಶಾಲೆಯ ಮುಖ್ಯೋಪಾಧ್ಯಾಯ ಶಿವಕುಮಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಣ್ಣ ಜಾಬಾ ಅವರು ನಿರೂಪಿಸಿದರು. ಈರಣ್ಣ ಪಾಟೀಲ್ ಮಿಣಜಗಿ ವಂದಿಸಿದರು.