ನಮ್ಮ ಹಿರಿಯರು ನಮ್ಮ ಆದಶ೯ : ಹಿರಿಯ ನಾಗರಿಕರಿಗೆ ಕ್ರೀಡಾ ಸ್ಪರ್ಧೆ
ಕಲಬುರಗಿ:ಸೆ.6: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ “ನಮ್ಮ ಹಿರಿಯರು ನಮ್ಮ ಆದಶ೯ “ ಎಂಬ ಘೋಷವಾಕ್ಯದೊಂದಿಗೆ “ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ” ವತಿಯಿಂದ ಹಿರಿಯ ನಾಗರಿಕರಿಗೆ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪಧೆ೯ಗಳನ್ನು ಹಮ್ಮಿಕೊಳ್ಳಲಾಯಿತು.
103 ವಷ೯ದ ಒಬ್ಬ ಶತಾಯುಷಿ ಹಿರಿಯ ಮಹಿಳೆ “ಸಂಗಮ್ಮ ಅಜ್ಜಿ “ ಇವರು ಇತರರಿಗೆ ಮಾದರಿಯಾಗಿದ್ದ ವಿಶೇಷವಾಗಿದಲ್ಲದೇ, ಸ್ಪರ್ಧೆಯಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನಿರೂಪಣಾಧಿಕಾರಿ, ಮಹಿಳಾ ಅಧಿಕಾರಿ, ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳು ಉಪಸ್ಥಿತರಿದ್ದರು.