ಸೆಪ್ಟಂಬರ್ 9 ರಂದು ಮಲ್ಲಿಕಾರ್ಜುನ ಪಲ್ಲಕ್ಕಿ ಮಹೋತ್ಸವ
ಕಲಬುರಗಿ:ಸೆ.6: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರಾವಣ ಮಾಸದ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಪಂಚ ಮಂಡಳಿ ವತಿಯಿಂದ ಕಲಬುರಗಿ ನಗರದ ಲೋಹಾರ ಗಲ್ಲಿಯ ಮಹಾದೇವ ನಗರದ ಶ್ರೀ ಮಲ್ಲಿಕಾರ್ಜುನ ಪಲ್ಲಕ್ಕಿ ಮಹೋತ್ಸವವು ಇದೇ ಸೆಪ್ಟಂಬರ್ 9 ರಂದು ನಡೆಯಲಿದೆ.
ಅಂದು ಮಲ್ಲಿಕಾರ್ಜುನ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಆರಂಭವಾಗಿ ನಗರದ ಪ್ರಮುಖ ರಸ್ತೆಯ ಮುಖಾಂತರ ಮತ್ತೆ ದೇವಸ್ಥಾನದಲ್ಲಿ ಸಪ್ಪನ್ನಗೊಳ್ಳುವುದು. ಮೆರವಣೆಗೆಯಲ್ಲಿ ಮಹಾದೇವ ನಗರ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪಾಲ್ಗೊಳ್ಳುವರು. ಇದಕ್ಕೂ ಮುನ್ನ ಸೆಪ್ಟಂಬರ್ 8 ರಂದು ಭಕ್ತರಿಂದ ಅನ್ನಸಂಪರ್ಣೆ (ಖಾಂಡ) ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಮಲ್ಲಿಕಾರ್ಜುನ ಪಂಚ ಮಂಡಳಿ ವತಿಯಿಂದ ಮನವಿ ಮಾಡಲಾಗಿದೆ.