ಘನತ್ಯಾಜ್ಯ ನಿರ್ವಹಣೆ: ಟೆಂಡರ್ ಅವ್ಯವಹಾರ ತನಿಖೆಗೆ ಆಗ್ರಹ
ಕಲಬುರಗಿ, ಸೆ. 6: ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ, ವಾಹನ ಚಾಲಕ ಮತ್ತು ವಾಹನ ಚಾಲಕ ಕಂ. ಆಪರೇಟರಗಳನ್ನು ಹಾಗೂ ಲೋಡರ್‍ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಪೂರೈಕೆಗಾಗಿ ಕರೆದ ಟೆಂಡರನಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಜೈ ಕನ್ನಡಿಗರ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ, ವಾಹನ ಚಾಲಕ, ವಾಹನ ಚಾಲಕ ಕಂ. ಆಪರೇಟರಗಳನ್ನು ಮತ್ತು ಲೋಡರ್‍ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಪೂರೈಕೆಗಾಗಿ ಟೆಂಡರನ್ನು ಆಹ್ವಾನಿಸಿದ್ದು ಈ ಟೆಂಡರನಲ್ಲಿ ಜಿಲ್ಲಾಧಿಕಾರಿಗಳಿಗಳಾಲಿ ಅಥವಾ ಸಂಬಂಧಪಟ್ಟ ಬೇರೆ ಅಧಿಕಾರಿಗಳು ಸರ್ವಿಸ ಸೇವಾ ಶುಲ್ಕ ಚಾರ್ಜ 4.99% ಪ್ರತಿಶತ ಮಾತ್ರ ನೀಡುವ ಅಧಿಕಾರವಿರುತ್ತದೆ. ಆದರೆ ಹೊರತಾಗಿ ಹೆಚ್ಚಿನ ಪ್ರತಿಶತ ಸರ್ವಿಸ ಚಾರ್ಜ ನೀಡಬೇಕಾದರೆ ಅದಕ್ಕೆ ಸರಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ ಅದು ಇಲ್ಲಿ ಪಾಲನೆ ಆಗುತ್ತಿಲ್ಲ.
ಕರೆದಿರುವ ಈ ಟೆಂಡರನಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು ಸೇವಾ ಶುಲ್ಕ ಸವಿ9ಸ್ ಚಾರ್ಜನ್ನು 9.99% ಪ್ರತಿಶತ ನೀಡಿರುತ್ತಾರೆ. ಆದರೆ ಆಯುಕ್ತರಿಗೆ 3.00% ಪ್ರತಿಶತಕ್ಕಿಂತ ಕಡಿಮೆ ಇದ್ದರೆ ಮಾತ್ರ ಅವರಿಗೆ ಅಪೆÇೀರ್ವಲ್ ಅನುಮತಿ ಕೊಡುವುದು ಇರುತ್ತದೆ. ಅಲ್ಲದೆ ಇವರು ತಮ್ಮ ಮೇಲಾಧಿಕಾರಿಗಳಿಂದ ಅಪೂರ್ವಲ್ ಪಡೆಯದೆ ತಾವೇ ಅಪೂರ್ವಲ್ ನೀಡಿರುತ್ತಾರೆ. ಇವರು ಈ ರೀತಿಯಾಗಿ ಮಾಡಿರುವುದು ನೋಡಿದರೆ ಈ ಟೆಂಡರ್‍ದಾರರ ಜೋತೆ ಶಾಮಿಲಾಗಿದ್ದಾರೆಂದು ಕಂಡುಬರುತ್ತದೆ.
ಅಲ್ಲದೆ ಇವರ ಜೋತೆ ಈ ಟೆಂಡರಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಶಾಮಿಲಾಗಿರುವುದು ಕಂಡುಬರುತ್ತದೆ ಹೀಗಾಗಿ ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ ಮತ್ತು ಕಾಯ9ಕತ9ರು ಭಾಗವಹಿಸಿದ್ದರು.