ಶಾಂತಶ್ರೀ ಪ್ರಶಸ್ತಿಗೆ ಮಲ್ಲಿನಾಥಗೌಡ,ಡಾ.ದಯಾನಂದರೆಡ್ಡಿ ಆಯ್ಕೆ
ಕಲಬುರಗಿ,ಸೆ 6: ಜೇವರಗಿ ತಾಲೂಕಿನ ನರಿಬೋಳದ ಶಾಂತಪ್ಪ ಪಾಟೀಲ ನರಿಬೋಳ ಅವರ ಸ್ಮರಣಾರ್ಥ ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಈ ಬಾರಿ ರಾಜಕೀಯ ಕ್ಷೇತ್ರದ ಮಲ್ಲಿನಾಥಗೌಡ ಪಾಟೀಲ ಯಲಗೋಡ ಮತ್ತು ಮೆಟ್ರೋ ಆಸ್ಪತ್ರೆಯ ಎಂಡಿ ಡಾ.ದಯಾನಂದರೆಡ್ಡಿ ಡಿಗ್ಗಾವಿ (ವೈದ್ಯಕೀಯ ಕ್ಷೇತ್ರ ) ಅವರಿಗೆ ಶಾಂತಶ್ರೀ ಪ್ರಶಸ್ತಿ ನೀಡಲು ತಿರ್ಮಾನಿಸಲಾಗಿದೆ. ಸೆ 12 ರಂದು ನಗರದ ಕನ್ನಡಭವನದಲ್ಲಿ ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಸಾನಿಧ್ಯವನ್ನು ಯಾದಗಿರಿ ಜಿಲ್ಲಾ ಮಠಾಧೀಶರ ಒಕ್ಕೂಟ ಅಧ್ಯಕ್ಷರಾದ ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಹಾಗೂ ಸ್ಟೇಷನ್ ಬಬಲಾದ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ತೋಂಟದಾರ್ಯ ಶಿದ್ದಲಿಂಗೇಶ್ವರ ಮಠ ರುದುನೂರ ಕಾಳಗಿ ಯ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪಾ ಡಗೆ ,ಅತಿಥಿಗಳಾಗಿ ಶಿವರಾಜಪಾಟೀಲ ರದ್ದೇವಾಡಗಿ, ಸಂತೋಷ ಬಿಲಗುಂದಿ, ಕಾವ್ಯಶ್ರೀ ಮಹಾಗಾಂವಕರ್, ಚೇತನ್ ಗೌಡ ಗೋನಾಯಕ್,ಮಹೇಶ್ವರಿ ಶಿವಕುಮಾರ ವಾಲಿ ಆಗಮಿಸುವರು.
ಇದೇ ಸಂದರ್ಭದಲ್ಲಿ ರಾಷ್ಠ್ರಪತಿ ಪದಕ ಪಡೆದ ಡಿವೈಎಸ್ ಪಿ ಬಸವೇಶ್ವರ ಹೀರಾ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೇವಿಂದ್ರಪ್ಪಾ ಗಣಮುಖಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕಲಬುರಗಿ ನೂತನ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಮತ್ತು ತಂಡದ ಎಲ್ಲಾ ಕಾರ್ಯಕಾರಿಣಿ ಸದಸ್ಯರು ರಾಷ್ಠ್ರೀಯ ರಾಜ್ಯಕಾರ್ಯಕಾರಿಣಿ ಸದಸ್ಯರಾದ ಚಂದು ಪಾಟೀಲ ಹಾಗೂ ರಾಜ್ಯ ಕಾರ್ಯಕಾರಿಣಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಶ್ರೀ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.