ಕುಂಟೋಜಿ ಬಳಿ ಭೀಕರ ರಸ್ತೆ ಅಪಘಾತ: ನಾಲ್ವರ ಸಾವು, ಮೂವರಿಗೆ ಗಾಯ
ವಿಜಯಪುರ: ಸೆ.6 :ಜಾತ್ರೆಗೆ ಆಗಮಿಸಿದ್ದವರ ಮೇಲೆ ಪಲ್ಸರ್ ಬೈಕ್ ಹರಿದ ಪರಿಣಾಮ ನಾಲ್ವರು ಮೃತಪಟ್ಟು, ಇತರ ಮೂವರು ಗಾಯಗೊಂಡಿರುವ ದುರಂತ ನಿನ್ನೆ ತಡರಾತ್ರಿ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿ ಸಂಭವಿಸಿದೆ.
ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಪಲ್ಸರ್ ಬೈಕ್,
ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು,
ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಓರ್ವ ಗಾಯಾಳು ಸಾವನಪ್ಪಿದ್ದಾನೆ.
ಬೈಕ್ ಸವಾರ, ಹಿಂಬದಿ ಸವಾರ ಹಾಗೂ
ರಸ್ತೆ ಬದಿ ನಿಂತಿದ್ದ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಿಂಗರಾಜ ಚೌಧರಿ (22) ಬೈಕ್ ಸವಾರ
ತಾಳಿಕೋಟೆ ತಾಲೂಕಿನ ಗೋಟಖಂಡಕಿ ಗ್ರಾಮದ ನಿವಾಸಿ
ಅನೀಲ ಖೈನೂರ (23) ಬೈಕ್ ಹಿಂಬದಿ ಸವಾರ ದೇವರಹಿಪ್ಪರಗಿ ತಾಲೂಕಿನ
ಹಂಚಲಿ ಗ್ರಾಮದ ನಿವಾಸಿ, ರಸ್ತೆ ಬದಿ ನಿಂತಿದ್ದ
ಮುದ್ದೇಬಿಹಾಳ ತಾಲೂಕಿನ
ಮಲಗಲದಿನ್ನಿ ಗ್ರಾಮದ ಉದಯಕುಮಾರ ಪ್ಯಾಟಿ (19) ಸ್ಥಳದಲ್ಲೇ ಸಾವು
ಹಾಗೂ ರಾಯಪ್ಪ ಬಾಗೇವಾಡಿ (24)
ಚಿಕಿತ್ಸೆ ಪಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮುದ್ದೇಬಿಹಾಳ ತಾಲ್ಲೂಕಿನ ಮಲಗಲದಿನ್ನಿ ಗ್ರಾಮದ ಶಾಹೀದ್ ಹುನಗುಂದ, ಪ್ರಶಾಂತ ಕುರುಬಗೌಡರ, ಹನುಮಂತ ಕುರುಬಗೌಡರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರೂ ಕುಂಟೋಜಿ ಗ್ರಾಮದ ಬಸವೇಶ್ವರ ಜಾತ್ರೆಗೆ ಆಗಮಿಸಿದ್ದರು.
ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.