ವಿನಯವಂತಿಕೆ ಜೀವನಕ್ಕೆ ವಿದ್ಯೆಯೇ ಭೂಷಣ
ವಾಡಿ:ಸೆ.6: ಜೀವನದಲ್ಲಿ ನಾವು ಪರಿಪೂರ್ಣ ಶಿಕ್ಷಣ ಪಡೆದರೆ ಅದು ನಮ್ಮಲ್ಲಿ ವಿನಯವಂತಿಕೆ ಬೆಳೆಸುತ್ತದೆ ಎಂದು ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಮಂಜುಳಾ ಎಂ. ಹೇಳಿದರು.
ಸಮೀಪದ ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಆಳವಾದ ಕಂದಕ ನಿರ್ಮಾಣವಾಗುತ್ತಿದೆ. ಶಿಕ್ಷಕರ ಮಾತಿಗೆ ವಿದ್ಯಾರ್ಥಿಗಳು ಬೆಲೆ ಕಟ್ಟುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿಯೇ ದುಡಿಯುವ ಶಿಕ್ಷಕರ ಮಾತು ವಿದ್ಯಾರ್ಥಿಗಳ ಜೀವನ ರೂಪಿಸುತ್ತದೆ. ಶಿಕ್ಷಕರು ಹೇಳಿ ಕೊಡುವ ಪಾಠ ನಿμÉ್ಠಯಿಂದ ಮಕ್ಕಳು ಕೇಳಬೇಕು. ಜೀವನದಲ್ಲಿ ಪರಿಪೂರ್ಣತೆ ಬಂದು ಆ ವಿದ್ಯಾರ್ಥಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ಇದರಿಂದ ಶಿಕ್ಷಕರ ಬದುಕು ಸಹ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದ ಅವರು, ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಳ್ಳಬೇಕು ತಂದೆ ತಾಯಿಗಳು ಗುರು ಹಿರಿಯರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖಂಡ ಭೀಮಾಶಂಕರ ಇಂದೂರ, ಎಸ್‍ಡಿಎಂಸಿ ಸಮಿತಿ ಉಪಾಧ್ಯಕ್ಷ ಬಸವರಾಜ ಸುಲೆಪೇಠ, ಹರಿಸಿಂಗ್ ಚವ್ಹಾಣ ಮಾತನಾಡಿದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಹೆಬೂಬೀ ಖದೀರ್ ಮುಲ್ಲಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಸವರಾಜ ಗೌಡ ಪೆÇಲೀಸ್ ಪಾಟೀಲ್ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಶಿಕ್ಷಕರಾದ ವೀರಣ್ಣ ಪಂಚಾಳ, ಶೈಲಾಶ್ರೀ ಕೌಲಹಾಗ, ದೈಹಿಕ ಶಿಕ್ಷಕ ಸುರೇಶ ರಾಂಪೂರೆ, ಅತಿಥಿ ಶಿಕ್ಷಕರಾದ ಜೈಯಶ್ರೀ ಶಿರವಾಳ, ಗುರುಬಾಯಿ ಪಾಟೀಲ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು. 7ನೇ ತರಗತಿ ವಿದ್ಯಾರ್ಥಿನಿ ಕು.ಶಿವಾನಿ ಪ್ರಾರ್ಥನೆ ಗೀತೆ ಹಾಡಿದರು. ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಆತ್ಮೀಯವಾಗಿ ಸತ್ಕರಿಸಿ, ಗೌರವಿಸಿದರು.