ಗುರುವನ್ನು ಗೌರವಿಸುವ ದಿನ ಶಿಕ್ಷಕರ ದಿನ:ಲಿಂಗಾರೆಡ್ಡಿ ನಾಯಕ
ಸೈದಾಪುರ:ಸೆ.6:ಜ್ಞಾನವನ್ನು ಧಾರೆ ಎರೆದು ಪ್ರತಿಯೊಬ್ಬರ ಯಶಸ್ಸಿನ ಜೀವನದ ಏಳಿಗೆಗೆ ಕಾರಣರಾದ ಗುರು ವೃಂದವನ್ನು ನೆನಪಿಸಿ ಗೌರವಿಸುವ ದಿನವೇ ಶಿಕ್ಷಕರ ದಿನವಾಗಿದೆ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ವರ್ಧಕ ಡಿ.ಎಲ್.ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರು ತಮ್ಮ ಜನ್ಮ ದಿನವನ್ನು ಶಿಕ್ಷಕ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿ ಶಿಕ್ಷಕ ಸಮೂದಾಯವನ್ನು ಗೌರವಿಸುವಂತೆ ಮಾಡಿದ್ದಾರೆ. ಇದರ ಮಹತ್ವ ಹೆಚ್ಚಾಗುವಂತೆ ಮಾಡಲು ಶಿಕ್ಷಕರು ಸಮರ್ಪಣಾ ಭಾವನೆಯೊಂದಿಗೆ ಕೆಲಸ ಮಾಡಬೇಕು. ಶಿಕ್ಷಕ ವೃತ್ತಿ ಶ್ರೇಷ್ಠವಾದದು. ಸಮಾಜದ ಉತ್ತಮ ಸಂಪನ್ಮೂಲವಾಗಿ ನಮ್ಮನ್ನು ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಶಿಕ್ಷಣಾರ್ಥಿಗಳು ಉಪನ್ಯಾಸಕರಿಗಾಗಿ ವಿವಿಧ ಸ್ಪರ್ಧೇಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಶಿಕ್ಷಕ ವೃತ್ತಿ ಅಂತ್ಯಂತ ಶ್ರೇಷ್ಠವಾದದು ಈ ಕ್ಷೇತ್ರವನ್ನು ನೀವು ಆಯ್ದು ಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದೊಂದು ಸೇವಾ ಮನೋಭಾವನೆಯ ಕಾರ್ಯವಾಗಿದೆ. ಮಕ್ಕಳು ನಮ್ಮನ್ನು ಗೌವಿಸುವಂತಾಗಬೇಕಾದರೆ ನೇಮಕಾತಿ ಶಿಕ್ಷಕರಾಗದೆ ಉತ್ತಮ ಆದರ್ಶ ಶಿಕ್ಷಕರಾಗಬೇಕು. ಇದಕ್ಕಾಗಿ ಸತತ ಅಧ್ಯಯನ ಹಾಗೂ ಪರಿಶ್ರಮ ಅತಿ ಮುಖ್ಯವಾಗಿದೆ.
ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು ಡಿ.ಎಲ್.ಇಡಿ ಕಾಲೇಜು ಸೈದಾಪುರ