ಗುರುಕುಲದ ಮಕರಂದ ಹೀರಿ ಸಮಾಜಕ್ಕೆ ಸಿಹಿ ನೀಡಿ : ತಹಸೀಲ್ದಾರ ಯಲಗೋಡ
ಜೇವರ್ಗಿ :ಸೆ.6: ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿನ ಮಕ್ಕಳು ಗುರುಕುಲದ ಮಕರಂದ ಹಿರಿ, ಜೇನು ನೋಣ ಹೇಗೆ ಸಿಹಿಯನ್ನು ನೀಡುತ್ತದೆಯೋ ಆ ರೀತಿಯಲ್ಲಿ ಸಮಾಜದಲ್ಲಿ ಉತ್ತಮ ನಾಗರೀಕರಾಗಿ,ಭವ್ಯ ಭಾರತಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ತಹಸೀಲ್ದಾರ ಮಲ್ಲಣ್ಣ ಯಲಗೋಡ ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಗುರುಕುಲ ಪ್ರಾಥಮಿಕ, ಪ್ರೌಢ ಹಾಗೂ ಶ್ರೀಮತಿ ದಾನಮ್ಮ ಪ ಪೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ತಹಸೀಲ್ದಾರ ಮಲ್ಲಣ್ಣ ಯಲಗೋಡ ಮಾತನಾಡಿದರು.
ಗುರುಕುಲದಲ್ಲಿ ರಾಜ್ಯಮಟ್ಟದ ಗುರುದೇವ ಪ್ರಶಸ್ತಿ ವಿಜೇತ ಡಾ.ಧರ್ಮಣ್ಣ ಕೆ ಬಡಿಗೇರ ರವರನ್ನು ನಲ್ಮೇಯ ಸನ್ಮಾನ ಮಾಡಿದ್ದು,ನೋಡಿದರೆ, ಈ ಸಂಸ್ಥೆಯ ಸಂಸ್ಕಾರ ,ಸಂಸ್ಕøತಿ ತಿಳಿಯುತ್ತದೆ. ಗುರುಕುಲ ಶಾಲಾ ಆವರಣದಲ್ಲಿ ಓದುತ್ತಿರುವ ವಿಧ್ಯಾರ್ಥಿಗಳು ನಿಜಕ್ಕೂ ಭಾಗ್ಯಶಾಲಿಗಳು ಎಂದು ಗುರುಕುಲ ಆಡಳಿತ ಮಂಡಳಿಗೆ ಬಗ್ಗೆ ಮೆಚ್ಚುಗೆ ಯಲಗೋಡ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿರಣ್ಣ ಬೊಮ್ಮನಳ್ಳಿ, ಗುರುವಿನ ಸ್ಥಾನ ಎಲ್ಲಾ ಸ್ಥಾನಮಾನ,ಅಂತಸ್ತುಗಳಿಗಿಂತ ಬಲು ದೊಡ್ಡದು.ಗುರುವಿನ ಗುಲಾಮರಾಗಿ,ಗುರುವಿನಲ್ಲಿನ ಜ್ಞಾನದ ಖಜಾನೆಯನ್ನು ವಿಧ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಮುದ್ದು ಮಕ್ಕಳಿಂದ ಆಶು ಭಾಷಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮುದ್ದು ಪುಠಾಣಿಗಳ ಭಾಷಣ,ಸಂಸ್ಕಾರಕ್ಕೆ ವೇದಿಕೆ ಮೇಲಿನ ಗಣ್ಯರು ಸೇರಿದಂತೆ ಪ್ರೇಕ್ಷಕ ವರ್ಗ ಚಪ್ಪಾಳೆಯ ಸುರಿಮಳೆ ಗೈದರು.
ಗುರುದೇವ ಬಡಿಗೇರಗೆ ನಲ್ಮೇಯ ಸತ್ಕಾರ
ಗುರುಕುಲ ಶಿಕ್ಷಣ ಸಂಸ್ಥೆಯ ವತಿಯಿಂದ, ರಾಜ್ಯಮಟ್ಟದ ಗುರುದೇವ ಪ್ರಶಸ್ತಿ ವಿಜೇತ ಪ್ರಾಚಾರ್ಯ ಡಾ.ಧರ್ಮಗಳ ಕೆ ಬಡಿಗೇರಗೆ ನಲ್ಮೇಯ ಸನ್ಮಾನ ಮಾಡುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಬಹು ವೈಶಿಷ್ಟ್ಯ ಪೂರ್ಣವಾಗಿ ಗುರುಕುಲ ಸಂಸ್ಥೆ ಆಚರಿಸಿತು.