ಭಾರತ ಪ್ರಪಂಚದ ದೊಡ್ಡ ಶೈಕ್ಷಣಿಕ ಪ್ರಯೋಗ ಶಾಲೆ : ಹಾರಕೂಡ ಶ್ರೀ
ಬೀದರ:ಸೆ.6:ವಿಶ್ವ ಜ್ಞಾನ ಸಿರಿಯ ಕಣಜ, ದರ್ಶನಿಕರ ತವರು, ಗುರು ಪರಂಪರೆಯ ಪರಂಧಾಮ, ಸಮನ್ವಯ ಸಂಸ್ಕøತಿಯ ವಿಶಿಷ್ಟ ತಾಣವಾದ ಭಾರತ, ಪ್ರಪಂಚದ ದೊಡ್ಡ ಶೈಕ್ಷಣಿಕ ಪ್ರಯೋಗ ಶಾಲೆಯೂ ಹೌದು, ಭಾರತೀಯರೆಂದರೆ ಬೆಳಕಿನಿಂದ, ಬೆಳಕಿನೆಡೆಗೆ, ಮಹಾ ಬೆಳಕಿನ ಪ್ರಾಪ್ತಿ ಗೋಸ್ಕರ ಶಿಕ್ಷಣವನ್ನೇ ಸಾಧನ ಮಾಡಿಕೊಂಡು ಆ ನಿಟ್ಟಿನಲ್ಲಿ ಪಯಣಿಸುವಂಥವರು ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಜರುಗಿದ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ನೇತೃತ್ವ ವಹಿಸಿದ ಪೂಜ್ಯರು ಏಷ್ಯಾದ ಬೆಳಕು ಎನಿಸಿದ ಬುದ್ಧ, ಈ ನಾಡಿನ ಸಂಸ್ಕೃತಿಕ ನಾಯಕ ಬಸವಣ್ಣ, ವಿಶ್ವ ಜ್ಞಾನಿ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾನ್ ತತ್ವಜ್ಞಾನಿ, ಶಿಕ್ಷಣ ತಜ್ಞ ಸರ್ವೆಪಲ್ಲಿ ರಾಧಾಕೃಷ್ಣನ್, ಜ್ಯೋತಿಬಾ ಫುಲೆ, ಈ ದೇಶದ ಮೊದಲ ಗುರುಮಾತೆ ಸಾವಿತ್ರಿಬಾಯಿ ಫುಲೆ, ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಷೇಕ್, ಶಾವು ಮಹಾರಾಜ್, ಶ್ರೀ ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು, ಮಹಾತ್ಮ ಗಾಂಧೀಜಿ, ನಾಲ್ವಡಿ ಕೃಷ್ಣರಾಜ ಒಡೆಯರು ಹೀಗೆ ಹಲವಾರು ಮಹಾನುಭಾವರು ಯಾವತ್ತಿಗೂ ಸ್ಮರಣೆಯರು.
ಒಂದು ದೇಶದ ಗಟ್ಟಿ ಆತ್ಮ ನಿರ್ಭರತೆಗೆ ಶಿಕ್ಷಣವೇ ಅಡಿಪಾಯ.
ಹಾಗಾಗಿ ನಮ್ಮ ದೇಶ ಹಾಗೂ ನಾಡಿನ ಶೈಕ್ಷಣಿಕ ಅಂತ ಸತ್ವವನ್ನು ವೃದ್ಧಿಸುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿರುವ ಇಡೀ ಶಿಕ್ಷಕ ಸಮುದಾಯ ಬದುಕಿನ ಯೋಗ್ಯವಾಗಿರುವಂತಹದು.
ಸಮೃದ್ಧವಾದ ಭಾರತದ ನಿರ್ಮಾಣ ಕಾರ್ಯದಲ್ಲಿ ಸೇವೆಗೆಯುತ್ತಿರುವ ಶಿಕ್ಷಕರನ್ನು ಸಮಾಜ ಸ್ಮರಿಸಿಕೊಳ್ಳಬೇಕು, ಗೌರವಿಸಬೇಕು ಎನ್ನುವ ಬಲವಾದ ಉದ್ದೇಶದಿಂದಲೇ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಕರ ದಿನಾಚರಣೆಯಾಗಿ ಅರ್ಥಪೂರ್ಣವಾಗಿ ಸಂಭ್ರಮಿಸುವಂತೆ ಕರೆ ನೀಡಿರುವುದು ಅವರ ತರ್ಕದ ನಿಲುವಿಗೆ ನಿದರ್ಶನವಾಗಿದೆ.
ಅವರು ಹೇಳುವಂತೆ ಶಿಕ್ಷಣದಿಂದ ಜ್ಞಾನ, ಜ್ಞಾನದಿಂದ ಶಕ್ತಿ, ಆ ಶಕ್ತಿಯನ್ನು ಪ್ರೀತಿಯ ಭೂಮಿಗೆ ಮೇಲೆ ಅನುಕೂಲದ ಉದ್ಧಾರಕ್ಕಾಗಿ ಬೆಳೆಸಿದ್ದೆ ಆದರೆ ಪೂರ್ಣತೆ ಫಲಿಸುತ್ತದೆ.
ಹಾಗಾಗಿ ಒಬ್ಬ ಶಿಕ್ಷಕನಾದವನು ನಮ್ಮನ್ನು ನಾವು ಅರಿತುಕೊಳ್ಳಲು ಬೇಕಾಗುವ ಎಲ್ಲಾ ಬಗೆಯ ಪರಿಕರಗಳನ್ನು ಅವಕಾಶಗಳನ್ನು ಕಲ್ಪಿಸಿ ಕೊಡುವಂತಹ ಕೌಶಲ್ಯ ದಾರಿಯಾಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಜುಕೇಶನ್ ಇಸ್ ಎ ಮೂಮೆಂಟ್ ಇಫ್ ಇಟ್ ಡೋಸ್, ನಾಟ್ ಫುಲ್ ಫಿಲ್, ಇಟ್ಸ್ ಒಬ್ಜೆಕ್ಟಿವ್ ಇಟ್ ಇಸ್ ಉಜ್ ಲೆಸ್ ಎನ್ನುವ ಮಾತು ನಾವು ಗೌರವದಿಂದ ಸ್ವೀಕರಿಸಿ, ಆ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಇಡಬೇಕಿದೆ.
“ಟುಡೇಸ್ ಎಜುಕೇಶನ್ ಇಸ್ ಪಾಸ್ ಪೆÇೀರ್ಟ್ ಫಾರ್ ಫ್ಯೂಚರ್” ಎನ್ನುವ ವಿವೇಗವಾಣಿಯಂತೆ ಇವತ್ತಿನ ಶಿಕ್ಷಣ ನಾಳಿನ ಪ್ರಜ್ವಲ ಭವಿಷ್ಯದ ರಹಧಾರಿಯಾಗಿರುವಾಗ ಪ್ರತಿ ಹಂತದ ಶಿಕ್ಷಕರು ಅಧ್ಯಯನ, ಅಧ್ಯಾಪನ ಹಾಗೂ ಅನು ಪಾಲನವನ್ನು ಮೈಗೂಡಿಸಿಕೊಂಡು, ನಿದ್ದೆ ನಾವೇನ್ಯತೆಯಿಂದ, ಕಾರ್ಯಭದ್ಧತೆಯಿಂದ, ಸಮರ್ಪಣಾ ಭಾವದ ಸೇವೆಗೈದು,ಮೃತ್ಯುವಿನ ನಂತರವೂ, ಶಿಷ್ಯ ಬಳಗದ ಹೃದಯದಲ್ಲಿ ಜೀವಂತಿಕೆ ಸಾಧಿಸಬಹುದಾಗಿದೆ.
ಇದು ಸಮರ್ಥ ಶಿಕ್ಷಕನಿಗೆ ಮಾತ್ರಸಾಧ್ಯ.
1989ರಿಂದ ಸತತವಾಗಿ 35 ವರ್ಷಗಳಿಂದ ನಾವು ಶಿಕ್ಷಕ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದು, ಈ ಪಾಲಿನ ಗುರು ಸಂಭ್ರಮ ನಮ್ಮ ಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸುವಂಥಾಗಲು ನಮ್ಮ ಜನಪ್ರಿಯ ಶಾಸಕರು ಶರಣು ಸಲಗರ ರವರ ಸಮ್ಮತಿ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೊದಲುಗೊಂಡು ಎಲ್ಲಾ ಹಂತದ ಅಧಿಕಾರಿ ವರ್ಗ, ವಿವಿಧ ಶೈಕ್ಷಣಿಕ ಸಂಘಟನೆಗಳ ಪೆÇ್ರೀತ್ಸಾಹ ದೊರೆತಿರುವುದು ನಮಗೆ ಖುಷಿ ತಂದಿದೆ.
ಎಲ್ಲರ ಬಾಳಲ್ಲಿ ಹಾರಕೂಡ ಚನ್ನಬಸವ ಯೋಗಿಗಳ ಆಶೀರ್ವಾದದ ಜಲಧಾರೆ ಹರಿಯುತ್ತಿರಲಿ, ಬಸವಕಲ್ಯಾಣ, ಹುಲಸೂರ ಶಿಕ್ಷಕ ವೃಂದದ ಶ್ರಮ ಸಾರ್ಥಕವಾಗಲಿ ಎಂದು ಶುಭ ಹಾರೈಸಿದರು.