ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಅವಶ್ಯ : ತಿಪ್ಪಣ್ಣಪ್ಪ ಕಮಕನೂರ
ಕಲಬುರಗಿ,ಅ.3-ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಭೋದನೆ ಮಾಡಿ ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದಾಗಿರುತ್ತದೆ ಎಂದು ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ನಗರದ ಸೇಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಕಲಬುರ್ಗಿ ಸಾಂಸ್ಕøತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಂಗೀತ ಸಂಭ್ರಮ ಹಾಗೂ ಜಿಲ್ಲಾಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಲನ್ನು ಕಟಿದು ಮೂರ್ತಿ ಮಾಡುವ ಶಿಲ್ಪಿಯ ಹಾಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕೆಲಸ ಶಿಕ್ಷಕರದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಅಮರನಾಥ್ ಪಾಟೀಲ್ ಅವರು, ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಿ ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನ ಮಾಡಿ ಅವರ ಏಳಿಗೆಗಾಗಿ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಬಿ.ಎಚ್. ನಿರುಗುಡಿಯವರು ಸಾಹಿತಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದರ ಮೂಲಕ ಹೆಸರು ಮಾಡಿದ್ದಾರೆ. ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಪ್ರತಿವರ್ಷದಂತೆ ಈ ವರ್ಷವೂ ಅದ್ಭುತವಾಗಿ ಮಾಡಿದ್ದಾರೆ. ಯೋಗ್ಯ ಶಿಕ್ಷಕರನ್ನು ಆಯ್ಕೆ ಮಾಡಿ ಗೌರವಿಸುವುದು ತುಂಬಾ ಶ್ಲಾಘನೀಯವಾದ ಕಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಅಧ್ಯಕ್ಷರಾದ ಮಲ್ಲಯ್ಯ ಗುತ್ತೇದಾರ್ ಮಾತನಾಡಿ, ನಮ್ಮ ಭಾಗದ ಶಿಕ್ಷಕರು ತುಂಬಾ ಕ್ರಿಯಾಶೀಲರು, ಸಮಯ ಪಾಲಕರು ಮಕ್ಕಳಿಗೆ ಪಾಠ ಬೋಧನೆ ಮಾಡಿ ಜಾಣರನ್ನಾಗಿ ಮಾಡುವ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್ ನಾಯಕÀ ನೀಲಕಂಠರಾವ ಮೂಲಗೆ , ಶ್ಯಾಮ ನಾಟಿಕರ್, ದಿಶಾ ಪಿಯು ಕಾಲೇಜಿನ ಅಧ್ಯಕ್ಷರಾದ ಶಿವಾನಂದ್ ಖಜೂರಗಿ, ಸೇಂಟ್ ಮೇರಿ ಚರ್ಚ್ ನ ಫಾದರ್ ಪ್ರವೀಣ್ ವೇದಿಕೆ ಮೇಲೆ ಆಶೀನರಾಗಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಚ್. ನೀರಗುಡಿ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕಾರ್ಯಕ್ರಮದ ನಿರೂಪಣೆ ಡಾ. ಶರಣಬಸಪ್ಪ ವಡ್ಡನಕೇರಿ ಮಾಡಿದರು. ಸಿದ್ದರಾಮ ಬೇತಾಳೆ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಗೀತ ಸಂಭ್ರಮ ನಡೆಯಿತು. ಸೂರ್ಯಕಾಂತ್ ಪೂಜಾರಿ, ಕಿರಣ್ ಪಾಟೀಲ್, ಬಾಬು ಜಾದವ್, ಚಾಮರಾಜ ದೊಡ್ಡಮನಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಆನಂದ ಸಿದ್ದಾಮಣಿ, ಶರಣಗೌಡ ಪಾಟೀಲ್ ಪಾಳಾ, ಪೆÇ್ರ.ಬಿ.ಎಸ್. ಮಾಲಿಪಾಟೀಲ, ಶಿವಶರಣಪ್ಪ ಉದನೂರ, ಅಂಬಾರಾಯ ಮಡ್ಡೆ, ಅಂಬಾರಾಯ ಕೋಣೆ,ಬಸವಂತರಾಯಕೋಳಕೂರ, ರಾಜೇಂದ್ರ ಝಳಕಿ, ನೀಲಕಂಠ ಜಮಾದಾರ ಇದ್ದರು.
ಪ್ರಾಥಮಿಕ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು, ಪದವಿಪೂರ್ವ ಶಿಕ್ಷಕರು, ಪದವಿ ಶಿಕ್ಷಕರು, ಸ್ನಾತಕೋತರ ಪದವಿ ಶಿಕ್ಷಕರು ಹೀಗೆ ಒಟ್ಟು 66 ಶಿಕ್ಷಕರಿಗೆ ಜಿಲ್ಲಾಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.