ನಂದಿಕೂರ: ಗಾಂಧೀ ಜಯಂತಿ ಆಚರಣೆ
ಕಲಬುರಗಿ,ಅ.3: ನಗರ ಹೊರವಲಯದ ನಂದಿಕೂರದ ಶ್ರೀ ವೆಂಕಟಗಿರಿ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಿಸಲಾಯಿತು.
ಅಧ್ಯಕ್ಷ ಪವನ್‍ಕುಮಾರ್ ಬಿ ವಳಕೇರಿ ಪೂಜೆ ನೆರವೇರಿಸಿ ಮಾತನಾಡಿ, ಇಂದು ನಾವು ಸ್ವಾತಂತ್ರ ಸುಖಿ ಜೀವನ ಅನುಭವಿಸಲು ಮಹಾತ್ಮ ಗಾಂಧೀಜಿಯವರ ತ್ಯಾಗ ಬಲಿದಾನ ಕಾರಣ. ಅಹಿಂಸೆಯ ಸಂದೇಶ ಇಂದು ಸಮಾಜಕ್ಕೆ ಅತ್ಯಂತ ಜರೂರಿ ಇದೆ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಶರಣಗೌಡ ಎಂ ನಂದಿಕೂರ,ಬಸಲಿಂಗ ಪಾಟೀಲ್ ಸೀರನೂರ್, ವಿಠಾಬಾಯಿ ಪಾಟೀಲ್ ಹಾಗೂ ತೇಲ್ಕರ್ ಬಡಾವಣೆಯ ನಿವಾಸಿಗಳು ಹಾಜರಿದ್ದರು.