ಆಸರಾಮಜೀ ಬಾಪು ಆಶ್ರಮದಲ್ಲಿ ಸಾಮೂಹಿಕ ಶ್ರಾದ್ಧ
ಕಲಬುರಗಿ,ಅ.3: ನಗರದ ಮೋಹನ ಲಾಡ್ಜ್ ಎದುರಿಗೆ ಇರುವ ಸಂತ ಶ್ರೀ ಆಸರಾಮಜೀ ಬಾಪು ಆಶ್ರಮದಲ್ಲಿ ಪರಮ ಪೂಜ್ಯ ಸಂತ್ ಶ್ರೀ ಆಸರಾಮಜಿ ಬಾಪೂ ರವರ ನಿರ್ದೇಶಾನುಸಾರ
ಆಯೋಜಿಸಲಾಗಿದ್ದ ಸಾಮೂಹಿಕ ಶ್ರಾದ್ಧ ಕಾರ್ಯಕ್ರಮದಲ್ಲಿ ಕಲಬುರಗಿ ಸುತ್ತ ಮುತ್ತಲಿನ ಅನೇಕ ಸಾಧಕ ಪರಿವಾರದವರು ಅತಿ ಉತ್ಸಾಹದಿಂದ ಭಾಗವಹಿಸಿ, ಪೂಜೆ ಹೋಮ, ಪಿಂಡ ದಾನ, ತರ್ಪಣ ಇತ್ಯಾದಿಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಭಗವದ್ಗೀತೆಯ 7ನೆಯ ಅಧ್ಯಾಯದ ಸಾಮೂಹಿಕ ಪಾಠ ನಡೆಯಿತು.
ನಾಳೆ (ಅ.4 ) ಸಂತ ಶ್ರೀ ಆಸಾರಾಮಜೀ ಬಾಪೂರವರ 60 ನೇ ಆತ್ಮ ಸಾಕ್ಷಾತ್ಕಾರ ದಿವಸದ ಅಂಗವಾಗಿ ಆಶ್ರಮದಲ್ಲಿ ಹೋಮ ಪೂಜೆ ಸಾಮೂಹಿಕ ಪಾರಾಯಣ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಸಾಧಕ ಪರಿವಾರದವರು ಅತಿ ಉತ್ಸಾಹದಿಂದ ಭಾಗವಹಿಸಿ ಇದರ ಲಾಭ ಪಡೆಯಬೇಕು ಎಂದು ಸಮಿತಿಯ ಅಧ್ಯಕ್ಷರಾದ ಎಸ್ ವೈ ಪಾಟೀಲ್ ಅವರು ತಿಳಿಸಿದ್ದಾರೆ.