ಮಹಾತ್ಮಾ ಗಾಂಧೀಜಿ ವಿಶ್ವಮಾನ್ಯರು:ಮನೋಹರ ಜೋಶಿ
ಕಲಬುರಗಿ,ಅ.3:ಮಹಾತ್ಮಾ ಗಾಂಧೀಜಿ ದೇವರಿಗಿಂತ ವಿಶ್ವಮಾನ್ಯರು ಎಂದು ಸೊಲ್ಲಾಪುರದ ವಾಲ್‍ಚಂದ್‍ಕಲಾ ಮತ್ತು ವಿಜ್ಞಾನ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಪೆÇ್ರ.ಮನೋಹರ ಪಿ ಜೋಶಿ ಹೇಳಿದರು. ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ
ಆಯೋಜಿಸಿದ್ದ ಮಹಾತ್ಮಾ ಗಾಂಧೀ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀಜಿಯವರ
ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಗಾಂಧೀಜಿಯವರ ಪ್ರಭಾವ ಸಾರ್ವತ್ರಿಕವಾಗಿದೆ.ಅವರು ಸಹಸ್ರಮಾನದ ವ್ಯಕ್ತಿ ಮತ್ತು ಅವರ ತತ್ವಗಳಿಂದಾಗಿ ಅವರು ಇಂದಿಗೂಬಹಳ ಪ್ರಸ್ತುತರಾಗಿದ್ದಾರೆ. ಸತ್ಯ, ಅಹಿಂಸೆ, ಸತ್ಯಾಗ್ರಹ, ಸರ್ವೋದಯ, ಸ್ವರಾಜ,ಸ್ವದೇಶಿ ಮತ್ತು ಟ್ರಸ್ಟಿಶಿಪ್ ಇವು ಗಾಂಧಿ ಸಿದ್ಧಾಂತದ ಪ್ರಮುಖ ತತ್ವಗಳಾಗಿವೆ. ಅವರುತಮ್ಮ ಜೀವನದಲ್ಲಿ ಈ ತತ್ವಗಳನ್ನು ಪ್ರತಿಪಾದಿಸಿದ್ದಾರಲ್ಲದೆ ಅವುಗಳನ್ನು
ಅನುಸರಿಸಿದರು. ಅವರ ಇಡಿ ಜೀವನವು ಪ್ರಯೋಗಗಳು ಮತ್ತು ಸಂದೇಶಗಳಿಂದ
ತುಂಬಿದೆ. ಸುಸ್ಥಿರ ಸಮಾಜಕ್ಕೆ ನಾವು ದುಡಿಮೆಯಿಲ್ಲದ ಸಂಪತ್ತು, ಪ್ರಜ್ಞೆಯಿಲ್ಲದ
ಆನಂದ, ಚಾರಿತ್ರ್ಯವಿಲ್ಲದ ಜ್ಞಾನ, ನೈತಿಕತೆಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ
ವಿಜ್ಞಾನ, ತ್ಯಾಗವಿಲ್ಲದ ಧರ್ಮ ಮತ್ತು ತತ್ವಗಳಿಲ್ಲದ ರಾಜಕೀಯ ಇವು ಏಳು
ಮಾರಕ ಪಾಪಗಳಿಂದ ಮುಕ್ತರಾಗಬೇಕೆಂದು ಗಾಂಧೀಜಿ ಸಲಹೆ ನೀಡಿದ್ದಾರೆ. ಇಂದಿನ
ಪೀಳಿಗೆಯು ಸುಸ್ಥಿರ ಸಮಾಜವನ್ನು ನಿರ್ಮಿಸಲು ಗಾಂಧಿಯನ್ನು ಓದಬೇಕು ಮತ್ತು
ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕೊಡುಗೆಯಿಂದ ಇಂದು ನಾವು ಸರ್ವ
ಸ್ವತಂತ್ರ ರಾಷ್ಟ್ರವಾಗಿದ್ದೇವೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಸಾಧಿಸಲು
ಅವರು ಪ್ರಸ್ತುತಿ, ಪ್ರಾರ್ಥನೆ ಮತ್ತು ಪ್ರತಿಭಟನೆಯ ವಿಧಾನವನ್ನು ಬಳಸಿದರು.ಸ್ವಾವಲಂಬಿ ರಾಷ್ಟ್ರಕ್ಕಾಗಿ ಸ್ವಾವಲಂಬಿ ಗ್ರಾಮಗಳ ಅಗತ್ಯವನ್ನು ಅವರುಪ್ರತಿಪಾದಿಸಿದರು. ಹಾಗಾಗಿ ನಾವು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು.ನಮ್ಮ ಯುವಕರು ಮುಂದಾಳತ್ವ ವಹಿಸಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕುಎಂದು ಅವರು ಹೇಳಿದರು. ದೇಶದ ಬಿಕ್ಕಟ್ಟಿನ
ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಶಾಸ್ತ್ರೀಜಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ
ನೀಡಿದ್ದಾರೆ. ಅವರು ಜೈ ಜವಾನ್ ಮತ್ತು ಜೈ ಕಿಸಾನ್ ಎಂದು ಹೇಳಿದರು, ಏಕೆಂದರೆ
ಸೈನಿಕರು ಮತ್ತು ರೈತರು ದೇಶದ ಬೆನ್ನೆಲುಬು ಎಂದು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಸ್ವಚ್ಛತಾ ಹಿ ಸೇವೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ್ವಚ್ಛತಾ ಹಿ ಸೇವೆಯ ನೋಡಲ್ ಅಧಿಕಾರಿ ಡಾ.ಗಣಪತಿ ಬಿ ಸಿನ್ನೂರ ಸ್ವಾಗತಿಸಿ, ಸ್ವಚ್ಛತಾ ಹಿ
ಸೇವೆಯ ಅಂಗವಾಗಿ ನಡೆದ ವಿವಿಧ ಚಟುವಟಿಕೆಗಳ ವರದಿ ಮಂಡಿಸಿದರು. ಡಾ.ಪ್ರಕಾಶ
ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಡಾ.ಶಿವಂ ಮಿಶ್ರಾ ವಂದಿಸಿದರು. ಈ ಸಂದರ್ಭದಲ್ಲಿ
ಡಾ.ಜಯದೇವಿ ಜಂಗಮಶೆಟ್ಟಿ, ಡಾ.ರವಿಕಿರಣ್ ನಾಕೋಡ್ ಮತ್ತು ಡಾ.ಸ್ವಪ್ನಿಲ್ ಚಾಪೇಕರ್
ಭಜನೆಗಳ್ನು ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು. ಪೆÇ್ರ.ಚನ್ನವೀರ ಆರ್.ಎಂ,
ಪೆÇ್ರ.ವಿಕ್ರಂ ವಿಸಾಜಿ, ಪೆÇ್ರ.ಬಸವರಾಜ ಕುಬಕಡ್ಡಿ, ಪೆÇ್ರ.ಜಿ.ಆರ್.ಅಂಗಡಿ, ಪೆÇ್ರ.ಆರ್.ಎಸ್.ಹೆಗಡಿ,
ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.