ಬೇವಿನ ಮರದಿಂದ ಬಿಳಿ ಹಾಲು
ವಿಜಯಪುರ:ಅ.3: ಜಿಲ್ಲೆ ಬಬಲೇಶ್ವರ ತಾಲೂಕಿನ ವಿಜಯಪುರದಿಂದ ಗಲಗಲಿಯ ರಸ್ತೆಗೆ ಹೊಂದಿಕೊಂಡಿರುವ ಹಲಗಣಿ ಹಾಗೂ ಕಂಬಾಗಿ ಮಧ್ಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೇವಿನ ಮರದಿಂದ ಒಂದು ತಿಂಗಳಿಂದ ತಿಳಿಯಾದ ಬಿಳಿ ಹಾಲು ಬರುತ್ತಿದ್ದು, ಬುಧವಾರ ಮಹಾನವಮಿ ಅಮಾವಾಸ್ಯೆಯ ದಿನ ಪೂಜ್ಯರು, ಜನಪ್ರತಿನಿಧಿಗಳು, ರೈತಮಿತ್ರರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ತಂಡೋಪ ತಂಡವಾಗಿ ಸುತ್ತಲಿನ ಹಳ್ಳಿಯ ಜನತೆ ಬೇವಿನ ಗಿಡ ನೋಡಲು ಆಗಮಿಸಿ ಅಚ್ಚರಿಯನ್ನು ಕಂಡು ಮೂಕವಿಸ್ಮಿತರಾದರು. ಭಜನೆ, ಡÉೂಳ್ಳಿನ ಪದ, ಪ್ರಸಾದ ಸೇವೆ, ಪೂಜೆಗಳÀನ್ನು ಬೇವಿನ ಮರದಡಿ ನೆರವೇರಿಸಲಾಯಿತು.