ಹದಗೆಟ್ಟ ರಸ್ತೆ , ದಿನ ನಿತ್ಯ ಸಂಕಟ , ಬಸವನ ಬಾಗೇವಾಡಿ.ಪಿ.ಡಬ್ಲೂ.ಡಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ಮಹಾಂತೇಶ ಹಾದಿಮನಿ
ದೇವರಹಿಪ್ಪರಗಿ; ಅ.3:ಲೋಕೋಪಯೊಗಿ ಇಲಾಖೆಯ ರಸ್ತೆ ಕಾಮಗಾರಿ ನಿರ್ಮಾಣ ಮಾಡಿ ಒಂದು ತಿಂಗಳ ಅವಧಿಯೊಳಗೆ ಹಾಳಾಗಿ ತೇಪೆ ಹಚ್ಚುವ ಕೆಲಸ ಮಾಡಿದರು ರಸ್ತೆ ಗುಂಡಿಗಳು ಬಾಯಿ ತೆರೆದು ಕೊಳ್ಳತ್ತಾನೆ ಇದ್ದಾವೆ.ನಾಲಕ್ಕು ಕೋಟಿ ವೆಚ್ಚದಲ್ಲಿ ಡಾಂಬರಿಕರಣ ಮಾಡಿರುವಂತಹ ಈ ರಸ್ತೆ ಎಷ್ಟರ ಮಟ್ಟಿಗೆ ಕಳಪೆ ಕಾಮಗಾರಿ ಯಾಗಿರಬಹುದು ಯೋಚನೆ ಮಾಡಿ.ಕಳಪೆ ಮಟ್ಟದ ರಸ್ತೆಗಳನ್ನು ಮಾಡಿ ವಾಹನ ಸವಾರರ ಜೀವದ ಜೊತೆ ಆಟವಾಡುವುದಲ್ಲದೆ ಭ್ರಷ್ಟಾಚಾರ ಎಸಗುತ್ತಿದ್ದಾರೆ.
ಹೌದು ಇದು ದೇವರಹಿಪ್ಪರಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಾತಿಹಾಳ ಡೋಣಿಯಿಂದ ಉತ್ನಾಳ, ದಿಂಡವಾರ, ಹೂ ಹಿಪ್ಪರಗಿ ಮಾರ್ಗ ರಸ್ತೆ ಹದಗೆಟ್ಟ ಕಾರಣ 2019-2020 ನೇ ಸಾಲಿನ ರಾಜ್ಯ ಹೇದ್ದಾರಿ ಸುಧಾರಣೆ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ ನಾಲ್ಕು ಕೋಟಿ ಹಣ ಮಂಜೂರು ಮಾಡಿಕೊಂಡು ಬಸವನ ಬಾಗೇವಾಡಿ ಲೋಕೋಪಯೊಗಿ ಇಲಾಖೆಯ ಅಧಿಕಾರಿಗಳು ಮರು ಡಾಂಬರಿಕರಣ ಕಾಮಗಾರಿ ಮಾಡಿರುತ್ತಾರೆ.
ಅಂದರೆ ಆ ದಿನದಿಂದ ಇಲ್ಲಿಯವರೆಗೆ ಡಾಂಬರಿಕರಣ ರಸ್ತೆ ಟಾರ್ ಕಿತ್ತು ಗುಂಡಿಗಳು ಬಿಳುತ್ತಾನೆ ಇವೆ.ಸಾತಿಹಾಳ ಉತ್ನಾಳ ಮಾರ್ಗ ಮದ್ಯ ರಸ್ತೆ ತುಂಬೆಲ್ಲ ತಗ್ಗು ದಿನ್ನೆಗಳಾಗಿ ಮಾರ್ಪಡಾಗಿದೆ.ಕಿತ್ತು ಗುಂಡಿಗಳಲ್ಲಿ ಮಳೆನೀರು ನಿಂತು ಸವಾರರಿಗೆ ಭಯಪಡಿಸುವತ್ತಿವೆ,ಟಂಟಂ ಬೈಕ್ ಸೇರಿದಂತೆ ಇತರೆ ವಾಹನ ಸವಾರರು ಜೀವ ಕೈಯಲ್ಲಿ ಹೀಡಿದು ಒಡಾಡುವಂತಾಗಿದೆ.ರಸ್ತೆ ಉದ್ದಕ್ಕೂ ಬಿದ್ದ ತಗ್ಗುಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.ಸಂಪೂರ್ಣ ಕಳಪೆ ಮಟ್ಟದ ರಸ್ತೆಯನ್ನು ಮಾಡಿದರು ಯಾವೊಬ್ಬ ಅಧಿಕಾರಿಯೂ ಇದರ ಬಗ್ಗೆ ತೆಲೆಕೆಡಸಿಕೊಂಡಿಲ್ಲ ಎಂದರೆ ಅದೆಂತಹ ವ್ಯವಸ್ಥೆ ರೂಪಗೊಂಡಿರಬೇಕು,ಸರಕಾರದ ಕೆಲಸ ದೇವರ ಕೆಲಸ ಅಂತ ಹೇಳತ್ತಾರೆ ಆ ದೇವರೆ ನಿಮ್ಮನ್ನು ನೋಡಿಕೊಳ್ಳಲಿ ಎಂದು ಈ ರಸ್ತೆಗೆ ಸಂಚರಿಸುವ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದಾರೆ.
ಈ ರಸ್ತೆಯ ಮೇಲೆ ಹಾದು ಹೊಗುವ ವಾಹನಗಳ ಚಾಲಕರು ಮತ್ತು ಪ್ರಯಾಣಿಕರು ಈ ಬಸವನ ಬಾಗೇವಾಡಿ ಲೋಕೋಪಯೊಗಿ ಇಲಾಖೆಯ ಅಧಿಕಾರಿಗಳ ವಿರುದ್ದ ಕಿಡಿ ಕಾರುತ್ತ.ಬಂದ ದಾರಿಗೆ ಸುಂಕವಿಲ್ಲವೆಂದು ಗಟ್ಟಿ ಮನಸ್ಸು ಮಾಡಿಕೊಂಡು ಈ ಹಾಳಾದ ರಸ್ತೆಯಲ್ಲಿ ಹಾಯ್ದು ತಾವುಗಳು ತಲುಪುವ ಊರುಗಳಿಗೆ ತಲುಪುತ್ತಿದ್ದಾರೆ.
ಹದೆಗೆಡು ಹಾಗೆ ರಸ್ತೆ ಮಾಡಿಸುವುದಿದ್ದರೆ ನಾಲ್ಕು ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು.ಜನರ ತೇರಿಗೆ ಹಣವನ್ನು ಲೂಟಿ ಹೊಡೆದು ಶೊಕಿ ಮಾಡುವ ಆಸೆ ಈ ಅಧಿಕಾರಿಗಳಗೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆಗಾಲ ವಿರುವದರಿಂದ ಗುಂಡಿಯಲ್ಲಿ ನೀರುನಿಲ್ಲುವದರಿಂದ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಗುಂಡಿಬಿದ್ದಿರುವದರಿಂದ ರಾತ್ರಿವೇಳೆ ಈ ರಸ್ತೆಗೆ ಸಂಚರಿಸುವುದು ಕಷ್ಟವಾಗಿದೆ.ಶೀಘ್ರದಲ್ಲಿ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು.
-ರಮೇಶ ಹಳ್ಳಿ,(ದಿಂಡವಾರ) ಜಾಂಭವ ಯುವ ಸೇನಾ ಯುವ ಘಟಕ ಅಧ್ಯಕ್ಷರು, ಬ. ಬಾಗೇವಾಡಿ.