4 ಲಕ್ಷ 75 ಸಾವಿರ ಮೌಲ್ಯದ 13 ಬೈಕ್ ಗಳ ವಶ ಆರೋಪಿಗಳ ಬಂಧನ
ಅಥಣಿ :ಅ.3: ಮೋಟಾರ್ ಸೈಕಲ್(ಬೈಕ್) ಗಳನ್ನ ಕದಿಯುತ್ತಿದ್ದ ಕಳ್ಳರನ್ನು ಬಂಧಿಸಿ ಮೋಟಾರ್ ಸೈಕಲ್(ಬೈಕ್) ಗಳನ್ನು ವಶಕ್ಕೆ ಪಡೆಯುವಲ್ಲಿ ಅಥಣಿ ಪೆÇಲೀಸರು ಯಶಸ್ವಿಯಾಗಿದ್ದಾರೆ.
ನೆರೆಯ ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ಅಮೋಲ ಜಿತೇಂದ್ರ ಪವಾರ ಹಾಗೂ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಲಖನ ತಮ್ಮಣ್ಣ ಸುಂಗಾರೆ ಬಂಧಿತ ಆರೋಪಿಗಳಾಗಿದ್ದಾರೆ
ಇತ್ತೀಚಿಗೆ ಅಥಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೋಟಾರ್ ಸೈಕಲ್(ಬೈಕ್) ಗಳು ಕಳ್ಳತನವಾಗಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ
ಡಾ. ಭೀಮಾಶಂಕರ ಗುಳೇದ ಎಸ್ ಪಿ ಬೆಳಗಾವಿ. ಶ್ರುತಿ ಎನ್. ಎಸ್ ಐಪಿಎಸ್ ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು ಬೆಳಗಾವಿ. ಆರ್ ಬಿ ಬಸರಗಿ ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು 2 ಬೆಳಗಾವಿ. ಪ್ರಶಾಂತ ಮುನ್ನೋಳ್ಳಿ ಡಿಎಸ್‍ಪಿ ಅಥಣಿ ಮತ್ತು ರವೀಂದ್ರ ನಾಯ್ಕೋಡಿ ಸಿಪಿಐ ಅಥಣಿರವರ ಮಾರ್ಗದರ್ಶನದಲ್ಲಿ ಅಪರಾಧ ತನಿಖಾ ತಂಡವನ್ನು ರಚಿಸಲಾಗಿತ್ತು.
ಇತ್ತೀಚಿಗೆ ಅಥಣಿ ಪಟ್ಟಣದ ಶಿವಾಜಿ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿ ಅಥಣಿ ಪೆÇಲೀಸರು ಆರೋಪಿಗಳಿಂದ ಒಟ್ಟು 4 ಲಕ್ಷ 75 ಸಾವಿರ ಮೌಲ್ಯದ ಒಟ್ಟು 13 ಬೈಕುಗಳನ್ನು ವಶಕ್ಕೆ ಪಡೆದುಕೊಂಡು, ಖದೀಮರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅಥಣಿ ಪೆÇಲೀಸ್ ಠಾಣೆಯ ಹೆಚ್ಚುವರಿ ಪಿಎಸ್ ಐ ಎಮ್ ಬಿ ಬಿರಾದಾರ ಪಿಎಸ್ ಐ(ಅವಿ) ಪಿ ನಾಗರಾಜ ಪಿಎಸ್ ಐ(ಕಾ&ಸು) ಶಿವಾನಂದ ಕಾರಜೋಳ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆರ್ ಎಸ್ ವಂಟಗುಡಿ, ಜೆ ಆರ್ ಅಸೋದೆ , ಎಂ ಎ ಪಾಟೀಲ, ಎಂ ಬಿ ಮಹೇಶವಾಡಗಿ, ಜಮೀರ್ ಡಾಂಗೆ, ಈರಣ್ಣ ಮಾಯನ್ನವರ, ಮತ್ತು ವಿನೋದ್ ಠಕ್ಕಣ್ಣವರ ತಾಂತ್ರಿಕ ವಿಭಾಗ ಬೆಳಗಾವಿ ಪಾಲ್ಗೊಂಡಿದ್ದರು. ಪೆÇಲೀಸರ ಈ ಕಾರ್ಯ ಸಾಧನೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.