ಕಾನೂನು ಕ್ರಮದ ಭರವಸೆ : ಶಾಸಕ ಲಕ್ಷ್ಮಣ ಸವದಿ ಅವರ ಮನವಿಗೆ ಸ್ಪಂದಿಸಿಮುಷ್ಕರ ಕೈಬಿಟ್ಟ ಪೌರ ಕಾರ್ಮಿಕರು
ಅಥಣಿ :ಅ.6: ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರ ಮೇಲೆ ಹಲ್ಲೆ ಗೈದ ಘಟನೆಯನ್ನು ಖಂಡಿಸಿ ಕಳೆದ ಎರಡು ದಿನಗಳಿಂದ ಪುರಸಭೆ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಪುರಸಭೆ ಆವರಣದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಪೌರ ಕಾರ್ಮಿಕರ ಮುಷ್ಕರದಿಂದ ಪಟ್ಟಣದ
ಜನತೆಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಪುರಸಭೆ ಆವರಣಕ್ಕೆ ಭೇಟಿ ಮುಷ್ಕರ ನಿರತ ಪೌರ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿ ಮನವಿ ಸ್ವೀಕರಿಸಿದರು
ಈ ವೇಳೆ ಮನವಿ ಸ್ವೀಕರಿಸಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಕರ್ತವ್ಯ ನಿರತ ಯಾವುದೇ ಸರ್ಕಾರಿ ಅಧಿಕಾರಿ ಮೇಲಾಗಲಿ ಅಥವಾ ನೌಕರರ ಮೇಲಾಗಲಿ ಹಲ್ಲೆ ಮಾಡುವುದು ಕಾನೂನು ಪ್ರಕಾರ ಅಕ್ಷ್ಯಮ ಅಪರಾಧ. ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಾನೂನು ಚೌಕಟ್ಟಿನೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಹಾಜರಿದ್ದ ಪೆÇೀಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ನೌಕರರು, ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಇರುವಂಥವರು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕೂಡಾ ಅದನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಏಕಾಏಕಿ ಹೂಡಿ ಬಡಿ ಹಲ್ಲೆ ಮಾಡುತ್ತಾ ಹೋದರೆ ಸರ್ಕಾರಿ ನೌಕರರು ಹೇಗೆ ಕೆಲಸ ಮಾಡಲು ಸಾಧ್ಯ? ಈ ಹಲ್ಲೆ ಘಟನೆ ನಡೆಯಬಾರದಿತ್ತು. ಈ ಅಹಿತಕರ ಘಟನೆಗೆ ನಾನೂ ಕೂಡ ಖೇದ ವ್ಯಕ್ತಪಡಿಸುತ್ತೇನೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ, ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಪೆÇೀಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಪೌರ ಕಾರ್ಮಿಕರಿಗೆ ತಿಳಿಸಿದರು.
ನಾನು ಶಾಸಕನಾಗಿ ನಿಮ್ಮ ಪ್ರತಿನಿಧಿಯಾಗಿ ಯಾವತ್ತೂ ನಿಮ್ಮ ಜೊತೆ ಇರುತ್ತೇನೆ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತೇನೆ ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿ ಪೌರ ಕಾರ್ಮಿಕರಿಗೆ ಧೈರ್ಯ ತುಂಬಿದರು.
ಶಾಸಕರ ಮನವಿಗೆ ಸ್ಪಂದಿಸಿದ ಪೌರ ಕಾರ್ಮಿಕರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ಕಾಂಬಳೆ ಶಾಸಕ ಲಕ್ಷ್ಮಣ ಸವದಿ ಅವರು ನಮ್ಮ ಮನವಿಗೆ ಸ್ಪಂದಿಸಿ ನ್ಯಾಯ ಒದಗಿಸುವದಾಗಿ ಭರವಸೆಯನ್ನು ನೀಡಿದ್ದಾರೆ ಆದ ಕಾರಣ ನಾವು ತಕ್ಷಣದಿಂದಲೇ ಮುಷ್ಕರವನ್ನು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಮುಖಂಡ ಬಸವರಾಜ ಕಾಂಬಳೆ ಮಾತನಾಡಿ ಕರ್ತವ್ಯ ನಿರತ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರ ಮೇಲೆ ಹಲ್ಲೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಅವರನ್ನು ಬಂಧಿಸಬೇಕು ಮುಖ್ಯಾಧಿಕಾರಿಗಳ ಮೇಲೆ ಹಲ್ಲೆಗೈದವರಿಗೆ ತಕ್ಕ ಶಿಕ್ಷೆಯಾಗುವ ಮೂಲಕ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಪಟ್ಟಣದ ಜನತೆಗೆ ಕ್ಷಮೆ ಕೋರಿದ ಪೌರ ಕಾರ್ಮಿಕರು”
ಕಳೆದ ಎರಡು ದಿನಗಳಿಂದ ಮುಷ್ಕರ ಕೈಗೊಂಡಿದ್ದರಿಂದ ಪಟ್ಟಣದಲ್ಲಿ ನೀರು ಪೂರೈಕೆ, ಕಸ ವಿಲೇವಾರಿ, ಬೀದಿ ದೀಪಗಳು ಬಂದ್, ಕಚೇರಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿತ್ತು. ಆದರೆ, ನಮಗೆ ನಮ್ಮ ಹಕ್ಕಿಗಾಗಿ, ನ್ಯಾಯಕ್ಕಾಗಿ ಮುಷ್ಕರ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ನಾವು ಇದಕ್ಕೆ ಸಾರ್ವಜನಿಕರಿಗೆ ಸಮಸ್ತ ಕಾರ್ಮಿಕರ ಪರವಾಗಿ ಕ್ಷಮೆಯಾಚಿಸುತ್ತೇನೆ. ತಕ್ಷಣದಿಂದಲೇ ನಾವು ನಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದಕ್ಕೂ ಮೊದಲು ಬೆಳಗ್ಗೆ ಮುಖ್ಯಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಪುರಸಭೆ ನೌಕರರು ಪಟ್ಟಣದ ವಿವಿಧೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂದರ್ಭದಲ್ಲಿ ತಹಶೀಲ್ದಾರ ಸಿದರಾಯ ಬೋಸಗಿ, ಡಿವೈಎಸ್‍ಪಿ, ಪ್ರಶಾಂತ ಮುನ್ನೋಳಿ, ಸಿಪಿಐ ರವೀಂದ್ರ ನಾಯ್ಯೋಡಿ ಹಾಗೂ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಪುರಸಭೆ ಸದಸ್ಯರಾದ ದತ್ತಾ ವಾಸ್ಟರ, ಸಂತೋಷ ಸಾವಡಕರ, ರಾಜು ಗುಡೊಡಗಿ, ಸೈಯದಅಮೀನ್ ಗದ್ಯಾಳ, ಕಲ್ಲೇಶ ಮಡ್ಡಿ. ಮಲ್ಲೇಶ ಹುದ್ದಾರ. ವಿಲೀನರಾಜ ಯಳಮಲ್ಲೆ, ಪ್ರಮೋದ ಬಿಳ್ಳೂರ, ಉದಯ ಸೋಳಸಿ. ಮಲ್ಲಿಕಾರ್ಜುನ ಬುಟಾಳಿ, ಬಸವರಾಜ ಪಾಟೀಲ. ಬಸವರಾಜ ನಾಯಿಕ.
ಪುರಸಭೆ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ. ಮುಖಂಡರಾದ ಆಸೀಫ್ ತಾಂಬೋಳಿ. ಮಹಾಂತೇಶ ಬಾಡಗಿ. ಸೇರಿದಂತೆ ಪುರಸಭೆಯ ಇನ್ನುಳಿದ
ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ತಮ್ಮ ರಕ್ಷಣೆಗಾಗಿ ಹೋರಾಟ ಕೈಗೊಳ್ಳುವುದು ಅವರ ಹಕ್ಕು ಆದರೆ ಕಳೆದ ಎರಡು ಎರಡು ದಿನಗಳಿಂದ ಪಟ್ಟಣದಲ್ಲಿ ನೀರು ಪೂರೈಕೆ, ಕಸ ವಿಲೇವಾರಿ, ಬೀದಿ ದೀಪಗಳು ಬಂದ್, ಕಚೇರಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದರಿಂದ
ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರವನ್ನು ಹಿಂಪಡೆದು ತಮ್ಮ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಪರವಾಗಿ ವಿನಂತಿಸುತ್ತೇನೆ