ಯರಂಗಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.6: ಇಂದು ಕಂಪ್ಲಿ ಕ್ಷೇತ್ರದ ಶಾಸಕ  ಟಿ.ಎಚ್. ಸುರೇಶ್ ಬಾಬು ಅವರ  ನೇತೃತ್ವದಲ್ಲಿ ಕುರುಗೋಡು ತಾಲೂಕಿನ
ಯರಂಗಳಿಗಿ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಮಹಾ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ. ಎಂ ಸತೀಶ್, ಪಕ್ಷದ  ಜಿಲ್ಲಾ ಉಪಾಧ್ಯಕ್ಷ ಎ. ತಿಮ್ಮರೆಡ್ಡಿ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡೇದ ಸುರೇಶ,  ಕಂಪ್ಲಿ ಮಂಡಲ ಅಧ್ಯಕ್ಷರಲ ಅಳ್ಳಳ್ಳಿ ವಿರೇಶ್, ಕಂಪ್ಲಿ ಮಂಡಲ ವಿಸ್ತಾರಕಿ ಭಾಗ್ಯಮ್ಮ ಮತ್ತು ಮಂಡಲ ಪ್ರಧಾನ ಕಾರ್ಯದರ್ಶಿ ಮದಿರೆ ಕುಮಾರಸ್ವಾಮಿ  ಹಾಗೂ ಮಂಡಲ ಉಪಾಧ್ಯಕ್ಷ  ಬಿ. ಏನ್ ಚಂದ್ರಶೇಖರ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ  ನಟರಾಜ್, ಕಂಪ್ಲಿ ಮಂಡಲ ಯುವ ಮೋರ್ಚಾ ಅಧ್ಯಕ್ಷ  ಶಿವರಾಜ್,  ಉಪಾಧ್ಯಕ್ಷ  ಹನುಮೇಶ್ ರೆಡ್ಡಿ ಮತ್ತು ವಿವಿಧ ಮೋರ್ಚಾದ ಪದಾಧಿಕಾರಿಗಳು ಮತ್ತು ಊರಿನ ಮುಖಂಡರು ಇದ್ದರು..
ಈ ವೇಳೆ ಮುಖಂಡರು ಮಾತನಾಡಿ ಪ್ರಧಾನಿ ಮೋದಿ ಅವರ ಆಶಯದಂತೆ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿಯನ್ನು ಯಶಸ್ವಿಯಾಗಿ ನಡೆಸಿ ಪಕ್ಷದ ಬಲವರ್ಧನೆಗೊಳಿಸೋಣ ಎಂದರು.