ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಸ್ಥಿತಿ ಉತ್ತಮವಾಗುತ್ತಿದೆ:ಸಚಿವ ಸೋಮಣ್ಣ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.06:  ಬಳ್ಳಾರಿ ಜಿಲ್ಲೆಯಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿಯವರ ಆಗಮನದಿಂದ ಬಿಜೆಪಿ ಪಕ್ಷ ಬಲಗೊಳ್ಳುತ್ತಿದೆ ಎಂದು ಸಚಿವ ಸೋಮಣ್ಣ ಅಭಿಪ್ರಾಯಪಟ್ಟರು.
ನಗರದಲ್ಲಿಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರೆಡ್ಡಿ ಸಹೋದರರು-ಶ್ರೀರಾಮುಲು ಬೇರೆ ಬೇರೆಯಾದಾಗ ಏನಾಯಿತು..? ಎಂಬುದು ಕಳೆದ ಚುನಾವಣೆಯಲ್ಲಿ ಕಂಡುಬಂದಿದೆ.
ಸದ್ಯ ಬಳ್ಳಾರಿ ಬಿಜೆಪಿ ಸ್ಥಿತಿ ಉತ್ತಮಗೊಂಡಿದ್ದು, ಎಲ್ಲಾ ನಾಯಕರು  ಈಗ ಒಂದಾಗೋ ಸಮಯ ಬಂದಿದೆ. ಒಂದಾಗ್ತಾರೆ ಎಂದರು  ಕೇಂದ್ರ ಸಚಿವ ಸೋಮಣ್ಣ..
ಬಳ್ಳಾರಿ ಅಷ್ಟೇ ಅಲ್ಲ ರಾಜ್ಯದ ಬಿಜೆಪಿಯಲ್ಲೂ ಯಾವ ಸಮಸ್ಯೆ ಇಲ್ಲ..ಡಿಸೆಂಬರ್ ನಂತರ ಪಕ್ಷ ಹಳೇ ಮಾದರಿಯಲ್ಲಿ  ಮತ್ತೊಮ್ಮೆ ಗಟ್ಟಿಯಾಗ್ತದೆ ಎಂದರು..
ಶ್ರೀರಾಮುಲುಗೆ ಶ್ರೀರಾಮುಲು ಅವರೇ ಸಾಟಿ ಆದರೆ ಅವರಿಗೆ ಸ್ವಲ್ಪ ಸ್ಟಾರ್ಟಿಂಗ್ ಟ್ರಬಲ್ ಇದೆ.. ಶೀಘ್ರದಲ್ಲೇ ಎಲ್ಲ ಸರಿ ಹೋಗ್ತದೆ..ರೆಡ್ಡಿ ಸಹೋದರರನ್ನು ಒಂದಾಗಿ ಇಲ್ಲವಾದರೆ ನಿಮಗೆ ನಷ್ಟ ಎಂದು ಪರೋಕ್ಷವಾಗಿ ಹೇಳಿದ  ಸಚಿವ ಸೋಮಣ್ಣ ಅವರು..ಸಿದ್ದರಾಮಯ್ಯ ರಾಜೀನಾಮೆ ನೀಡದೇ ಇರೋ ವಿಚಾರ..ಎಷ್ಟು ಬಾರಿ ಈ ಬಗ್ಗೆ ಮಾತನಾಡಬೇಕು ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಕಾನೂನು ತನ್ನ ಕೆಲಸ ಮಾಡ್ತಿದೆ. ರಾಜೀನಾಮೆ ಕೊಡಿಸೋ ವಿಚಾರ ಅವರ ಪಕ್ಷಕ್ಕೆ ಬಿಟ್ಟದ್ದು.. ನಮ್ಮ ಹೋರಾಟ ನಿರಂತರವಾಗಿದೆ ಎಂದು ತಿಳಿಸಿದರು..
ನಾವ್ಯಾರು ಸಿದ್ದರಾಮಯ್ಯ ಪತ್ನಿ ಬಗ್ಗೆ ಮಾತನಾಡಿಲ್ಲ.. ಊಹೆ ಮಾಡಿಕೊಂಡು ಮಾತನಾಡಬೇಡಿ.. ಸಿದ್ದರಾಮಯ್ಯ ಪತ್ನಿ ಬಗ್ಗೆ ನಮಗೆ ಗೌರವ ಇದೆ.. ಮುಡಾ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ಏನು ಮಾಡ್ತದೆ ಅನ್ನೋದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.