ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಶಿಕ್ಷಕನ ಪಾತ್ರ ಬಹಳ ಮುಖ್ಯ :ರಾಜಕುಮಾರ ಉದನೂರ್
ಕಲಬುರಗಿ:ಸೆ.6:ಉದನೂರು ರಸ್ತೆಯ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರ್ವಪಲ್ಲಿ ಡಾಕ್ಟರ್ ರಾಧಾಕೃಷ್ಣ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ. ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ರಾಜಕುಮಾರ್ ಉದನೂರ್ ಉದ್ಘಾಟಿಸಿ ಮಾತನಾಡಿ. ಮಕ್ಕಳ ಸವಾರ್ಂಗಿನ ಅಭಿವೃದ್ಧಿ ಆಗಬೇಕಾದರೆ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದರು.
ಹಾಗಾಗಿ ಶಿಕ್ಷಕರು ಬಹಳ ಜವಾಬ್ದಾರಿಯಿಂದ ಮಕ್ಕಳ ಕಾಳಜಿ ವಹಿಸಬೇಕಾಗುತ್ತದೆ ಕರುಣಿಸುವ ಕರ್ಣಮಯಿ ಶಿಕ್ಷಕ ಹಾಗಾಗಿ ದೇಶದ ಅಭಿವೃದ್ಧಿ ಪತ್ತ ದತ್ತ ಸಾಗಬೇಕಾದರೆ ವಿದ್ಯಾರ್ಥಿಗಳ ಬೆಳವಣಿಗೆ ಬಹಳ ಮುಖ್ಯವಾದದ್ದು ಹಾಗಾಗಿ ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಪಾಠ ಮಾಡುವುದು ಅಗತ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ. ಅಭಿಲಾಶ್. ರಾಹುಲ್. ಶಾಂತ. ಸಾವಿತ್ರಿ ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು. ಶಿಕ್ಷಕರಾಗಿ ಪಾಠ ಮಾಡುವುದು. ಶಿಕ್ಷಕರ ಪಾತ್ರ ಅಭಿನಯ ಮಾಡುವುದು. ಒಟ್ಟಾರೆ ಇಂದು ವಿದ್ಯಾರ್ಥಿಗಳ ಶಿಕ್ಷ
ಕರಾಗಿದ್ದರು. ನೋಡುಗರ ಕನ್ಮನ ಸೆಳೆಯಿತು.
ಆಟೋಟದಲ್ಲಿ ವಿಜೇತರಾದ ಶಿಕ್ಷಕರಿಗೆ. ನೆನಪಿನ ಕಾಣಿಕೆ ನೀಡಿ ಮಕ್ಕಳು ಗೌರವಿಸಿದರು
ಕಾರ್ಯಕ್ರಮದ ನಿರೂಪಣೆಯನ್ನು. ವಿದ್ಯಾರ್ಥಿನಿ.ಅಮೂಲ್ಯ ಶಿವಕುಮಾರ್ ನಡೆಸಿಕೊಟ್ಟರು
10ನೇ ತರಗತಿ ವಿದ್ಯಾರ್ಥಿ ದಿವ್ಯ ಮತ್ತು ಅಂಕಿತ ವಿದ್ಯಾರ್ಥಿನಿಯರಿಂದ ಪ್ರಾರ್ಥನ ಗೀತೆ ನಡೆಯಿತು
ಕುಮಾರಿ ಅಂಬಿಕಾ ಅವರು ವಂದನಾರ್ಪಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.
ಶಿಕ್ಷಕರಾದ. ಭಾಗ್ಯಶ್ರೀ ಉಷಾ ಸಾವಿತ್ರಿ ವೈಷ್ಣವಿ ಲತಾ ರಾಜೇಶ್ವರಿ. ಸುಧಾ. ವಿದ್ಯಾರ್ಥಿ ಪ್ರತಿನಿಧಿ ಕವಿರಾಜ್ ಪವಿತ್ರ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು