ಡಿ.ಎ.ವಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಚಿತ್ತಾಪುರ :ಸೆ.6: ತಾಲ್ಲೂಕಿನ ದಿಗ್ಗಾಂವ್ ಗ್ರಾಮದ ಡಿ.ಎ.ವಿ ಓರಿಯಂಟ್ ಜ್ಞಾನ ಮಂದಿರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಡಾ|| ರಾಧಾಕೃಷ್ಣನ್‍ರವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಓರಿಯಂಟ್ ಸಿಮೆಂಟ್ ಕಂಪನಿ ಘಟಕದ ಮುಖ್ಯಸ್ಥರಾದ ಸತ್ಯಬ್ರತ್ ಶರ್ಮಾ ಮಾತನಾಡಿ ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ವೈಚಾರಿಕ ಚಿಂತನೆಯನ್ನು ಬೆಳಸಬೇಕು. ವಿಶ್ವಮಟ್ಟದಲ್ಲಿ ಭಾರತ ಎಲ್ಲಾ ರಂಗದಲ್ಲೂ ರಾರಾಜಿಸಬೇಕು. ಭ್ರಷ್ಟಚಾರ ನಿರ್ಮೂಲನೆ ಮುಂಬರುವ ಪೀಳಿಗೆಯ ಜವಾಬ್ದಾರಿಯಾಗಿದೆ. ಈ ಇಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬೇಕೆಂದು ಹೇಳಿದರು.
ಸಂಪನ್ಮೂಲ ಮುಖ್ಯಸ್ಥ ಸಜಿಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಅಳವಡಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ರಾಧಾಕೃಷ್ಣನ್, ಮಹಾತ್ಮ ಹಂಸರಾಜ್, ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿರಜಾನಂದ ಸ್ವಾಮಿಯವರ ಛದ್ಮವೇಷವನ್ನು ಧರಿಸಿದ್ದರು. 7ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿನಿಗಳಿಂದ ಭರತನಾಟ್ಯ ನೃತ್ಯವು ಪ್ರದರ್ಶಿಸಲಾಯಿತು. ಕುಮಾರಿ ಸುಹಾಸಿನಿ 8ನೇ ತರಗತಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.ಅವಿನಾಶ್ ಸಿಂಗಾರೆ ಇಂಗ್ಲೀಷ್ ಶಿಕ್ಷಕ ಶಿಕ್ಷಕರ ಕರ್ತವ್ಯಗಳ ಬಗ್ಗೆ ಮಾತನಾಡಿದರು. ನಂತರ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಶಾಲುಹೊದಿಸಿ ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಜಿ.ಜ್ಯೋತಿ, ಸಂಯೋಜಕ ಪ್ರೀತಾ ಎಸ್.ಕುಮಾರ್, ಸುಜಾತಾ ಶರ್ಮಾ, ಸುಭಾಷ ರೆಡ್ಡಿ ಉಪಸ್ಥಿತರಿದ್ದರು.
5ನೇ ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು, 6ನೇ ತರಗತಿ ವಿದ್ಯಾರ್ಥಿನಿ ಪ್ರಾಚಿ ಚವ್ಹಾಣ್ ಮತ್ತು 7ನೇ ತರಗತಿ ವಿದ್ಯಾರ್ಥಿನಿ ಶೇಯಸ್ ಪೂಜಾರಿ ನಿರೂಪಿಸಿದರು. ಮಾಡಿದರು. 10ನೇ ತರಗತಿ ವಿದ್ಯಾರ್ಥಿನಿ ರೇಣುಕಾ ವಂದಿಸಿದರು.