ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಬಸ್ ಕಂಡೆಕ್ಟರ್‌ಗಳು
ಮಂಗಳೂರು: ಟೈಮಿಂಗ್ಸ್ ವಿಚಾರವಾಗಿ ಖಾಸಗಿ ಬಸ್‌ನ ಕಂಡೆಕ್ಟರ್‌ಗಳಿಬ್ಬರು ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ತೊಕ್ಕೋಟಿನಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ.
ತಲಪಾಡಿ- ಮಂಗಳೂರು ರೂಟ್‌ನಲ್ಲಿ ಸಂಚರಿಸುವ ಪದ್ಮ ಟ್ರಾವೆಲ್ಸ್ ಬಸ್ ಹಾಗೂ ಮಂಜೇಶ್ವರದ ಹೊಸಂಗಡಿ ಜಂಕ್ಷನ್‌ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಬಸ್‌ಗಳ ಕಂಡೆಕ್ಟರ್‌ಗಳ ನಡುವೆ ತೊಕ್ಕೊಟ್ಟಿನ ಓವರ್ ಬ್ರಿಡ್ಜ್ ರೈಲ್ವೇ ಮೇಲ್ವೇತುವೆ ಬಳಿಯ ಬಸ್ಸು ತಂಗುದಾಣದಲ್ಲಿ ಈ ಹೊಡೆದಾಟ ನಡೆದಿದೆ.
ತಲಪಾಡಿಯಿಂದ ಮಂಗಳೂರಿಗೆ ಬರುತ್ತಿದ್ದ ಅಸರ್ ಟ್ರಾವೆಲ್ಸ್ ಬಸ್‌ಅನ್ನು ಬೆನ್ನಟ್ಟಿ ಹಿಂದಿಕ್ಕಲು ಧಾವಿಸಿ ಬಂದ ಪದ್ಮ ಟ್ರಾವೆಲ್ಸ್ ಬಸ್ ಚಾಲಕ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಸ್ಸು ನಿಲ್ದಾಣದಲ್ಲಿ ಅಡ್ಡಲಾಗಿ ಇಟ್ಟಿದ್ದಾನೆ. ಈ ವೇಳೆ ಎರಡು ಬಸ್‌ಗಳ ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿದೆ.