ಸರ್ವಜ್ಞ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ತಾಳಿಕೋಟೆ:ಸೆ.6: ಪಟ್ಟಣ್ಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಡಾ || ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ರವರು ಮಾತನಾಡಿ ವಿದ್ಯಾರ್ಥಿಗಳು ಗುರುಗಳು ಹೇಳಿದ ಪಾಠವನ್ನು ಚೆನ್ನಾಗಿ ಅರಿತುಕೊಂಡು ಜೀವನ ರೂಪಿಸಿಕೊಳ್ಳಬೇಕು, ಇಂದಿನ ವಿದ್ಯಾರ್ಥಿಗಳು ಮುಂದೊಂದು ದಿನ ದೇಶದ ಪ್ರಧಾನಿಯು ಕೂಡ ಆಗಬಹುದು ಎಂದರು. ನಾವು ಡಾಕ್ಟರ್ ಇಂಜಿನಿಯರ್, ನ್ಯಾಯಾಧೀಶರಾಗಿ, ಇನ್ನಿತರ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಬಹುದು ಆದರೆ ಈ ಎಲ್ಲಾ ಹುದ್ದೆಗಳಲ್ಲಿ ಶ್ರೇಷ್ಠವಾದ ಹುದ್ದೆ ಅಂದರೆ ಶಿಕ್ಷಕ ಹುದ್ದೆ ಎಂದರು. ಮಕ್ಕಳಿಗೆ ಒಳ್ಳೆಯ ಆಚಾರ ವಿಚಾರ ಸಂಸ್ಕಾರವನ್ನು ಕೊಟ್ಟು ತಿದ್ದಿ ಬುದ್ಧಿ ಹೇಳಬೇಕು. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲು ಗುರು. ಆದರೆ ಮಗುವಿಗೆ ಎರಡನೇ ಗುರು ಶಿಕ್ಷಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ, ಶಾಂತಗೌಡ ಬಿರಾದಾರ, ಶಿಕ್ಷಕರಾದ ರಾಜು ಜವಳಗೇರಿ, ಎಂ.ಬಿ. ಹಿರೇಗೌಡರ, ಭೀಮನಗೌಡ ಸಾಸನೂರ, ಬಸವರಾಜ ತಳವಾರ, ವಿಜಯಕುಮಾರ ಹಳಿಯಾಳ, ರಸೂಲಸಾ ತುರ್ಕಣಗೇರಿ, ಸಿದ್ದನಗೌಡ ಚೌದರಿ, ಶರಣಗೌಡ ಕಾಚಾಪುರ, ಸಂಜುಕುಮಾರ ಭಜಂತ್ರಿ, ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ, ಪುಷ್ಪ ನಾಡಗೌಡ, ಪಲ್ಲವಿ ಕಸ್ತೂರಿ, ಲಕ್ಷ್ಮೀ ಚುಂಚುರ, ದೇವೇಂದ್ರ ಗುಳೆದ, ಅನಿತಾ ಚೌದ್ರಿ, ಅಂಬುಜಾ ಹಜೇರಿ, ರಾಣಿ, ರಾಜಬಿ ಬಿದರಿ, ಪುಷ್ಪ ನಾಡಗೌಡರ, ಕಲ್ಪನಾ ಹಜೇರಿ, ಪಲ್ಲವಿ ಕಸ್ತೂರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಶಂಕ್ರಮ್ಮ, ಮೇಘಾ ಪಾಟೀಲ, ಮುಬಿನ ಮುರಾಳ, ಮತ್ತು ವಿದ್ಯಾರ್ಥಿಗಳು ಹಾಗೂ ಸರ್ವ ಗುರುಬಳಗದವರು ಉಪಸ್ಥಿತರಿದ್ದರು.