ಆರ್.ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಕಲಬುರಗಿ:ಸೆ.6:ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನವರ 136ನೇ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅದ್ದೂರಿಯಿಂದ ಆಚರಿಸಲಾಯಿತು.
ಪ್ರಾಂಶುಪಾಲರಾದ ಡಾ|| ಭುರ್ಲಿ ಪ್ರಹ್ಲಾದ ಅವರು ಬಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ವಿದ್ಯಾರ್ಥಿಗಳು ಸಸಿ ನೀಡುವುದರ ಮುಖಾಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು. ಕುಮಾರಿ ಲಕ್ಷ್ಮಿ ಪ್ರಾರ್ಥನೆ ಗೀತೆ ಹಾಡಿದಳು. ವಿದ್ಯಾರ್ಥಿಗಳು ಶಿಕ್ಷಕರಿಗೆ ವೇದಿಕೆಗೆ ಸ್ವಾಗತಿಸಿ ಶುಭಾಶಯ ಕೋರಿದರು.
ಡಾ|| ಭುರ್ಲಿ ಪ್ರಹ್ಲಾದ ಅವರು ಮಾತನಾಡುತ್ತಾ ಪಾಲಕರು ತಮ್ಮ ಇಚ್ಚೆಗಳನ್ನು ಕಡಿಮೆ ಮಾಡಿ ಮಕ್ಕಳಿಗೆ ಭವಿಷ್ಯ ರೂಪಿಸಿ ಕೊಡುತ್ತಿದ್ದಾರೆ. ಮಕ್ಕಳಿಗೆ ಅವರ ತಂದೆ ತಾಯಿಗಳೇ ಸ್ಪೂರ್ತಿಯಾಗಿದ್ದಾರೆ. ವಿದ್ಯೆಯು ಬದುಕಿಗೆ ಅವಶ್ಯವಾಗಿದ್ದು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ವೈಜ್ಞಾನಿಕ ಧೃಷ್ಟಿಕೋನ ಇಟ್ಟುಕೊಂಡು ಯಶಸ್ವಿಯಾಗಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸಾಮಾಜಿಕ ಪರಿಜ್ಞಾನ ಅವಶ್ಯಕ ಗುರುವಿನ ಗುಲಾಮನಾಗುವತನಕ ದೊರೆಯದಣ್ಣಮುಕುತಿ ಎಂದು ಹೇಳುತ್ತಾ ಶಿಷ್ಯನಾದವನು ಗುರುವಿನ ಸಮಾನ ನಿಲ್ಲಬೇಕು. ಶಿಕ್ಷಕರು ವಿದ್ಯಾರ್ಥಿಯ ಬದುಕಿಗೆ ಮಾದರಿಯಾಗಬೇಕು. ಗುರು ಮಾರ್ಗದರ್ಶಕನಾಗಿ ಹಲವಾರು ವಿಷÀಯಗಳು ತಿಳಿದುಕೊಂಡಿರಬೇಕು. ಕನಸು ನನಸಾಗಿಸಬೇಕು. ಹೃದಯದಿಂದ ನೋಡದೇ ಬುದ್ಧಿ ಶಕ್ತಿಯಿಂದ ಕೆಲಸಮಾಡಿ ವಿದ್ಯಾರ್ಥಿಗಳ ಗುರಿ ತಲುಪುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳಿಂದ ಅಪೇಕ್ಷ ಪಡುವುದು ಫಲಿತಾಂಶ ಮಾತ್ರ. ಆದರೆ ಕಾಣಿಕೆಯನ್ನಲ್ಲ.
ಉತ್ತಮ ಶಿಕ್ಷಕನ ಗುಣಗಳೆಂದರೆ, ಆತ್ಮ ವಿಶ್ವಾಸ, ಉತ್ತೇಜನೆ ನೀಡುವುದು, ಪಾರದರ್ಶಕ ಬೋಧನೆ, ಜೀವನ ಮೌಲ್ಯ, ನೈತಿಕತೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು. ವಿಷಯದ ಮೇಲೆ ಪ್ರಭುತ್ವ ಹೊಂದಿರಬೇಕು. ವಿದ್ಯಾರ್ಥಿ ಸ್ನೇಹಿಯಾಗಿರಬೇಕು. ಕ್ರಿಯಾಶೀಲತೆ, ಸೃಜನಶೀಲ ವ್ಯಕ್ತಿಯಾಗಿರಬೇಕು.
ಸರ್ವ ಉಪನ್ಯಾಸಕರಿಗೆ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮ ನಿರೂಪಣೆ ಶ್ರೇಯಾ ಠಾಕೂರ್ ನಡೆಸಿಕೊಟ್ಟರು. ಸೃಷ್ಟಿ ಜೋಶಿ ಭರತನಾಟ್ಯ ಮಾಡಿದಳು. ಭವಾನಿ ಆರ್, ರಚನಾ ಮತ್ತು ಸಂಜನಾ ಕುಲಕರ್ಣಿ ಶಿಕ್ಷಕರ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳಿಂದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲ್ಪಟ್ಟಿತ್ತು. ಶಿಕ್ಷಕರಿಗಾಗಿ ಮನೋರಂಜನೆ ಕಾರ್ಯಕ್ರಮಗಳು ನಡೆಯಲ್ಪಟ್ಟವು.
ವೇದಿಕೆಯ ಮೇಲೆ ಡಾ|| ಭುರ್ಲಿ ಪ್ರಹ್ಲಾದ, ಕೇದಾರ ದೀಕ್ಷಿತ್, ಮಳೇಂದ್ರ ಹಿರೇಮಠ, ವೈಶಾಲಿ ದೇಶಪಾಂಡೆ ಇದ್ದರು. ಉಪನ್ಯಾಸಕ ಹಾಗೂ ಸಿಬ್ಬಂಧಿ ಬಳಗ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಬಳಗದ ಶ್ರೀಧರ್ ಕಾಬಾ ಹಾಗೂ ತಂಡ ಕಾರ್ಯಕ್ರಮದ ಉಸ್ತುವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.