ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿ ಸದಸ್ಯರಾಗೋಣ : ಡಾ.ಶೈಲೇಂದ್ರ ಬೆಲ್ದಾಳೆ
ಬೀದರ :ಸೆ.6: ಭಾರತೀಯ ಜನತಾ ಪಕ್ಷವು ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನ ಹೊಂದಿರುವಂತಹ ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕತೆಯ ನೆಲೆಗಟ್ಟು, ತತ್ವ ಆದರ್ಶಗಳು ಹಾಗೂ ಪಕ್ಷವು ಅಳವಡಿಸಿಕೊಂಡಿರುವಂತಹ ಸ್ಪಷ್ಟ ಗುರಿಯನ್ನು ಮೆಚ್ಚಿ ದೇಶದಲ್ಲಿ ಕೋಟ್ಯಾಂತರ ಜನರು ಸದಸ್ಯತ್ವವನ್ನು ಪಡೆದಿದುಕೊಳ್ಳುತಿದ್ದು ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಬೀದರ ನಗರದ ಶಿವನಗರ ಫುಟಪಾತ್ ರಸ್ತೆಯಲ್ಲಿ ಜಿಲ್ಲಾದ್ಯಕ್ಷ ಸೋಮನಾಥ ಪಾಟೀಲ ಅವರ ಮೊಬೈಲ್ ಮೂಲಕ ಮಿಸ್ ಕಾಲ ನೀಡಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಕೂಡ ಪುನಃ ಪಕ್ಷದ ಸದಸ್ಯತ್ವ ಸ್ವೀಕರಿಸುವ ಮೂಲಕ ದೆಹಲಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು ಹೆಮ್ಮೆಯಿಂದ ನಾವೆಲ್ಲರು 8800002024 ಸಂಖ್ಯೆಗೆ ಮಿಸ್ ಕಾಲ್ ಕೊಡುವುದರ ಮೂಲಕ ಸದಸ್ಯರಾಗಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಅಧಿಕೃತವಾಗಿ ಮಿಸ್ ಕಾಲ್ ಕೊಡುವುದರ ಮೂಲಕ ಸದಸ್ಯತ್ವವನ್ನು ಪಡೆದುಕೊಂಡು, ನಾವೆಲ್ಲರೂ ನಮ್ಮ ಮನೆಯ ಸದಸ್ಯರನ್ನ ಒಳಗೊಂಡಂತೆ ಬಿಜೆಪಿಯ ಸದಸ್ಯರಾಗೋಣ ಹಾಗೂ ರಾಷ್ಟ್ರವನ್ನು ಸಶಕ್ತ ಗೊಳಿಸಲು ಇತರರನ್ನು ಸದಸ್ಯರನ್ನಾಗಿಸಿ ಪ್ರಧಾನಮಂತ್ರಿಗಳ ಕೈ ಬಲಪಡಿಸೋಣ ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸೊಣ ಎಂದರು.
ಈ ಸಂದರ್ಭದಲ್ಲಿ ಸದಸ್ಯತಾ ಅಭಿಯಾನದ ಜಿಲ್ಲಾ ಪ್ರಭಾರಿಗಳು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪಾ ಔರಾದೆ, ಮಾಧವ ಹಾಸುರೆ, ಮುಖಂಡರಾದ ಈಶ್ವರಸಿಂಗ ಠಾಕೂರ್, ಶಕುಂತಲಾ ಬೆಲ್ದಾಳೆ, ಬಾಬು ವಾಲಿ, ರಾಜಶೇಖರ ನಾಗಮೂರ್ತಿ, ಸುಧೀರ ಕಾಡಾದೆ, ಗುರುನಾಥ ರಾಜಗೀರಾ, ಶ್ರೀನಿವಾಸ ಚೌಧರಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿದ್ದರು.