ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಶಿಕ್ಷಕರ ದಿನಾಚರಣೆ
ಬೀದರ್:ಸೆ.6: ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಗುರುವಾರ ದಿನಾಂಕ 05-09-2024 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಾವಿತ್ರಿಬಾ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಹೂ ಮಾಲೆ ಹಾಕಿ ಸ್ಮರಿಸಲಾಯಿತು. ಶಿಕ್ಷಕರು ಮತ್ತು ಮಕ್ಕಳು ಡಾ. ರಾಧಾಕೃಷ್ಣ ಮತ್ತು ಸಾವಿತ್ರಿ ಬಾ ಪುಲೆ ಅವರ ಜೀವನ ಸಾಧನೆಯ ಕುರಿತು ಭಾಷಣ ಶಿಕ್ಷಕರ ಗಮನ ಸೆಳೆಯಿತು. ನಂತರ ಮಕ್ಕಳಿಂದ ನೃತ್ಯ- ಗಾಯನ ಮೂಡಿ ಬಂದವು.
ಸಂಸ್ಥೆಯ ಅಧ್ಯಕ್ಷರಾದ ಕರ್ನಲ್ ಶರಣಪ್ಪಾ ಸಿಕೇನಪುರೆ ಅವರು ಕೆನಾಡದಿಂದ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶÀಯಗಳು ಕೋರುತ್ತಾ “ಒಂದು ಶಾಲೆಯ ಅಭಿವೃದ್ದಿಗೆ ಹಾಗೂ ಮಗುವಿನ ಸರ್ವಾಂಗಿಣ ಅಭಿವೃಧ್ಧಿ ಒಬ್ಬ ಒಳ್ಳೆ ಶಿಕ್ಷಕನಿಂದ ಮಾತ್ರ ಸಾಧ್ಯ. ಶಿಕ್ಷಕ ದೇಶದ ನಿರ್ಮಾಪಕ, ಡಾ. ಸರ್ವಪಲ್ಲಿ ರಾಧಾಕೃಷ್ಣ ಮತ್ತು ಸಾವಿತ್ರ ಬಾ ಪುಲೆ ಅವರ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಸಿ ಉತ್ತಮ ಪ್ರಜೆಗಳಾಗುವಂತೆ ನಾವೆಲ್ಲರೂ ಶ್ರಮಿಸೋಣ. ವಿಶೇಷವಾಗಿ ಸಾವಿತ್ರಿ ಬಾ ಪುಲೆ ಅವರ ಬಗ್ಗೆ ಉಲ್ಲೇಖಿಸುತ್ತಾ ಅವರೊಬ್ಬ ಅಪ್ರತಿಮ ಸಮಾಜ ಸುಧಾರಕಿ, ದಲಿತ ದಮನಿತರ ಶೈಕ್ಷಣಿಕ ಹಕ್ಕುಗಳಿಗಾಗಿ ಮತ್ತು ಮಹಿಳಾ ಸುಧಾರಣೆ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದವರು, ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿದ್ದ ಸಾವಿತ್ರಿ ಬಾ ಪುಲೆ ಅವರ ಜೀವನದಿಂದ ನಾವೆಲ್ಲರೂ ಪ್ರೇರಣೆ ತೆಗೆದುಕೊಂಡು ಈ ಸಮಾಜದ ಒಳಿತಿಗಾಗಿ ಕಾರ್ಯಪ್ರವೃತ್ತರಾಗಬೇಕು” ಎಂಬ ಸಂದೇಶವನ್ನು ಕಳಿಸಿದ್ದಾರೆ.