ಅಹ್ಮದೀಯಾ ಮುಸ್ಲೀಮ ಮಹಿಳಾ ವಿಭಾಗದ ವಾರ್ಷಿಕ ಸಮಾವೇಶ ಯಶಸ್ವಿ
ಯಾದಗಿರಿ,ಸೆ.6- ಮಹಿಳೆಯರು ತಮ್ಮ ಮಕ್ಕಳ ಪಾಲನೆ ಪೆÇೀಷಣೆಯ ಜತೆಯಲ್ಲಿ ತಮ್ಮ ಮೇಲಿರುವ ಜವಬ್ದಾರಿ ಹಾಗೂ ಹೊಣೆಗಾರಿಕೆಯ ಕುರಿತು ಅಹ್ಮದಿಯಾ ಮುಸ್ಲೀಮ ಸಂಘಟನೆಯ ದ್ವಿತಿಯ ಖಲೀಫಾರಾದ ಹಜರತ್ ಮಿರ್ಜಾ ಬಷೀರುದ್ದೀನ್ ಮೆಹೆಮೂದ ಸಾಹೇಬರು, ಕಳೆದೆ 1940 ರಲ್ಲಿ ಮಾರ್ಗದರ್ಶನ ನೀಡಿದ್ದಾರೆ ಎಂದು ಎಂದು ಅಹ್ಮದಿಯಾ ಮಹಿಳಾ ವಿಭಾಗದ ಯಾದಗಿರ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮೆಹೆಮೂದಾ ನಯಿಮ್ ಸಗ್ರಿ ಅವರು ಹೇಳಿದರು.
ನಗರದ ಶಹಾಪೂರ ಪೇಟ್ ನ ರಾಯಲ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಜಮಾತೆ ಅಹ್ಮದೀಯಾ ಸಂಘಟನೆಯ (ಲಜ್ನಾ ಇಮಾಹಿಯುಲ್ಲಾಹ್) ಮಹಿಳಾ ಮತ್ತು ಕಿಶೋರಿಯರ ವಿಭಾಗದÀ ಎರಡು ದಿನಗಳ ಯಾದಗಿರಿ- ಕಲ್ಬುರ್ಗಿ ಜಿಲ್ಲೆಗಳ ವಾರ್ಷಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು.
ಮಕ್ಕಳ ಪಾಲನೆ ಪೆÇಷಣೆಯಲ್ಲಿ ದೇವರ ಬಗ್ಗೆ ಭಯ ಭಕ್ತಿ ಕಲಿಸಿಕೊಡುವ ಕೆಲಸ ಮಾಡಬೇಕು ಮತ್ತು ವಿಶೇಷವಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ರೀತಿಯಲ್ಲಿ ಅವರನ್ನು ಬೆಳೆಸುವುದು ಅಗತ್ಯವಾಗಿದೆ ಎಂದ ಅವರು, ಮಹಿಳೆಯರು ಟಿವಿ ಇಂಟರನೆಟ್ ನಲ್ಲಿನ ಕೆಟ್ಟ ಅಂಶಗಳಿಂದ ದೂರವಿರಬೇಕು, ನಾವು ಮಾಡುವ ಉತ್ತಮ ಕಾರ್ಯಗಳೇ ನಮ್ಮ ಮಕ್ಕಳಿಗೆ ಒಳಿತನ್ನು ಮಾಡುತ್ತವೆ ಎಂಬುದು ತಿಳಿಯಬೇಕು ಎಂದು ಅವರು ಹೇಳಿದರು.
ದೇವನಡೆ ನೈಜ ಭಕ್ತಿ ಹಾಗೂ ವಿಶ್ವಾಸ ಹೊಂದಿದ್ದರೆ ಖಂಡಿತವಾಗಿ ನಮಗೆ ದೇವನ ಒಲುಮೆ ಹಾಗೂ ಕೃಪೆ ಲಬಿಸುತ್ತದೆ, ಉತ್ತಮ ಕಾರ್ಯ ಮಾಡಿದರೆ ಉತ್ತಮ ಗುಣವುಳ್ಳ ಸಂತಾನ ಪ್ರಾಪ್ತವಾಗುತ್ತದೆ. ಒಳ್ಳೆಯ ಮಕ್ಕಳಿಂದ ದೇಶಕ್ಕೂ ಧರ್ಮಕ್ಕೂ ಮತ್ತು ಸಮಾಜಕ್ಕೂ ಒಳ್ಳೆಯದು ಆಗುತ್ತದೆ ಎಂದು ಮಾರ್ಮಿಕವಾಗಿ ಅವರು ನುಡಿದರು.
ಎಲ್ಲರೊಂದಿಗೆ ಪ್ರೀತಿ ಯಾರೊಂದಿಗೂ ದ್ವೇಶವಿಲ್ಲ ಎಂಬ ಅಹ್ಮದೀಯ ಸಂಘಟನೆಯ ಘೋಷವಾಕ್ಯವನ್ನು ನಾವು ಸಹ ಎಂದಿಗೂ ಮರೆಯದೇ ಪಾಲನೆಯಾಗಬೇಕು ಎಂದು ಅವರು ಒತ್ತಿ ಹೇಳಿದರು.
ವೇದಿಕೆ ಮೇಲೆ ರಾಯಚೂರು ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಫರಹತ್ ಸಾಲಿಕ್, ವಿಜಯಪುರ-ಧಾರವಾಡ ಜಿಲ್ಲಾಧ್ಯಕ್ಷ ಫಹಿಮುನ್ನಿಸಾ ಬೇಗಂ, ಕಲ್ಬುರ್ಗಿ ನಗರ ಅಧ್ಯಕ್ಷೆ ಶ್ರೀಮತಿ ಹಮೀದಾ ನಾಹಿದ್, ಯಾದಗಿರಿ ನಗರ ಅಧ್ಯಕ್ಷೆ ಶ್ರಿಮತಿ ಬದರ್ ಫರೀದ್, ಸುರಪುರನ ತಿಮ್ಮಾಪುರ ಅಧ್ಯಕ್ಷೆ ಶ್ರೀಮತಿ ಅಮ್ತುಲ್ ನಸೀರ್, ಯಡ್ಡಳ್ಳಿ ಗ್ರಾಮ ಘಟಕದ ಅಧ್ಯಕ್ಷೆ ಶ್ರೀಮತಿ ರಶೀದಾ ಸಲಿಮ್ ಉಪಸ್ಥಿತರಿದ್ದುರ.
ಇದೇ ಸಂದರ್ಭದಲ್ಲಿ ಆಯೋಜಿಸಲಾದ ಕ್ವಿಜ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತÀ ಮಹಿಳೆಯರಿಗೆ ಮತ್ತು ಕಿಶೋರಿಯರಿಗೆ ಬಹುಮಾನ ವಿತರಿಸಲಾಯಿತು. ಮೊದಲಿಗೆ ಪವಿತ್ರ ಖುರಾನ್ ಪಠಣದೊಂದಿಗೆ ಪ್ರಾರಂಭಗೊಂಡ ಸಮಾವೇಶ, ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಮೆಹಮೂದಾ ನಯಿಮ್ ಸಗ್ರಿ ವಂದಿಸಿದರು. ಸಮೊಹಿಕ ಮೌನ ಪ್ರಾರ್ಥನೆಯೊಂದಿಗೆ ಸಮಾವೇಶ ಸಮಾರೋಪ ಗೊಂಡಿತು.