ನಿರ್ಗತಿಕರಿಗೆ ಸಹಾಯ ಮಾಡುವುದು ಅಗತ್ಯ
ಕಲಬುರಗಿ:ಸೆ.6:ಸಮಾಜದಲ್ಲಿ ಇಂದಿಗೂ ಕೂಡಾ ಅನೇಕ ಜನರುಆಹಾರ, ವಸತಿಯಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ತುತ್ತುಅನ್ನಕ್ಕೂ ಪರಿತಪಿಸುವ ಸ್ಥಿತಿಯಲ್ಲಿದ್ದಾರೆ. ಸಮಾಜದಲ್ಲಿರುವಇಂತಹ ನಿರ್ಗತಿಕರು, ಬಿಕ್ಷುಕರು, ಅಸಹಾಯಕರು, ಬಡವರಿಗೆ ಉಳ್ಳವರು ಕೈಲಾದ ಸಹಾಯವನ್ನು ಮಾಡುವ ಮೂಲಕ ಅವರಿಗೆಆಸರೆಯಾಗಬೇಕಾದದ್ದುಅಗತ್ಯವಾಗಿದೆಎಂದುಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ಮಹಾಗಾಂವ ಕ್ರಾಸ್ ಸಮೀಪವಿರುವ ‘ಆಚಾರ್ಯಚಾಣಕ್ಯಟ್ರಸ್ಟ್’ನ ಅಡಿಯಲ್ಲಿಜರುಗುತ್ತಿರುವ ‘ಸಂಜೀವಿನಿ ವೃದ್ಧಾಶ್ರಮ’ ಹಾಗೂ ‘ಚಿಗುರು ನಿರ್ಗತಿಕ, ಅನಾಥ ಮತ್ತು ನಿರ್ಲಕ್ಷಿತರ ನಿಲಯ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಜರುಗಿದ ‘ಅಂತಾರಾಷ್ಟ್ರೀಯದಾನ ದಿನಾಚರಣೆ’ಯ ಪ್ರಯುಕ್ತಅನಾಥಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿ ಅವರು ಮಾತನಾಡಿದರು.
ಹಿರಿಯರು, ವಯೋವೃದ್ಧರುಮನೆ, ಸಮಾಜಕ್ಕೆ ಭಾರವಲ್ಲ. ಅವರುತಮ್ಮವಯಸ್ಸಿನಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕುಟುಂಬ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿರುತ್ತಾರೆ. ಅವರಇಳಿವಯಸ್ಸಿನಲ್ಲಿ ಕುಟುಂಬಕ್ಕೆ ಭಾರವೆಂದು ಭಾವಿಸಿ ವೃದ್ಧಾಶ್ರಮಕ್ಕೆ ನೂಕುವುದುಅಮಾನವೀಯಕೃತ್ಯವಾಗಿದೆ.ಅವರಿಗೆಗೌರವ ನೀಡಿ, ಉತ್ತಮಆರೈಕೆ, ಆಶ್ರಯ ನೀಡಬೇಕು. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಬೇಕುಎಂದು ಹೇಳಿದರು.
ಟ್ರಸ್ಟ್‍ನಅಧ್ಯಕ್ಷಹಾಗೂ ಸಮಾಜ ಸೇವಕ ಶರಣುಎ.ಕಮಠಾಣಮಾತನಾಡಿ, ನಮ್ಮ ವೃದ್ಧಾಶ್ರಮ ಮತ್ತುಅನಾಥ ನಿಲಯದಲ್ಲಿ ವಯೋವೃದ್ಧರು, ಅನಾಥ ಮಕ್ಕಳಿದ್ದಾರೆ. ಅವರಲ್ಲಿದೇವರ ಸ್ವರೂಪವನ್ನುಕಾಣುವ ಹಂಬಲ ನನ್ನದಾಗಿದ್ದು, ಇವರೆಲ್ಲರ ಸೇವೆಯೇದೇವರ ಸೇವೆ ಎಂದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೇನೆ. ಸ್ವಾರ್ಥಜೀವನ ನಡೆಸಿದರೆ ಬದುಕಿಗೆಅರ್ಥವಿಲ್ಲ. ವೈಯಕ್ತಿಕಜೀವನದಜೊತೆಗೆಸಮಾಜದಲ್ಲಿ ಅಗತ್ಯವುಳ್ಳವರಿಗೆ ಕೈಲಾದ ಸೇವೆಯನ್ನು ನೀಡಿದರೆಆತ್ಮತೃಪ್ತಿದೊರೆಯುವುದರಜೊತೆಗೆ ಸಮಾಜಕ್ಕೆಕೊಡುಗೆ ನೀಡಿದಂತಾಗುತ್ತದೆಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಪೂಜಾಕೆ.ಲೇಂಗಟಿ,ಶಿವಪುತ್ರ ಮಾಲಿಪಾಟೀಲ, ಕಾಮಣ್ಣ ಮದಗುಣಕಿ, ಸುಭದ್ರಾ,ರುಕ್ಮೀಣಿ,ಚಂದ್ರಕಲಾ, ರತ್ನಾಬಾಯಿ ಸೇರಿದಂತೆವೃದ್ಧರು, ಮಕ್ಕಳು ಇದ್ದರು.