ದಾವಣಗೆರೆ ಗತ್ತು ನಿಮಗೇನು ಗೊತ್ತು ಆಲ್ಬಮ್ ಸಾಂಗ್ ನಾಳೆ ಬಿಡುಗಡೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೬: ಡಿ೩ ಪ್ರೋಡಕ್ಷನ್ ಹಾಗೂ ಸಿಗ್ಮ ಸ್ಟೂಡಿಯೋಸ್ ಅವರ ದಾವಣಗೆರೆ ಹುಡುಗರು ಅಂದರೆ ಹೇಗೆ ಎಂಬುದನ್ನು ತಿಳಿಸುವ ದಾವಣಗೆರೆ ಗತ್ತು ನಿಮಗೇನು ಗೊತ್ತು ಎಂಬ ಆಲ್ಬಮ್ ಸಾಂಗ್ ಸೆ.೭ ರ ಬೆಳಿಗ್ಗೆ ೧೧.೩೫ ಕ್ಕೆ ಬಿಡುಗಡೆಯಾಗಲಿದೆ ಎಂದು ಡಿ೩ ನಿರ್ಮಾಪಕ ಆಕಾಶ್ ದೊಂಗರಸೊನೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಂಗ್ ಗೆ ನವೀನ್ ರಾಜ್ ನಿರ್ದೇಶಿಸಿದ್ದಾರೆ. ರೋನಿತ್ ಸಾಹಿತ್ಯ ಬರೆದಿದ್ದು, ವರುಣ್ ವಿ.ಗೌಡ ಮತ್ತು ನವೀನ್ ರಾಜ್ ಹಾಡಿದ್ದಾರೆ. ಉಜ್ವಲ್ ಮಾಸ್ಟರ್ ಛಾಯಾಗ್ರಹಣ ಮಾಡಿದ್ದಾರೆ ಎಂದರು.ಇದೇ ಮೊದಲ ಬಾರಿಗೆ ಈ ಪ್ರೊಡಕ್ಷನ್ನಲ್ಲಿ ಆಲ್ಬಮ್ ಸಾಂಗ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ‌ ದ್ರೋಹಂ ಎಂಬ ಕಿರುಚಿತ್ರ ಮಾಡಲಿದ್ದೇವೆ. ದಾವಣಗೆರೆಯಲ್ಲಿ ಯಾವುದೇ ಸಾಂಗ್ ಮಾಡಬೇಕು ಅಂದರೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ವಿಎಫ್ಕ್ಸ್ ಮಾಡಿಸಬೇಕು. ನಿರ್ಮಾಪಕರನ್ನು ಹುಡಬೇಕು ಅಂತಾರೆ. ಆದರೆ ಇನ್ಮುಂದೆ ಯಾರೆ‌ ದಾವಣಗೆರೆಯಲ್ಲಿ‌ ಸಾಂಗ್ ಮಾಡಬೇಕಾದ್ರೆ ನಿಮಗೆ ನಿರ್ಮಾಪಕರು ಸಿಗದೇ ನಿಮ್ಮ ಕನಸನ್ನು ಸಾಯಿಸದೇ ನಮ್ಮ ಬಳಿ ಬನ್ನಿ ನಾವು ಕೈ ಜೋಡಿಸುತ್ತೇವೆ ದಯವಿಟ್ಟು ಮೊ. ೯೬೩೨೪೨೯೫೨೩ ಗೆ ಸಂಪರ್ಕಿಸಿ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನವೀನ್ ರಾಜ್, ಪ್ರೀತಿ ಚಂದ್ರಪ್ಪ, ಉಜ್ವಲ್ ಇತರರು ಇದ್ದರು.