ಗಳಿಸಿಕೊಳ್ಳಬೇಕಾಗಿರುವುದು ಸಾಮ್ರಾಜ್ಯವನ್ನಲ್ಲ, ಒಳ್ಳೆಯ ಸಂಬಂಧ, ವಿಶ್ವಾಸ, ಪ್ರೀತಿ:ಟೇಂಗಳಿ ಶ್ರೀಗಳು
ಕಲಬುರಗಿ:ಸೆ.6:ಗೆಲ್ಲುವುದು ಹಂಚಿಕೊಳ್ಳುವುದು ಕಳೆದುಕೊಳ್ಳುವುದು ಇವು ಮೂರು ಜೀವನದಲ್ಲಿ ಮಹತ್ವವಾದುದು ನಮ್ಮ ಬದುಕು ಸಾರ್ಥಕ ಹಾಗು ಸುಂದರಗೊಳಿಸಬೇಕಾದರೆ ನಮ್ಮ ನಡೆ ನುಡಿ ಬರಹ ಶುದ್ಧವಾಗಿರಬೇಕೆ ಹೊರತು ಇನ್ನೊಬ್ಬರಿಗೆ ನೋವು ದುಃಖ ಕೊಡುವಂತಹದಾಗಿರಬಾರದು. ಸಾರ್ಥಕ ಹಾಗು ಸುಂದರ ಬದುಕು ನಮ್ಮದಾಗಿಸಿಕೊಳ್ಳಬೇಕೆಂದರೆ ಗೆಲ್ಲಬೇಕಾಗಿರುವುದು ಇನ್ನೊಬ್ಬರ ಹೃದಯವೇ ಹೊರತು ಸಾಮ್ರಾಜ್ಯವನ್ನಲ್ಲ ಕಳೆದುಕೊಳ್ಳಬೇಕಾಗಿರುವುದು ಕೆಟ್ಟ ವಿಚಾರಗಳೆ ಹೊರತು ಒಳ್ಳೆಯದನ್ನಲ್ಲ ಹಂಚಿಕೊಳ್ಳಬೇಕಾಗಿರುವುದು ಪ್ರೀತಿ, ಪ್ರೇಮ, ನಂಬಿಕೆ ಗೌರವವೇ ಹೊರತು ಭೌದ್ಧಿಕ ಆಸ್ತಿಗಳಲ್ಲ ಎಂದು ಇಂದಿನ ಸಾಮಾಜಿಕ ಜೀವನದಲ್ಲಿನ ನಮ್ಮ ನಡೆ-ನುಡಿ ಬರಹಗಳ ಪರಿಣಾಮ ಮತ್ತು ದುಷ್ಪರಿಣಾಮ ಕುರಿತು ಸೆಪ್ಟೆಂಬರ 05ರಂದು ಮಹಾದೇವಪ್ಪ ರಾಂಪೂರೆ ಕೂಡಾ ಬಡಾವಣೆಯಲ್ಲಿ ಸ್ಪಂದನಾ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಟೇಂಗಳಿ ಹಾಗು ಮಂಗಲಗಿ ಶಾಂತೇಶ್ವರ ಮಠದ ಪೀಠಾಧಿಪತಿಗಳಾದ ಡಾ. ಶಾಂತಸೋಮನಾಥ ಶಿವಾಚಾರ್ಯರು ಮಾತನಾಡಿದರು.
ಈ ಚಿಂತನ ಮಂಥನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಟೇಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಅವರು ಮಾತನಾಡುತ್ತ ಇಂದು ವಿಶೇಷ ದಿನ ಶಿಕ್ಷಕರ ದಿನಾಚರಣೆ ತಮ್ಮ ಹುಟ್ಟುಹಬ್ಬದ ದಿನವನ್ನು ಸಾರ್ವತ್ರಿಕಗೊಳಿಸಿ ತಮ್ಮ ತನವನ್ನು ತ್ಯಾಗ ಮಾಡಿದ ಇಬ್ಬರು ಮಹಾನ ಮೇದಾವಿಗಳೆಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ ಶಿಕ್ಷಕರ ದಿನಾಚರಣೆ ಮಾಡಿದ್ದು, ಪಂಡಿತ ಜವಾಹಾರಲಾಲ ನೆಹರು ಮಕ್ಕಳ ದಿನಾಚರಣೆ ಎಂದು ಘೋಷಿಸಿದ್ದು ತ್ಯಾಗವಲ್ಲವೇ ಎಂದು ತನ್ನ ವಿದ್ಯಾರ್ಥಿ ಜೀವನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ ಶಿಕ್ಷಕರಾದ ಶ್ರೀ ಶಿವಾಜಿ, ಶ್ರೀ ಮಡಿವಾಳಯ್ಯ, ಶ್ರೀ ಎಸ್.ಜಿ. ಮೇಳಕುಂದಿ, ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತ ಒಂದು ತಿಂಗಳ ಪರ್ಯಂತ ಚಿಂತನ ಮಂಥನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಅಭಿಮಾನಕ್ಕೆ ಸ್ಪಂದನಾ ಸಂಘದ ಅಧ್ಯಕ್ಷ ಡಾ. ಬಾಬುರಾವ ಕುಲಕರ್ಣಿ ಅವರಿಗೆ ಶಿಕ್ಷಕರ ದಿನದ ನಿಮಿತ್ಯ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರ ಕೊಟ್ಟು ಅಭಿನಂದಿಸಿ ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಮಾರು 12ಜನ ಶಿಕ್ಷಕರಿಗೆ ಟೇಂಗಳಿ ಅಂಡಗಿ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಿವಕುಮಾರ ಪಂಚಾಳ ಅಧ್ಯಕ್ಷತೆ ವಹಿಸಿದರು, ಶ್ರೀ ಸಂಜೀವ ಮಹಾಜನ ಶ್ರೀ ಗುಂಡಾಚಾರ್ಯ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ.ಬಾಬುರಾವ ಕುಲಕರ್ಣಿ ಸ್ವಾಗತಿಸಿದರು. ಡಾ. ನಾಗರಾಜ ಬಡಿಗೇರ ನಿರೂಪಿಸಿದರು.
ಸಮಾರಂಭದಲ್ಲಿ ಕಸಾಪ ಟೇಂಗಳಿ ವಲಯ ಘಟಕದ ಅಧ್ಯಕ್ಷ ಭೀಮಾಶಂಕರ ಅಂಕಲಗಿ ಪದಾಧಿಕಾರಿಗಳಾದ ಗುಂಡಪ್ಪ ಪಟ್ಟೇದ, ರಾಜಕುಮಾರ ಪಟ್ಟೇದ, ವಿಜಯಕುಮಾರ ಪಟ್ಟೇದ ಹಾಗು ಹಿರಿಯರಾದ ವೆಂಕಟರಡ್ಡಿ, ನಾಗೇಂದ್ರರಾವ ಮುಚ್ಚೆಟ್ಟಿ, ನಾಗಣ್ಣ ಮುಂಜೆ, ರಮೇಶ ಸಿಂಪಿ, ಗೌಡಪ್ಪಗೌಡ ಪಾಟೀಲ, ಡಾ. ಅಣ್ಣರಾವ ಪೊ.ಪಾಟೀಲ, ಮಲ್ಲಿಕಾರ್ಜುನ ಮಿಣಜಗಿ, ಶಿವಕುಮಾರ ಪಾಂಚಾಳ, ಡಾ.ಅಂಬ್ರಿಷ ಕೋಳಕೂರ, ಶಿವಾಜಿ ಜಿ.ಕೆ. ವಿನೋದಕುಮಾರ ಜೆನೇವರಿ, ಅಚಲರಾಜ ಅಂಡಗಿ, ಶ್ರೀಮತಿ ಶೈಲಜಾ ಪಾಟೀಲ, ಶ್ರೀಮತಿ ಸ್ವರಾಜ ಲಕ್ಷ್ಮಿರಡ್ಡಿ ಉಪಸ್ಥಿತರಿದ್ದರು.