ಪ್ರಜಾಪ್ರಭುತ್ವ ದಿನಾಚರಣೆ : ಹೊಸಪೇಟೆಯಲ್ಲಿ ಮಾನವಸರಪಳಿಯಲ್ಲಿ ಭಾಗವಹಿಸಿ.
ಸಂಜೆವಾಣಿವಾರ್ತೆ
ಹರಪನಹಳ್ಳಿ.ಸೆ.೬: ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ, ಸೆ.15ರಂದು ವಿಜಯನಗರ ಜಿಲ್ಲಾ ಗಡಿ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ ಗಿರೀಶಬಾಬು ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿಯ ರಾಜೀವಗಾಂಧಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಜಯನಗರ ಜಿಲ್ಲೆಯ ಗಡಿಭಾಗದವರೆಗೆ ಸುಮಾರು 50ಕಿ.ಮೀ.ಉದ್ದದ ಮಾನವ ಸರಪಳಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಹರಪನಹಳ್ಳಿ ತಾಲೂಕಿನಿಂದ ಜಿಲ್ಲೆಯ ಗಡಿಭಾಗವಾದ ವಡ್ಡರಹಳ್ಳಿಯಿಂದ ಪಿ.ಕೆ.ಹಳ್ಳಿಯವರೆಗೂ ಸುಮಾರು 4ಕಿ.ಮೀ.ದೂರದವರೆಗೂ ಮಾನವ ಸರಪಳಿ ರಚಿಸುವ ಗುರಿ ಇದ್ದು, ಇದರಲ್ಲಿ ಗ್ರಾಮ ಪಂಚಾಯಿತಿ, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ತಾಲೂಕಿನಿಂದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗಂಗಪ್ಪ ಮಾತನಾಡಿ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೊಳಿಸಲು, ಅಂದು ಜಿಲ್ಲಾಡಳಿತ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮ ಬೆಳಿಗ್ಗೆ 9ಕ್ಕೆ ಆರಂಭವಾಗಲಿದ್ದು, ಹರಪನಹಳ್ಳಿಯಿಂದ ಬೆಳಿಗ್ಗೆ 6ಕ್ಕೆ ತೆರಳಬೇಕಿದ್ದು ಇದಕ್ಕೆ ನಮ್ಮ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪ.ಜಾತಿ, ಪ.ಪಂಗಡ ಇಲಾಖೆಯಿಂದ 40 ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಜೊತೆಯಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿದ್ದು ವಸತಿ ನಿಲಯದ ವಿದ್ಯಾರ್ಥಿಗಳು ಒಳಗೊಂಡು ಇತರರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ಮಾತನಾಡಿ ಜಿಲ್ಲಾಡಳಿತದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸಿಬ್ಬಂಧಿಗಳು, ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಲು ಸೂಚಿಸುವುದಾಗಿ ತಿಳಿಸಿದರು.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ ಪ್ರಜಾಪ್ರಭುತ್ವದ ದಿನಾ ಬಹಳ ಮುಖ್ಯವಾಗಿದ್ದು, ಈ ಹಿಂದೆ ಪ್ರಗತಿಪರ ಸಂಘಟನೆಗಳು ಈ ರೀತಿ ಮಾನವ ಸರಪಳಿ ರಚನೆ ಮಾಡುತ್ತಿದ್ದರು, ಇದೀಗ ಸರ್ಕಾರದಿಂದ ಮಾಡುವ ಕಾರ್ಯಕ್ರಮದಲ್ಲಿ ನಮ್ಮ ನೌಕರರ ಸಂಘ ಹಾಗೂ ಶಿಕ್ಷಕರು ಸಹ ಭಾಗವಹಿಸು ವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಎಇಇ ಕಬೇಂದ್ರನಾಯ್ಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಬಿಸಿಎಂ ಇಲಾಖೆಯ ಕೆ.ಭೀಮಪ್ಪ, ಬಿಆರ್‌ಸಿ ಹೋನ್ನತೆಪ್ಪ, ಎನ್.ಜಿ.ಬಸವರಾಜ, ಯಸ್ಮೀನ್, ರವಿಗೌಡ, ದೇವೇಂದ್ರಪ್ಪ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.