ಲೋಕಕಲ್ಯಾಣಕ್ಕಾಗಿ ಮುನೀಂದ್ರ ಶಿವಾಚಾರ್ಯರ ಪಾದಯಾತ್ರೆ
ವಾಡಿ:ಸೆ.6: ಪಟ್ಟಣ ಸಮೀಪದ ಸುಕ್ಷೇತ್ರ ಹಲಕರ್ಟಿಯ ಕಟ್ಟಿಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯರು ತಮ್ಮ ಅಪಾರ ಭಕ್ತರೊಂದಿಗೆ ಬುಧವಾರ ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಬೆಳೆಸಿದರು.
ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ ಹಲಕರ್ಟಿ ಗ್ರಾಮದಿಂದ ಆರಂಭವಾದ ಪಾದಯಾತ್ರೆಯಲ್ಲಿ ಹಲಕರ್ಟಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಹಲಕರ್ಟಿಯಿಂದ ಆರಂಭಗೊಂಡ ಪಾದಯಾತ್ರೆ ಬಳಿರಾಮಚೌಕ, ಚಿತ್ತಾಪುರ ಪಟ್ಟಣದ ಮೂಲಕ ಸಾಗಿತು. ದಾರಿಯುದ್ಧಕ್ಕೂ ಭಕ್ತರು ವೀರಭದ್ರೇಶ್ವರ ಹಾಗೂ ಮುನೀಂದ್ರ ಸ್ವಾಮಿಗಳಿಗೆ ಜೈಕಾರ ಹಾಕುತ್ತಾ ಸಾಗುತ್ತಿರುವುದು ಕಂಡು ಬಂದಿತು.
ಪಾದಯಾತ್ರೆಯು ಗುರುವಾರ ಮಧ್ಯಾಹ್ನ ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಲಿದೆ.
ಪಾದಯಾತ್ರೆ ವೇಳೆ ಮಾತನಾಡಿದ ಮುನಿಂದ್ರ ಶಿವಾಚಾರ್ಯರು, ಕಟ್ಟಿಮನಿ ಹಿರೇಮಠದ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದ ನಂತರ ಭಕ್ತರೊಂದಿಗೆ ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳುವುದು ಬಹುಹಿಂದಿನಿಂದ ನಡೆದುಕೊಂಡು ಬಂದಿದೆ. ನಾಡಿನ ಸಮಸ್ತ ಜನರ ಒಳಿತಿಗಾಗಿ ಪಾದಯಾತ್ರೆ ನಡೆಸಲಾಗುತ್ತಿದ್ದು, ಭಕ್ತ ಸಮೂಹಕ್ಕೆ ಒಳ್ಳೆಯದಾಗಲಿ, ಉತ್ತಮ ಮಳೆ ಸುರಿದು ಸಮೃದ್ಧ ಬೆಳೆ ಕೈಸೇರಿ ಅನ್ನದಾತ ಖುಷಿಯಿಂದ ಬದುಕಲಿ ಎನ್ನುವುದ ಪಾದಯಾತ್ರೆಯ ಉದ್ದೇಶವಾಗಿದೆ ಎಂದರು. ಪಾದಯಾತ್ರೆಯಲ್ಲಿ ಸುಮಾರು 250ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.
ಚಂದ್ರಕಾಂತ ಮೇಲಿನಮನಿ, ಶಂಕ್ರಯ್ಯ ಸ್ವಾಮಿ, ಕುಮಾರ ಹೂಗಾರ, ಸಿದ್ದು ಸ್ವಾಮಿ, ಹರಿ ರಾಠೋಡ, ಸಾಬಣ್ಣ ಬೆಳಗುಂಪಿ, ಸಿದ್ದು ಹಿಟ್ಟಿನ, ಸಚಿನ್ ತಳ್ಳಳ್ಳಿ, ದೇವೇಂದ್ರ ಯಲಗೋಡ, ಶರಣು ಚಿತ್ತಾಪುರ, ಈರಮ್ಮ ಮೀನಗಾರ, ಪ್ರಭಾವತಿ ಮೇಲಿನಮನಿ, ಸುಮಿತ್ರಾ ಛತ್ರಿಕಿ, ನೀಲಮ್ಮ ಇಸಬಾ, ಮಲ್ಲಮ್ಮ ಅರಬಾಳ, ಹೀರಾಬಾಯಿ ಮೇಲಿನಮನಿ, ಬಸ್ಸಮ್ಮ ಮಠ, ಸಿದ್ದಮ್ಮ ಇರಗೊಂಡ, ಲಲಿತಾ ಸಂಗಶೆಟ್ಟಿ ರಮೇಶ ರಾಠೋಡ್ ರಾಜು ಚವಾಣ್ ರಾಚು ಶಾಸ್ತ್ರೀ ಈರಣ್ಣ ಯಾರಿ ಸಿದ್ದ್ಯಾಯ ಶಾಸ್ತ್ರೀ ದೇವು ಹಾಗೂ ಇನ್ನಿತರರು ಇದ್ದರ ಅಪಾರ ಭಕ್ತ ಸಮೂಹ ಪಾದಯಾತ್ರೆಯಲ್ಲಿ ಭಾಗವಹಿಸಿದರು
ವಾಡಿ: ಲೋಕ ಕಲ್ಯಾಣಕ್ಕಾಗಿ ಹಲಕರ್ಟಿಯ ಮುನೀಂದ್ರ ಶಿವಾಚಾರ್ಯರು ತಮ್ಮ ಭಕ್ತರೊಂದಿಗೆ ಬುಧವಾರ ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಬೆಳೆಸಿದರು.