ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತಬೇಕು:ಬಸವಲಿಂಗ ಮಹಾಸ್ವಾಮೀಜಿ
ವಿಜಯಪುರ,ಸೆ.6: ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಮಾನವೀಯ ಮೌಲ್ಯ ಪಡೆದ ಮಕ್ಕಳು ಜಗದ್ವಿಖ್ಯಾತರಾಗಲು ಸಾಧ್ಯವಾಗುತ್ತದೆ ಎಂದು ಚಿತ್ತರಗಿಯ ಶಿವಯೋಗ ಮತ್ತು ನಿಸರ್ಗ ಚಿಕಿತ್ಸೆ ಕೇಂದ್ರದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ನೇತೃತ್ವದಲ್ಲಿ ಗುರುವಾರ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ದೊಡ್ಡ ಗೌರವ ಸಿಗುವುದು ಶಿಕ್ಷಕರಿಗೆ ಮಾತ್ರ, ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುವುದು ಜಾಗೃತಿ ಮಾಡುವವರು ಶಿಕ್ಷಕರು, ವಿಧ್ಯೆ ಬಹುದೊಡ್ಡ ಸಂಪತ್ತು, ಅದನ್ನು ಗುರುಗಳು ಧಾರೆ ಎರೆಯುತ್ತಾರೆ. ಹೃದಯದಿಂದ ಮಕ್ಕಳಿಗೆ ಮಾನವೀಯ ಮೌಲ್ಯ ಬೆಳೆಸಬೇಕು. ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಶಿಕ್ಷಕ.
ಜಗತ್ವಿಖ್ಯಾತ ವ್ಯಕ್ತಿ ಮಾಡುವ ಸಾಮಥ್ರ್ಯ ಇರುವದು ಶಿಕ್ಷಕನಿಗೆ ಮಾತ್ರ ಎಂದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳಷ್ಟು ದೊಡ್ಡ ಸಂಪತ್ತು ಈ ಜಗತ್ತನಲ್ಲಿ ಇಲ್ಲ. ಸಾವಿರ ತಾಯಿಯ ಹೃದಯ ಒಬ್ಬ ಶಿಕ್ಷಕನಲ್ಲಿ ಇರುತ್ತದೆ. ಇಲಾಖೆಯ ಹಲವು ಒತ್ತಡಗಳ ಮಧ್ಯೆ ಪ್ರಾಮಾಣಿಕವಾಗಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಕುರಿತು ಹೆಮ್ಮೆ ಇದೆ. ತಮ್ಮ ಕೈಯಲ್ಲಿ ಕಲಿತ ಮಗು ಉನ್ನತ ಹುದ್ದೆ ಏರಿದಾಗ ಶಿಕ್ಷಕ ಸಂತೋಷ ಪಡುತ್ತಾನೆ. ರೈತ ಬಡ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು ಎಂದರು.
ತಿಕೋಟಾ ತಾಲ್ಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಮಾತನಾಡಿ, ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಅಂದಾಗ ಸಮಾಜ ನಮಗೆ ಗೌರವ ಕೊಡುತ್ತದೆ. ಜೀವನದ ಕೊನೆಯ ಗಳಿಗೆಯಲ್ಲಿ ನಮ್ಮ ಸ್ವಂತ ಮಕ್ಕಳು ಅನ್ನ ಹಾಕುತ್ತಾರೊ ಇಲ್ಲವೋ ಗೊತ್ತಿಲ್ಲ, ಆದರೆ ನಮ್ಮ ಕೈಯಲ್ಲಿ ಕಲಿತಿರುವ ಶಾಲಾ ಮಕ್ಕಳಿಂದ ನಮಗೆ ಅನ್ನ ಸಿಕ್ಕಿರುತ್ತದೆ ಎಂದರು.
ತಾಲ್ಲೂಕಿನ ಸಾಧಕ ಶಾಲೆಗಳ ವಿಡಿಯೋ ಎ???ಡಿ ಮೂಲಕ ಬಿತ್ತರಿಸಲಾಯಿತು. ವಯೋನಿವೃತ್ತ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕøತರು ಹಾಗೂ ಅಕಾಲಿಕ ನಿಧನ ಹೊಂದಿದ ಶಿಕ್ಷಕರ ಕುಟುಂಬಗಳ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.
ಬಿಇಒ ಪ್ರಮೋದಿನಿ ಬಳೋಲಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾಪೌರ ಮಹೇಜಬಿನ ಅಬ್ದುಲ್ ರಜಾಕ ಹೊರ್ತಿ, ತಾಪಂ ಇಒ ಬಸವರಾಜ ಐನಾಪುರ, ಅರ್ಜುನ ಲಮಾಣಿ, ಶಿವರಾಜ ಬಿರಾದಾರ, ಪುಷ್ಪಾ ಗಚ್ಚಿನಮಠ, ಎ.ಬಿ.ಧಡಕೆ, ಮಲ್ಲನಗೌಡ ಹಡಲಗೇರಿ, ವಸಂತ ನಾಯಕ, ಬಸವರಾಜ ರಬಿನಾಳ, ಹಣಮಂತ ಕುಡಚಿ, ಗಜಾನಂದ ಜುಂಜರವಾಡ, ಬಿ.ಎಸ್.ಮಠ, ಝಡ್.ಐ.ಇಂಡಿಕಾರ, ಅಶೋಕ ಬಜಂತ್ರಿ, ಎಸ್.ಎಂ.ಚಿತ್ತರಗಿ, ಮುತ್ತಪ್ಪ ಪೂಜಾರಿ, ಆರ್.ಬಿ.ಜಾಧವ, ಎಂ.ಎನ್.ನಾಯಿಕ, ದೀಪಾಕ್ಷಿ ಜಾನಕಿ, ಎಸ್.ಡಿ. ಮೊಸಲಗಿ, ದಿನೇಶ ಹಳ್ಳಿ, ಅಶ್ಪಾಕ ಮನಗೂಳಿ, ಜ್ಯೋತಿ ಖೋತ ಇದ್ದರು.
ಕಾರ್ಯಕ್ರಮವನ್ನು ರೇವತಿ ಬೂದಿಹಾಳ, ಕಾಶಿನಾಥ ಜಾಧವ, ಪ್ರಭು ಬಿರಾದಾರ ನೆರವೇರಿಸಿದರು.