ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ
ವಿಜಯಪುರ, ಸೆ.6: ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆರಿಸಲಾಯಿತು
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ ಹಾಗೂ ಶಾಲೆಯ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ ಹಾಗೂ ಸಿದ್ದೇಶ್ವರ ಸಂಸ್ಥೆಯ ಆಡಳಿತಾಧಿಕಾರಿ ಸದಾನಂದ ದೇಸಾಯಿ, ಎಮ್. ಎಮ್. ಸಜ್ಜನ, ಬಸವರಾಜ ಸೂಗೂರ, ನಿಂಗೊಂಡಪ್ಪ ಗೊಲಾಯಿ, ಶಿವಾನಂದ ನೀಲಾ ಹಾಗೂ ಸಿಇಒ ಎಚ್. ವೆಂಕಟೇಶ ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮೀ ಪಟ್ಟೇದ ಹಾಗೂ ಉಪ ಪ್ರಾಂಶುಪಾಲ ಮಹೇಶ, ದಾನೇಶ, ಶ್ರೀದೇವಿ ಕನ್ನಾಳ ಜ್ಯೋತಿ ಇದ್ದರು.
ನಿಂಗೊಂಡಪ್ಪ ಗೊಲಾಯಿ ಅವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಆಟಗಳನ್ನು ಆಡಿಸಲಾಯಿತು.