ವಿಜಯಪುರ ಕೃಷಿ ಮಹಾ ವಿದ್ಯಾಲಯ ಹಿಟ್ಟನಳ್ಳಿ ಫಾರ್ಮ್ ನಲ್ಲಿ ಶಿಕ್ಷಕರ ದಿನಾಚರಣೆ
ವಿಜಯಪುರ, ಸೆ.6 :ಇಲ್ಲಿನ ಕೃಷಿ ಮಹಾ ವಿದ್ಯಾಲಯದ ಹಿಟ್ನಳ್ಳಿ ಫಾರ್ಮನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಭಾರತರತ್ನ ಪುರಷ್ಕøತ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಫೆÇೀಟೋಗೆ ಪೂಜೆ ಸಲ್ಲಿಸಿದ ನಂತರ ಪ್ರಾಧ್ಯಾಪಕ ಡಾ.ಆರ್.ಬಿ.ಜೊಳ್ಳಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಡಾ.ಯು.ಎನ್.ಕುಂಟೋಜಿ ಅವರು, ಶಿಕ್ಷಕರ-ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಹಲವು ನಿದರ್ಶನಗಳ ಮೂಲಕ ಬಿಂಬಿಸುತ್ತಾ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದಕ್ಕೆ ಒತ್ತು ಕೊಟ್ಟರು.
ಕೃಷಿ ಮಹಾ ವಿದ್ಯಾಲಯದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿ ಸತ್ಕರಿಸಿಕೊಂಡ ನಿವೃತ್ತ ಪ್ರಾಧ್ಯಾಪಕ ಡಾ.ವ್ಹಿ.ಪಿ.ಬದ್ನೂರ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತಿನ ಅರಿವು ಮೂಡಿಸಿಕೊಂಡು ಅವರ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ.ಪಾರ್ವತಿ ಕುರ್ಲೆ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಕಲಿಯುವಿಕೆಯಲ್ಲಿ ಶಿಕ್ಷಕರೊಂದಿಗಿನ ಬಾಂಧವ್ಯ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಧಿಕಾರಿ ಡಾ. ಭೀಮಪ್ಪ ಎ, ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಹೇಳಿಕೆಯಂತೆ ಶಿಕ್ಷಕ ಮತ್ತು ಶಿಕ್ಷಣ ಕುರಿತು ವಿವರಿಸಿದರು.
ನಂತರ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ನಡೆಸಿದ ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ತೃತೀಯ ವರ್ಷದ ವಿದ್ಯಾರ್ಥಿನಿ ಪ್ರಿಯಾಂಕಾ ತುಪ್ಪದ ಶಿಕ್ಷಕರ ಮಹತ್ವ ಕುರಿತು ಅಲೆಕ್ಸಾಂಡರ್ ಮತ್ತು ಅವರ ಗುರು ಅರಿಸ್ಟಾಟಲ್ ಅವರ ಕೆಲವು ನಿದರ್ಶನಗಳನ್ನು ಹೇಳುವುದರ ಮೂಲಕ ಶಿಕ್ಷಕರ ಪ್ರಾಮುಖ್ಯತೆಯನ್ನು ನೆನೆಪಿಸಿಕೊಂಡರು. ಅದೇ ರೀತಿ ಇನ್ನೋರ್ವ ವಿದ್ಯಾರ್ಥಿ ಮಲ್ಲಿಕಾರ್ಜುನ. ಕಾಮರೆಡ್ಡಿ, ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂದು ಹೇಳುತ್ತಾ ಪ್ರಾಥಮಿಕ ಹಂತದಿಂದ ನಮ್ಮನ್ನು ತಿದ್ದಿ ತೀಡಿ ಸಮಾಜಕ್ಕೆ ಉತ್ತಮ ನಾಗರಿಕರಾಗಿ ನೀಡಿದ ಗುರುಗಳನ್ನು ಸ್ಮರಿಸಿಕೊಂಡು ಅವರಿಗೆ ನಾವು ಋಣಿಯಾಗಿರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಏರ್ಪಡಿಸಿದ ಮನರಂಜನೆ ಆಟಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.