ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ
ಕೊಲ್ಹಾರ:ಸೆ.6:ತಾಲೂಕಿನ ಮಸೂತಿ ಗ್ರಾಮದ ಶ್ರೀ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತೆಲಗಿ ಸದ್ಗುರು ಸದಾನಂದ ಪ್ರೌಢ ಶಾಲೆಯಲ್ಲಿ ಜರುಗಿದ ಪ್ರತಿಭಾ ಕಾರಂಜಿಯಲ್ಲಿ ತೆಲಗಿ ಕ್ಲಸ್ಟರ್ನಲ್ಲಿ ಅತಿಹೆಚ್ಚು ಪ್ರಶಸ್ತಿ ಪಡೆದು ವಿಶೇಷಗಮನ ಸೆಳೆದರು.
ಕಿರಿಯ ಹಾಗೂ ಹಿರಿಯ ವಿಭಾಗದ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಮಕ್ಕಳು ಸ್ಪರ್ಧೆಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಲು ಕಾರಣರಾದ ಸಹಶಿಕ್ಷಕ ಜಗದೀಶ ಸಾಲಳ್ಳಿ ಹಾಗೂ ಮಕ್ಕಳನ್ನು ಇಲಾಖೆ ಅಧಿಕಾರಿಗಳು ಹಾಗೂ ಅತಿಥಿಗಳು ಅಭಿನಂದಿಸಿದರು.ಕಿರಿಯ ವಿಭಾಗದಲ್ಲಿ ಧಾರ್ಮಿಕ ಪಠಣ-ಪ್ರೀತಿ ತೆಲಗಿ,ಭಕ್ತಿಗೀತೆ-ಸನ್ನಿಧಿ ಹಿರೇಮಠ, ಇಂಗ್ಲಿಷ್ ಕಂಠಪಾಠ-ಅನು ಇಂಗಳಗಿ,
ಹಿರಿಯ ವಿಭಾಗದಲ್ಲಿ-ಕನ್ನಡ ಕಂಠಪಾಠ ಸುಶ್ಮಿತಾ ಕಾಗಲ್, ಸಂಸ್ಕøತ ಧಾರ್ಮಿಕ ಪಠಣ ಪೃಥ್ವಿ ಹಿರೇಮಠ,ಕವನ ವಾಚನ ಐಶ್ವರ್ಯ ಹಂಗರಗಿ,ಪ್ರಬಂಧ ರಚನೆ-ಸೃಷ್ಟಿ ಗಣಾಚಾರಿ,ಕಥೆ ಹೇಳುವುದು-ಸೃಷ್ಟಿ ಗೂಗಿಹಾಳ,ದೇಶಭಕ್ತಿ ಗೀತೆ-ವೇದಾ ಹಿರೇಮಠ,ಆಶುಭಾಷಣ-ಸಾಕ್ಷಿ ಮಾಚಕನೂರ,ಭಕ್ತಿಗೀತೆ-ಸುಶ್ಮೀತಾ ಕಾಗಲ್ ಇವರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಂಠಪಾಠ-ಚಿನ್ಮಯಿ ಚನಗೊಂಡ – ದ್ವೀತಿಯ,ಕ್ಲೆಮಾಡಲಿಂಗ್-ಇರಸಂಗಪ್ಪ ಹರಿಜನ್ ದ್ವಿತೀಯ,ಛದ್ಮವೇಷ ಸಮೃದ್ಧಿ ಹಿರೇಮಠ ದ್ವಿತೀಯ,ಆಶುಭಾಷಣ-ಪ್ರೀತಿ ತೆಲಗಿ ದ್ವೀತಿಯ,ಅರೇಬಿಕ್-ರೇಷ್ಮಾ ಮುಲ್ಲಾ ದ್ವೀತಿಯ.ಕಂಠಪಾಠ-ಶ್ರೇಯಾ ಹಿರೇಮಠ ದ್ವೀತಿಯ,ಕ್ಲೆ ಮಾಡಲಿಂಗ್-ಪಂಕಜ ಹರಿಜನ್ ತೃತೀಯ,ಮಿಮಿಗ್ರಿ-ವೇದಾ ಹಿರೇಮಠ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಸಿ ಆರ್ ಪಿ ಆನಂದ ಪವಾರ,ವಾಣಿಶ್ರೀ ಕುಂದರಗಿ,ಬಸವರಾಜ ಚಿಂಚೊಳ್ಳಿ,ಮುಖ್ಯೋಪಾಧ್ಯಾಯರಾದ ಕೆ ಜಿ ಬಾಡಗಿ,ಸಿ ಎ ಗೂಗಿಹಾಳ ಉಪಸ್ಥಿತರಿದ್ದರು